ರೈತರಿಗೆ ಅನ್ಯಾಯವಾಗಲು ಪ್ರಧಾನಿ ನರೇಂದ್ರ ಮೋದಿಯವರಾಗಲಿ ನಮ್ಮ ಸರ್ಕಾರವಾಗಲಿ ಬಿಡುವುದಿಲ್ಲ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನ ಪರಿಷತ್ (ಡಿ.09): ರೈತರಿಗೆ ಯಾವುದೇ ರೀತಿ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಕರ್ನಾಟಕ ಭೂ ಸುಧಾರಣೆ (ಎರಡನೇ ತಿದ್ದುಪಡಿ) ವಿಧೇಯಕದ ಮೇಲೆ ನಡೆಯುತ್ತಿದ್ದ ಚರ್ಚೆಯ ವೇಳೆ ಈ ಭರವಸೆ ನೀಡಿದ ಅವರು, ತಾವಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ರೈತರಿಗೆ ಅನ್ಯಾಯ ಆಗಲು ಎಂದೂ ಬಿಡುವುದಿಲ್ಲ ಎಂದರು.
ಈ ಹಿಂದೆ ಮಸೂದೆಯಲ್ಲಿದ್ದ 79ಎ ಮತ್ತು 79ಬಿ ಅಂಶಗಳು ನೆರೆಯ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಇಲ್ಲ. ಅವುಗಳನ್ನು ತೆಗೆದು ಹಾಕಲಾಗಿದೆ. ತಿದ್ದುಪಡಿ ಮಸೂದೆ ಜಾರಿಗೆ ತರುವ ಮುನ್ನ ಈ ಎಲ್ಲ ರಾಜ್ಯಗಳಿಗೆ ಹೋಗಿ ಅಧ್ಯಯನ ಮಾಡಿದ ನಂತರವೇ ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಬಿಜೆಪಿ ಸೇರ್ಪಡೆ, ಸಿಎಂ ಭೇಟಿ ಮಾಡಿಸಿದ ಸಚಿವ ಸುಧಾಕರ್...!
ನೀರಾವರಿ ಭೂಮಿ ಖರೀದಿಸಿದರೆ ಅಂತಹ ಭೂಮಿಯಲ್ಲಿ ನೀರಾವರಿ ಕೃಷಿಯನ್ನೇ ಮಾಡಬೇಕು ಎಂಬ ಅಂಶ ವಿಧೇಯಕದಲ್ಲಿ ಇದೆ. ಇವತ್ತು ರೈತರು ಸಾಕಷ್ಟುಜಾಗೃತರಾಗಿದ್ದಾರೆ, ಬುದ್ಧಿವಂತರಾಗಿದ್ದಾರೆ. ಯಾರೋ ಬಂದು ಹಣ ಕೊಡುತ್ತೇನೆ ಎಂದು ಕೇಳಿದ ತಕ್ಷಣ ಭೂಮಿಯನ್ನು ಮಾರಾಟ ಮಾಡುವುದಿಲ್ಲ ಎಂದರು. ರಾಜ್ಯದಲ್ಲಿ ಕೈಗಾರಿಕೆ ಬೆಳೆಸುವ ಉದ್ದೇಶದಿಂದ ಶೇ.2ರಷ್ಟುಭೂಮಿಯನ್ನು ಸಹ ನಾವು ಬಳಸಿಕೊಂಡಿಲ್ಲ, ರಾಜ್ಯದಲ್ಲಿ ಕೈಗಾರಿಕೆ ಬೆಳೆಯಲು ಭೂಮಿ ತೆಗೆದುಕೊಳ್ಳಲೇಬೇಕಾಗುತ್ತದೆ ಎಂದು ಹೇಳಿದರು.
