ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 15 ಲಕ್ಷ ಮಹಿಳೆಯರು 2000 ರೂ. ಪಡೆಯಲು ಅರ್ಹರಲ್ಲ: ತಿದ್ದುಪಡಿಗೆ ಇಲ್ಲಿದೆ ಮಾಹಿತಿ
ಕಾಂಗ್ರೆಸ್‌ನ 4ನೇ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ನೋಂದಣಿ ಮಾಡಿಸಿದ 15 ಲಕ್ಷಕ್ಕೂ ಅಧಿಕ ಮಹಿಳೆಯರು 2000 ರೂ. ಪಡೆಯುವುದಕ್ಕೆ ಅನರ್ಹರಾಗಿದ್ದಾರೆ.
ಬೆಂಗಳೂರು (ಆ.29): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆ (ಪ್ರತಿ ಮನೆಯ ಯಜಮಾನಿಗೆ ಮಾಸಿಕ 2000 ರೂ. ಸಹಾಯಧನ) ನಾಳೆ ಬುಧವಾರ (ಆ.30)ಮೈಸೂರಿನಲ್ಲಿ ಉದ್ಘಾಟನೆ ಆಗಲಿದ್ದು, ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆದರೆ, ಈ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ನೋಂದಣಿ ಮಾಡಿಸಿದ 15 ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಲಿದ್ದಾರೆ. ಅದಕ್ಕೆ ಕಾರಣಗಳನ್ನೂ ಸರ್ಕಾರ ತಿಳಿಸಿದೆ.
ಹಾಗಾದರೆ ಗೃಹಲಕ್ಷ್ಮಿ ಯೋಜನೆಯ 2000 ಸಾವಿರ ರೂ. ಹಣ ಪಡೆಯುವುದರಿಂದ ವಂಚಿತರಾಗುವ ಮಹಳೆಯರು ಯಾರು? ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಈಗಾಗಲೇ ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು 1.28 ಕೋಟಿ ಮಹೊಳೆಯರು ಅರ್ಹ ಫಲಾನುಭವಿಗಳು ಇದ್ದಾರೆ. ಅದರಲ್ಲಿ ಈವರೆಗೆ 1.11 ಕೋಟಿ ಫಲಾನುಭವಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಈ ಪೈಕಿ 15 ಲಕ್ಷದಿಂದ 17 ಲಕ್ಷ ಮಹಿಳೆಯರಿಗೆ 2000 ರೂ. ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮನೆ ಮುಂದೆ 'ನಾ ಯಜಮಾನಿ' ರಂಗೋಲಿ ಬಿಡಿಸಿ, ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಿರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
- 15 ಲಕ್ಷ ಮಹಿಳೆಯರು 2000 ರೂ.ನಿಂದ ವಂಚಿತರಾಗಲು ಕಾರಣಗಳು:
- 15 ರಿಂದ 17 ಲಕ್ಷ ಮಹಿಳೆಯರು 2000 ರೂ. ಹಣದಿಂದ ವಂಚಿತರಾಗಲು ಕಾರಣ ಕೆವೈಸಿ ಸಮಸ್ಯೆಯಾಗಿದೆ.
- ಆಧಾರ್ ಕಾರ್ಡ್ ಅಪ್ಡೇಟ್ ಮಾಡದ ಕಾರಣ ನೋಂದಣಿ ಕ್ಯಾನ್ಸಲ್
- ಆಧಾರ್ ಕಾರ್ಡ್‌ಗೆ ಅಕೌಂಟ್ ಲಿಂಕ್ ಮಾಡದಿರುವ ಕಾರಣ ನೋಂದಣಿ ಕ್ಯಾನ್ಸಲ್ ಆಗಿದೆ.
- ಪಡಿತರ ಚೀಟಿ ಅಪ್ಡೇಟ್ ಮಾಡದೇ ಇರುವುದರಿಂದಲೂ ನೋಂದಣಿ ಕ್ಯಾನ್ಸಲ್ ಮಾಡಲಾಗಿದೆ.
- ಜೊತೆಗೆ, ಕೆಲ ಯಜಮಾನಿಯರು ಪಡಿತರ ಚೀಟಿಯಲ್ಲಿ ಹೆಸರು ಮೃತ ಪಟ್ಟಿದ್ದಾರೆ.
- ಮೃತಪಟ್ಟಿರುವವರ ಹೆಸರನ್ನ ಡಿಲಿಟ್ ಮಾಡಿಸಿ ಅಪ್ಡೇಟ್ ಮಾಡಿಸದೇ ಇರುವ ಫಲಾನುಭವಿಗಳ ನೋಂದಣಿ ಕೂಡ ಕ್ಯಾನ್ಸಲ್ ಆಗಿದೆ.
- ಈ ತಿಂಗಳು ನೋಂದಣಿ ಕ್ಯಾನ್ಸಲ್ ಆದವರು ಮುಂದಿನ ತಿಂಗಳಿಂದ 2000 ರೂ. ಪಡೆಯಲು ಕೂಡಲೇ ಅಗತ್ಯ ತಿದ್ದುಪಡಿ ಮಾಡಿಕೊಳ್ಳಬೇಕು.
- ಆಗಸ್ಟ್ ತಿಂಗಳ 2000 ರೂ. ಹಣಕ್ಕೆ ಅರ್ಜಿ ಸಲ್ಲಿಕೆ ಆ.28 ಕೊನೆಯಾಗಿದೆ.
ಆಗಸ್ಟ್ ತಿಂಗಳು ವಂಚಿತರಾದವರು ಏನು ಮಾಡಬೇಕು?
ಕೂಡಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ, ಇನ್ನಂದು ಬಾರಿ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿದಲ್ಲಿ ಸೆಪ್ಟೆಂಬರ್ ತಿಂಗಳ 2000 ಹಣ ಬರುತ್ತದೆ.
ಇನ್ನು ಬ್ಯಾಂಕ್ ಅಕೌಂಟ್ ಅಪ್ಡೇಟ್ ಮಾಡಿಸಿ ನೋಂದಣಿ ಮಾಡಲು ಅವಕಾಶ ನೀಡಲಾಗಿದೆ.
ಪಡಿತರ ಚೀಟಿಯ ಮನೆ ಯಜಮಾನರನ್ನು ಬದಲಿಸಿ ಮತ್ತೊಮ್ಮೆ ನೋಂದಣಿ ಮಾಡಿಸಿಕೊಳ್ಳಬಹುದು.
ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಸೆಪ್ಟಂಬರ್ ತಿಂಗಳಿಂದ 2000 ರೂ. ಹಣ ಪಡೆಯಲು ಅರ್ಹರಾಗಿರುತ್ತಾರೆ.
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಜಾರಿಗೆ ಬಿಜೆಪಿ ನಾಯಕನ ಸಿದ್ಧತೆ..?
ನಾಳೆ ಗೃಹಲಕ್ಷ್ಮೀ ಯೋಜನೆಗೆ ಅಧಿಕೃತ ಚಾಲನೆ: ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ನಗರದಲ್ಲಿ ನಾಳೆ ಬುಧವಾರ (ಆ.30) ಗೃಹಲಕ್ಷ್ಮಿ ಯೋಜನೆಗೆ (ಮನೆ ಯಜಮಾನಗೆ 2000 ರೂ.) ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಈ ವೇಳೆ ಕೆಲವರಿಗೆ ಸ್ಮಾರ್ಟ್ ಕಾರ್ಡ್ ಕೂಡ ವಿತರಣೆ ಮಾಡಲಾಗುತ್ತದೆ. ನಂತರ, ಆಗಸ್ಟ್ ತಿಂಗಳ 2000 ರೂ. ಹಣವನ್ನು ಮಹಿಳೆಯ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.