ಕಳೆದ ವರ್ಷ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುವ ವಿಚಾರ ಕೋಮುಸಂಘರ್ಷಕ್ಕೆ ಕಾರಣವಾಗಿ ರಾಜ್ಯಾದ್ಯಂತ ಗಲಭೆಗೆ ಕಾರಣವಾಗಿತ್ತು.ಇದೀಗ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬೆಂಗಳೂರು (ಅ.22) ಕಳೆದ ವರ್ಷ ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುವ ವಿಚಾರ ಕೋಮುಸಂಘರ್ಷಕ್ಕೆ ಕಾರಣವಾಗಿ ರಾಜ್ಯಾದ್ಯಂತ ಗಲಭೆಗೆ ಕಾರಣವಾಗಿತ್ತು.ಇದೀಗ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇದೇ ತಿಂಗಳು ಅ.28,29ರಂದು ನಡೆಯಲಿರುವ ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ಕೆಲವು ಷರತ್ತುಗಳ ಜೊತೆಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೊಟ್ಟಿರುವುದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು. ಈ ಹಿಂದೆಯೇ ಇದೇ ವಿಚಾರಕ್ಕೆ ಗಲಾಟೆಯಾಗಿತ್ತು. ರಾಜ್ಯಾದ್ಯಂತ ನಡೆದ ಕೋಮುಗಲಭೆಯಲ್ಲಿ ಕಲ್ಲು ತೂರಾಟ ನಡೆದು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟಾಗಿತ್ತು. ಈಗ ಮತ್ತೆ ಹಿಜಾಬ್ ಅನುಮತಿ ಕೊಟ್ಟಿರುವುದು ಸರಿಯಲ್ಲ ಸರ್ಕಾರ ಇದನ್ನ ಕೂಡಲೇ ಹಿಂಪಡೆಯುವಂತೆ ಹಿಂದೂ ಜನಜಾಗೃತಿ ಸಂಘಟನೆ ಆಗ್ರಹಿಸಿದೆ.

 ನಿಗಮ ಮಂಡಳಿ ಪರೀಕ್ಷೆಗೆ ಕಠಿಣ ವಸ್ತ್ರಸಂಹಿತೆ ಜಾರಿ; ಹಿಜಾಬ್‌ ಧರಿಸಿದ್ರೆ ತಪಾಸಣೆಗೆ 1 ಗಂಟೆ ಮುಂಚೆ ಬರಬೇಕು!

ಹಿಜಾಬ್ ಗೆ ಕೊಟ್ಟಿರುವ ಅನುಮತಿ ವಾಪಾಸ್ ಪಡೆಯಬೇಕು. ಇಲ್ಲವಾದರೆ ಪ್ರತಿಭಟನೆ ಹಾದಿ ಹಿಡಿಯುತ್ತೇವೆ ಅಂತ ಖಡಕ್ ವಾರ್ನಿಂಗ್ ಮಾಡಿರುವ ಹಿಂದೂಪರ ಸಂಘಟನೆಗಳು. ತಣ್ಣಗಾಗಿದ್ದ ಹಿಜಾಬ್ ವಿಚಾರ ಮಾತ್ರೆ ಮುನ್ನಲೆಗೆ ಬಂದಿದ್ದು. ಹಲವರಲ್ಲಿ ಈಗ ರಾಜ್ಯದಲ್ಲಿ ಮತ್ತೊಂದು ಧರ್ಮದಂಗಲ್‌ಗೆ ಹಿಜಾಬ್ ಆಗುತ್ತಾ ಎಂಬ ಆತಂಕ ಮೂಡಿಸಿದೆ.