ರಾಜ್ಯಪಾಲರು ಕನ್ನಡ ನಾಮಫಲಕ ಸುಗ್ರಿವಾಜ್ಞೆ ವಾಪಸ್ ಕಳಿಸಲು ಕಾರಣವೇನು?
ರಾಜ್ಯ ಸರ್ಕಾರದ ನಾಮಫಲಕದಲ್ಲಿ ಶೇ.60 ಕನ್ನಡ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕದೇ ವಾಪಸ್ ಕಳಿಸಿದ್ದಕ್ಕೆ ಕಾರಣ ಇಲ್ಲಿದೆ ನೋಡಿ..
ಬೆಂಗಳೂರು (ಜ.31): ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ರಾಜ್ಯದಲ್ಲಿನ ಎಲ್ಲ ವಾಣಿಜ್ಯ ಮಳಿಗೆಗಳ ಮೇಲಿನ ನಾಮಫಲಕಗಳಲ್ಲಿ ಶೇ.60 ಕನ್ನಡ ಬಳಕೆ ಮಾಡುವಂತೆ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮೋದನೆ ನೀಡದೇ ವಾಪಸ್ ಸರ್ಕಾರಕ್ಕೆ ಕಳುಹಿಸಿದ್ದರು. ಆದರೆ, ಸುಗ್ರೀವಾಜ್ಞೆ ವಾಪಸ್ ಕಳಿಸಲು ಕಾರಣವೇನು ಎಂಬುದರ ಮಾಹಿತಿ ಇಲ್ಲಿದೆ ನೋಡಿ..
ರಾಜ್ಯ ಸರ್ಕಾರದ ಕನ್ನಡ ನಾಮಫಲಕ ವಿಚಾರವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ನಿಯಮ 2022 ಸೆಕ್ಷನ್ ಷ,17(6)ಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಹೊರಡಿಸಿತ್ತು. ಈ ಸುಗ್ರಿವಾಜ್ಞೆಗೆ ರಾಜ್ಯಪಾಲರ ಅಂಕಿತ ಹಾಕಲು ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿತ್ತು. ಆದರೆ, ಅಧಿವೇಶನ ಕರೆದ ಸಂದರ್ಭದಲ್ಲಿ ಸುಗ್ರಿವಾಜ್ಞೆಗೆ ಸಹಿ ಹಾಕಲು ಬರೋದಿಲ್ಲ ಎಂದು ಸಹಿ ಹಾಕದೆ ವಾಪಸ್ ಕಳುಹಿಸಿದ್ದಾರೆ. ಆದರೆ ರಾಜ್ಯ ಸರ್ಕಾರದ ಸುಗ್ರಿವಾಜ್ಞೆಯನ್ನ ರಾಜ್ಯಪಾಲರ ಅಂಕಿತಕ್ಕೆ ಸಹಿ ಹಾಕಲು ಕಳುಹಿಸಿದ್ದಾಗ ಇನ್ನೂ ಅಧಿವೇಶನ ಕರೆದಿರಲಿಲ್ಲ. ಈಗ ರಾಜ್ಯಪಾಲರು ಸುಗ್ರಿವಾಜ್ಞೆಯನ್ನ ಪರಿಶೀಲಿಸಿ ಅಂಕಿತದೊಂದಿಗೆ ಕಳುಹಿಸಿಕೊಡುವ ಸಂದರ್ಭದಲ್ಲಿ, ವಿಧಾನಮಂಡಲದ ಅಧಿವೇಶನ ಕರೆದಿರುವ ಹಿನ್ನೆಲೆಯಲ್ಲಿ ಅಂಕಿತ ಹಾಕದೇ ವಾಪಸ್ ಕಳುಹಿಸಿದ್ದಾರೆ.
ಬೆಳಗಾವಿ: ಟಾಟಾಏಸ್ ವಾಹನ ಡಿಕ್ಕಿಯಾಗಿ ಕಾಲೇಜು ಹುಡುಗಿ ಸಾವು
ಜನವರಿ 8 ರಂದು ಸುಗ್ರಿವಾಜ್ಞೆಗೆ ಅಂಕಿತ ಹಾಕಲು ರಾಜ್ಯ ಸರ್ಕಾರದಿಂದ ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟಿತ್ತು. ಆಗ ಅಧಿವೇಶನ ದಿನಾಂಕ ಇನ್ನೂ ಘೋಷಣೆ ಯಾಗಿರಲಿಲ್ಲ. ಅಧಿವೇಶನ ಕರೆದಾಗ ಸುಗ್ರಿವಾಜ್ಞೆಗೆ ಸಹಿ ಹಾಕಲು ಬರೋದಿಲ್ಲ ಎಂದು ಹೇಳಿ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿದ್ದಾರೆ. ಆದರೆ, ಸುಕ್ರೀವಾಜ್ಞೆಗೆ ಅಂಕಿತ ಹಾಕದೇ ವಾಪಸ್ ಕಳುಹಿಸುವ ಮೂಲಕ ಕನ್ನಡಿಗರ ಹೋರಾಟಕ್ಕೆ ರಾಜ್ಯಪಾಲರು ಗೌರವ ಕೊಡುವುದಕ್ಕೆ ಹಿಂದೇಟು ಹಾಕಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಈಗ ಎಲ್ಲದಕ್ಕೂ ಸ್ಪಷ್ಟನೆ ಸಿಕ್ಕಂತಾಗಿದೆ.
ರಾಜ್ಯದಲ್ಲಿ ಇನ್ಮುಂದೆ ನಾಮಫಲಕದಲ್ಲಿ ಶೇ.60 ಪರ್ಸೆಂಟ್ ಕಡ್ಡಾಯವಾಗಿ ಕನ್ನಡ ಇರಬೇಕು ಎಂದು ರಾಜ್ಯ ಸರ್ಕಾರ ಸಂಪುಟ ಸಭೆ ನಿರ್ಣಯ ಕೈಗೊಂಡು ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಪ್ರಸ್ತುತ ಇರುವ ಕಾಯಿದೆಯಲ್ಲಿ 50-50 ಅನುಪಾತದಲ್ಲಿ ಕನ್ನಡ ಬಳಕೆ ಕಡ್ಡಾಯವಾಗಿತ್ತು. ಇದೀಗ ವಾಣಿಜ್ಯ ಮಳಿಗೆಗಳಿಗೆ ನಾಮಫಲಕ ಹಾಕುವ ವಿಚಾರದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ತಿದ್ದುಪಡಿ -2024 ಜಾರಿಗೆ ತರಲಾಗುತ್ತಿದೆ. ಇದೀಗ ನಾಮಫಲಕದಲ್ಲಿ ಶೇ.60 ಕನ್ನಡ ಹಾಗೂ ಶೇ.40ರಷ್ಟು ಅನ್ಯ ಭಾಷೆ ಅಳವಡಿಕೆ ಬಗ್ಗೆ ತಿರ್ಮಾನ ಮಾಡಲಾಗಿದೆ. ಆದ್ದರಿಂದ ಎಲ್ಲ ನಾಮಫಲಕದಲ್ಲಿ ಶೇ.60 ಪರ್ಸೆಂಟ್ ಕನ್ನಡ ಕಡ್ಡಾಯವಾಗಿ ಬಳಕೆ ಮಾಡಬೇಕು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಿಗೆ ಕನ್ನಡ ನಾಮಫಲಕ ಖಡ್ಡಾಯಕ್ಕೆ ಸೂಚನೆ
ಅಧಿವೇಶನದಲ್ಲಿ ವಿಧೇಯಕವಾಗಿ ಮಂಡಿಸಿ: ಇನ್ನು ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್ ಅಧಿವೇಶನವನ್ನು ಕರೆದಿದೆ. ಬಜೆಟ್ ಅಧಿವೇಶನದಲ್ಲಿಯೇ ಈ ಕನ್ನಡ ನಾಮಫಲಕ ಶೇ.60 ಬಳಕೆ ಕುರಿತಾಗಿ ವಿಧೇಯಕವನ್ನು ಮಂಡಿಸುವಂತೆ ಹಾಗೂ ಎರಡೂ ಮನೆಗಳ ಒಪ್ಪಿಗೆ ಪಡೆದು ನಂತರ ಅಂಕಿತಕ್ಕೆ ಕಳುಹಿಸುವಂತೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ನಾಮಫಲಕದಲ್ಲಿ ಕನ್ನಡವೇ ಸಾರ್ವಭೌಮ ಸ್ಥಾನ ಪಡೆಯುವುದಕ್ಕೆ ಇನ್ನಷ್ಟು ದಿನಗಳು ಕಾಯಬೇಕಾಗುತ್ತದೆ.