ಬೆಂಗಳೂರು(ಅ.29): ನಿರ್ಗತಿಕರ ಆಶ್ರಯ ತಾಣವಾಗಿರುವ ನಗರದ ನಿರಾಶ್ರಿತರ ಪರಿಹಾರ ಕೇಂದ್ರದ ಜಮೀನನ್ನು ಯಾವುದೇ ಕಾರಣಕ್ಕೂ ಒತ್ತುವರಿಯಾಗಲು ಅವಕಾಶ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ ಮಾಗಡಿ ರಸ್ತೆಯ ಸುಮ್ಮನಹಳ್ಳಿ ವೃತ್ತದ ಬಳಿಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ನಿರಾಶ್ರಿತರಿಗೆ ಸಿಹಿ ವಿತರಿಸಿದರು. ಇದೇ ವೇಳೆ ಕೇಂದ್ರದಲ್ಲಿರುವ ಅನ್ನಪೂರ್ಣ ಭೋಜನಾಲಯಕ್ಕೆ ಭೇಟಿ ನೀಡಿ ಅನ್ನ, ಸಾರು, ಮಜ್ಜಿಗೆ ಸವಿದರು.

'ಸಿದ್ದರಾಮಯ್ಯಗೆ ಕೆಲಸವಿಲ್ಲ ಹೀಗಾಗಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ

ಈ ವೇಳೆ ಮಾತನಾಡಿದ ಅವರು, 1946ರಲ್ಲಿ ಜಯಚಾಮ ರಾಜೇಂದ್ರ ಒಡೆಯರ್‌ ಕೇಂದ್ರವನ್ನು ಆರಂಭಿಸಿದ್ದರು. ಸುಮಾರು 161 ಎಕರೆ ಭೂಮಿ ಇರುವ ಈ ಆಸ್ತಿಯನ್ನು ಭೂಗಳ್ಳರು ಒತ್ತುವರಿ ಮಾಡಿಕೊಳ್ಳಲು ಸಂಚು ರೂಪಿಸುತ್ತಿದ್ದು, ಭೂಗಳ್ಳರ ಪಾಲಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಮಾಗಡಿ ರಸ್ತೆಯ ಸುಮ್ಮನಹಳ್ಳಿ ವೃತ್ತದ ಬಳಿಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಸಿಹಿ ವಿತರಿಸಿದರು.

ಉಪಚುನಾವಣೆ ನಿಗದಿ: ಬಿಜೆಪಿಯಲ್ಲಿ ಬೇಗುದಿ, ಸಂಕಷ್ಟದಲ್ಲಿ ಲಕ್ಷ್ಮಣ್ ಸವದಿ..!.

ಭಿಕ್ಷಾಟನೆ ಮಾಡುವುದು ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಭಿಕ್ಷುಕರನ್ನು ಗುರುತಿಸಿ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದು ಊಟ, ವಸತಿ ನೀಡಿ ತರಬೇತಿ ನೀಡಲಾಗುತ್ತಿದೆ. ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 150 ಮಹಿಳೆಯರು, 604 ಪುರಷರು ಸೇರಿ 754 ಮಂದಿ ಇದ್ದಾರೆ. ವಿಜಯಪುರ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ 14 ಕೇಂದ್ರಗಳಲ್ಲಿ ಒಟ್ಟಾರೆ 1,850 ಜನರಿದ್ದಾರೆ ಎಂದು ವಿವರಿಸಿದ್ದಾರೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸರ್ಕಾರಗಳು ಸೆಸ್‌ ಸಂಗ್ರಹಿಸುತ್ತಿದ್ದು, ಸುಮಾರು 164 ಕೋಟಿ ರು. ಸೆಸ್ ಹಣ ಬಾಕಿ ಉಳಿಸಿಕೊಂಡಿವೆ. ಅದರಲ್ಲಿ ಬಿಬಿಎಂಪಿ 114 ಕೋಟಿ ರು. ನೀಡಬೇಕಿದ್ದು, ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.

ಈ ಹಿಂದೆ ಕೂಡಾ ಸಮಾಜ ಕಲ್ಯಾಣ ಸಚಿವನಾಗಿ ಕೆಲಸ ನಿರ್ವಹಿಸಿದ್ದೆ. ಆಗ ಈ ಪರಿಹಾರ ಕೇಂದ್ರವನ್ನು ಅಭಿವೃದ್ಧಿ ಮಾಡಬೇಕೆಂದು ಕನಸಿತ್ತು. ಪ್ರಸ್ತುತ ಈ ಕೇಂದ್ರದಲ್ಲಿ ಬಾಳೆ, ಅಡಕೆ ಸೇರಿ ತರಕಾರಿ ಬೆಳೆಯಲಾಗುತ್ತಿದೆ. ಪ್ರತಿ ವರ್ಷ ನಮ್ಮ ಕುಟುಂಬದ ಜತೆ ಹಬ್ಬ ಆಚರಿಸುತ್ತೇನೆ. ಆದರೆ, ಈ ಬಾರಿ ನಿರಾಶ್ರಿತರ ಜತೆ ಹಬ್ಬ ಆಚರಿಸಲು ದಿಢೀರ್‌ ಭೇಟಿ ನೀಡಿದ್ದೇನೆ ಎಂದರು. ಇದೇ ವೇಳೆ ಕೇಂದ್ರದಲ್ಲಿರುವ ಅನ್ನಪೂರ್ಣ ಭೋಜನಾಲಯಕ್ಕೆ ಭೇಟಿ ನೀಡಿ ಅನ್ನ, ಸಾರು, ಮಜ್ಜಿಗೆ ಸವಿದರು.

ಡಿಸಿಎಂ ಕೈ ಹಿಡಿದು ಕಣ್ಣೀರಿಟ್ಟವೃದ್ಧೆ

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಾಲಿನಲ್ಲಿ ಕುಳಿತಿದ್ದ ಪ್ರತಿಯೊಬ್ಬ ನಿರಾಶ್ರಿತರ ಹೆಸರನ್ನು ಕೇಳುತ್ತಿದ್ದರು. ಈ ವೇಳೆ ಕೇಂದ್ರದಲ್ಲಿರುವ ಬೆಳಗಾವಿ ಜಿಲ್ಲೆಯ ಮಮದಾಪುರ ಗ್ರಾಮದ ಪ್ರಭಾವತಿ ಎಂಬ ವೃದ್ಧೆ ಡಿಸಿಎಂ ಕೈ ಹಿಡಿದು ಕಣ್ಣೀರಿಡುತ್ತಾ, ದಯವಿಟ್ಟು ನಮ್ಮ ಊರಿಗೆ ಕಳಿಸಿ, ನಮ್ಮ ಜನರ ಜತೆ ಬದುಕಬೇಕೆಂಬ ಆಸೆ ಇದೆ ಎಂದರು. ಕೂಡಲೇ ನಿರಾಶ್ರಿತರ ಕೇಂದ್ರದ ಅಧಿಕಾರಿಗಳ ಬಳಿ ವೃದ್ಧೆಯ ಮಾಹಿತಿ ಕೇಳಿ ಬೆಳಗಾವಿಯ ಸದಲಗಾ ಪೊಲೀಸ್‌ ಠಾಣೆಗೆ ಕರೆ ಮಾಡಿ ವೃದ್ಧೆಯ ಸಂಬಂಧಿಕರ ಬಗ್ಗೆ ಮಾಹಿತಿ ಪಡೆದರು. ವೃದ್ಧೆಯನ್ನು ಶೀಘ್ರವೇ ಊರಿಗೆ ಬಿಟ್ಟು ಬನ್ನಿ. ಅದು ಸಾಧ್ಯವಾಗದಿದ್ದಲ್ಲಿ ಬೆಳಗಾವಿಯ ನಿರಾಶ್ರಿತರ ಕೇಂದ್ರಕ್ಕೆ ರವಾನಿಸಿ ಎಂದು ಸಿಬ್ಬಂದಿಗೆ ಸೂಚನೆ ನೀಡಿದರು.

ಡಿಕೆಶಿ ಕೈಯಲ್ಲಿ JDS ಬಾವುಟ: ದಳಪತಿಗಳ ವಿರುದ್ಧ ಚೆಲುವರಾಯಸ್ವಾಮಿ ಕೆಂಡ