Asianet Suvarna News Asianet Suvarna News

ದರ್ಶನ್ ಭೇಟಿಗೆ ಹುಬ್ಬಳ್ಳಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಅಜ್ಜಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನೆಚ್ಚಿನ ನಟ ದರ್ಸನ್ ತೂಗುದೀಪ ಅವರನ್ನ ಭೇಟಿಯಾಗಲು ದೂರದ ಹುಬ್ಬಳ್ಳಿಯಿಂದ ಬಂದ ಅಜ್ಜಿ! ದರ್ಶನ್ ಭೇಟಿಗೆ ಅವಕಾಶ ಕೊಡುವಂತೆ ಪೊಲೀಸರ ಬಳಿ ವೃದ್ಧೆ ಅಳಲು

Grandma came to parappa's agrahara Jail from hubli to visit actor Darshan rav
Author
First Published Jul 1, 2024, 1:01 PM IST

ಬೆಂಗಳೂರು (ಜು.1): ಅಶ್ಲೀಲ ಮೆಸೇಜ್ ಕಳಿಸಿದ್ದನೆಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯ ಎಂಬಾತನನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸದ್ಯ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್. ದರ್ಶನ್ ಬಂಧನದ ಬಳಿಕ ಕೋಟ್ಯಂತರ ಅಭಿಮಾನಿಗಳು ಸಹ ದುಃಖಕ್ಕೊಳಗಾಗಿದ್ದಾರೆ. ತಮ್ಮ ನೆಚ್ಚಿನ ನಟ ದರ್ಶನ್(Kannada actor darshan) ಭೇಟಿಯಾಗಲು ಪರಪ್ಪನ ಅಗ್ರಹಾರ(Parappana agrahara jail)ಕ್ಕೆ ಅಭಿಮಾನಿಳು ಬರುತ್ತಲೇ ಇದ್ದಾರೆ. ಪರಪ್ಪನ ಅಗ್ರಹಾರ ಜೈಲಿನೊಳಗೆ ಯಾರಿಗೂ ಪ್ರವೇಶ ಇಲ್ಲದಿದ್ದರೂ ಸಹ ಜೈಲಿನ ಮುಂಭಾಗದಲ್ಲಿ ನಿಂತು ಕಣ್ಣೀರು ಸುರಿಸಿ, ದೇವರನ್ನ ಪ್ರಾರ್ಥಿಸಿ ವಾಪಸ್ ಆಗುತ್ತಿದ್ದಾರೆ. ನಿನ್ನೆಯಷ್ಟೇ ದರ್ಶನ್ ಭೇಟಿಗೆ ಬಂದಿದ್ದ ದಾಸಪ್ಪ, ಜೈಲಿನ ಹೊರಭಾಗದಲ್ಲಿ ಶಂಖ ಊದಿ, ದೇವರ ಪ್ರಕರಣದಲ್ಲಿ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿದ್ದರು.ಇದೀಗ ದರ್ಶನ್ ಭೇಟಿಗೆ ದೂರದ ಹುಬ್ಬಳ್ಳಿಯಿಂದ ವಯೋವೃದ್ಧೆಯೊಬ್ಬರು ಪರಪ್ಪನ ಅಗ್ರಹಾರಕ್ಕೆ ಬಂದ ಘಟನೆ ನಡೆದಿದೆ.

ರಾಜೇಶ್ವರಿ, ನಟ ದರ್ಶನ್ ನೋಡಲು ಬಂದಿರೋ ಅಜ್ಜಿ. ಮೂಲತಃ ಹುಬ್ಬಳ್ಳಿಯವರಾದ ವೃದ್ಧೆ. ಜೈಲು ಬಳಿ ಬಂದು ದರ್ಶನ್ ಭೇಟಿ ಮಾಡಲು ಅವಕಾಶ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ನಾನು ತುಂಬಾ ದೂರದಿಂದ ಬಂದಿದ್ದೇನೆ ದರ್ಶನ್ನರನ್ನ ಭೇಟಿ ಮಾಡಬೇಕು ಅವಕಾಶ ಮಾಡಿಕೊಡಿ ಎಂದು ಪರಪ್ಪನ ಅಗ್ರಹಾರ ಜೈಲಿನ ಚೆಕ್‌ಪೋಸ್ಟ್ ಬಳಿ ಪೊಲೀಸರ ಬಳಿ ಕೇಳಿಕೊಳ್ಳುತ್ತಿರುವ ವೃದ್ಧೆ. 

ದರ್ಶನ್ ರನ್ನ ಕಾಣಲು ಬಂದ ದಾಸಪ್ಪ; ಪರಪ್ಪನ ಅಗ್ರಹಾರ ಜೈಲಿನ ಮುಂದೆ ಶಂಖ ಊದಿ ಬಿಡುಗಡೆಗೆ ದೇವರ ಮೊರೆ!

ದರ್ಶನ್ ಅವರನ್ನ ಹಿಂದೆ ಎರಡು ಬಾರಿ ಭೇಟಿ ಮಾಡಿದ್ದೇನೆ. ಅವನು ತಪ್ಪು ಮಾಡಿದ್ದಾನೆ ಆದರೆ ಶಿಕ್ಷೆ ಕೊಡಬೇಡಿ. ಎಲ್ಲರೂ ತಪ್ಪು ಮಾಡ್ತಾರೆ ಅವನು ಸಹ ತಪ್ಪು ಮಾಡಿದ್ದಾನೆ. ದಯವಿಟ್ಟು ದರ್ಶನ್ ಭೇಟಿ ಮಾಡಲು ಅವಕಾಶ ಮಾಡಿಕೊಡಿ ಎಂದ ಅಂಗಲಾಚುತ್ತಿರುವ ವೃದ್ಧೆ. ಆದರೆ ದರ್ಶನ್ ಭೇಟಿಗೆ ಯಾರಿಗೂ ಅವಕಾಶ ಇಲ್ಲ. ತಾಯಿ-ಸಹೋದರನ ಹೊರತುಪಡಿಸಿ ಯಾರನ್ನೂ ಒಳಗೆ ಬಿಡದ ಜೈಲು ಸಿಬ್ಬಂದಿ.

Latest Videos
Follow Us:
Download App:
  • android
  • ios