ಅನಾರೋಗ್ಯ ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ರಾತ್ರಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ಪಡೆದ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.

ಬೆಂಗಳೂರು (ಆ.14): ಅನಾರೋಗ್ಯ ಹಿನ್ನೆಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ರಾತ್ರಿ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ಪಡೆದ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.

ನಿನ್ನೆ ರಾತ್ರಿ ಸುಮಾರು 10 ಗಂಟೆ ಹೃದಯ ಸಂಬಂಧಿ ಸಮಸ್ಯೆಯಿಂದ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾದರು. ಆಸ್ಪತ್ರೆಯ ಡಿಲಕ್ಸ್ ವಾರ್ಡ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಡಿಸ್ಚಾರ್ಜ್ ಆಗಿ ರಾಜಭವನಕ್ಕೆ ತೆರಳಿದರು. ರಾತ್ರಿ 10 ರಿಂದ 12:50 ರವರೆಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. .

ಯುಜನರಲ್ಲಿ ಹೃದಯಾಘಾತ 22% ಹೆಚ್ಚಳ, ಮಹಿಳೆಯರಲ್ಲಿ ಶೇ.8 ಏರಿಕೆ: ಡಾ.ಸಿ.ಎನ್‌.ಮಂಜುನಾಥ್‌

ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆವಹಿಸಿ: ಡಾ.ಮಂಜುನಾಥ

ಮನುಷ್ಯ ಕಾಯಿಲೆ ಬಂದ ಮೇಲೆ ಚಿಕಿತ್ಸೆ ಪಡೆಯುವ ಬದಲು ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮುನ್ನೆಚ್ಚರಿಕೆ ವಹಿಸಿದರೆ ಹೆಚ್ಚು ಕಾಲ ಆರೋಗ್ಯವಂತರಾಗಿರಬಹುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದರು.

ಕಳೆದ 15 ವರ್ಷದಿಂದ ಈಚೆಗೆ 35 ವರ್ಷದಿಂದ 45 ವರ್ಷದೊಳಗಿನವರಲ್ಲಿ ಹೃದಯಘಾತ ಸಂಭವಿಸುತ್ತಿರುವುದು ಆಂತಕಕಾರಿ ಬೆಳವಣಿಗೆ. ಯಾರಾದರೂ ಗಣ್ಯವ್ಯಕ್ತಿಗಳು ಸತ್ತಾಗ ಚರ್ಚೆಗೆ ಬರುತ್ತದೆ. ಕಳೆದ 6 ವರ್ಷದಲ್ಲಿ ಐದುವರೆ ಸಾವಿರ ಯುವಕರನ್ನು ಅಧ್ಯಯನ ಮಾಡಿದ್ದೇವೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಯುವಜನರಲ್ಲಿ ಹಾರ್ಟ್‌ಅಟ್ಯಾಕ್ ಹೆಚ್ತಿರೋದ್ಯಾಕೆ?

ಈ ಪೈಕಿ ಶೇ. 8ರಷ್ಟುಮಹಿಳೆಯರಿಗೆ ಹೃದಯಘಾತವಾಗುತ್ತಿದೆ. ಹೆಂಗಸರಲ್ಲಿ ಹೆಚ್ಚಾಗಿ ಉದಾಸೀನ ಮನೋಭಾವದಿಂದ ಆಸ್ಪತ್ರೆಗೆ ತೆರಳಿ ಚಕಿತ್ಸೆ ಪಡೆಯದೆ ಸಾವನ್ನಪ್ಪುತ್ತಿದ್ದರೆ. ಕೆಲವರಿಗೆ ಅನುವಂಶಿಯತೆಯಿಂದಲೂ ಹೃದಯಘಾತವಾಗುತ್ತದೆ. ಆದ್ದರಿಂದ 35 ವರ್ಷ ಮೇಲ್ಪಟ್ಟವರು ಸಿ.ಟಿ. ಸ್ಕ್ಯಾ‌ನ್‌ನಲ್ಲಿ ಕ್ಯಾಲ್ಸಿಯಂ ಸ್ಕೋರ್‌, ಟಿಎಂಟಿ, ಇಸಿಜಿ, ಎಕೋ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಬೇಕು. 45 ರಿಂದ 60 ನಿಮಿಷ ವಾಕಿಂಗ್‌ ಮಾಡಬೇಕು. ವೈದ್ಯರು ಕೊಟ್ಟಿರುವ ಮಾತ್ರೆಗಳನ್ನು ನಿಲ್ಲಿಸಬಾರದು ಎಂದು ಅವರು ಸಲಹೆ ನೀಡಿದರು.