OLA, Uber, Rapido Ban Updates: ಓಲಾ, ಊಬರ್‌ ಮತ್ತು ರ್ಯಾಪಿಡೊ ಕಂಪನಿಗಳಿಂದ ಉತ್ತರ ಬಂದಿದ್ದು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ. ಇಂದು ಸಂಜೆ ಈ ಸಂಬಂಧ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದ್ದು ಓಲಾ, ಊಬರ್‌ ಮತ್ತು ರ್ಯಾಪಿಡೊ ಸೇವೆ ಮುಂದುವರೆಯಲಿದೆಯಾ ಅಥವಾ ನಿಷೇಧವಾಗಲಿದೆಯಾ ಎಂಬುದು ತಿಳಿಯಲಿದೆ.

ಬೆಂಗಳೂರು(ಅ.11): ಆಟೋ ಸೇವೆ ಆರಂಭಿಸಿ ನಿಯಮ ಉಲ್ಲಂಘನೆ ಮಾಡಿದ್ದ ಕುರಿತು ನೀಡಿದ್ದ ನೋಟಿಸ್‌ಗೆ ಓಲಾ, ಉಬರ್‌ ಕಂಪನಿಗಳು ಉತ್ತರ ನೀಡಿದ್ದು, ಕಾನೂನು ಕೋಶದ ಮೂಲಕ ಅದನ್ನು ಪರಿಶೀಲಿಸಿ ಮಂಗಳವಾರ ಮುಂದಿನ ಕಾನೂನು ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ಎಚ್‌ಎಂಟಿ ಕುಮಾರ್‌ ತಿಳಿಸಿದ್ದಾರೆ.

ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆಯುಕ್ತರು, ನಾವು ಯಾವುದೇ ತಪ್ಪು ಮಾಡಿಲ್ಲ. ಹೆಚ್ಚಿನ ದರ ವಸೂಲಿ ಮಾಡಿಲ್ಲ. ಪರವಾನಗಿ ಸಂದರ್ಭದಲ್ಲಿ ತಿಳಿಸಿದಂತೆಯೇ ಗ್ರಾಹಕರಿಂದ ದರ ಪಡೆಯುತ್ತಿದ್ದೇವೆ. ಯಾವುದೇ ಕಾನೂನನ್ನು ಉಲ್ಲಂಘನೆ ಮಾಡಿಲ್ಲ. ಸಭೆ ಕರೆದರೆ ಹೆಚ್ಚಿನ ವಿವರ ನೀಡಲಾಗುವುದು ಎಂದು ಓಲಾ ಹಾಗೂ ಉಬರ್‌ ಕಂಪನಿಗಳು ಉತ್ತರದಲ್ಲಿ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಕಾನೂನು ಕೋಶಕ್ಕೆ ಕೋರಿದ್ದೇವೆ ಎಂದು ಹೇಳಿದರು.

Bengaluru: ನೋಟಿಸ್‌ಗೆ ಓಲಾ, ಉಬರ್‌, ರ್ಯಾಪಿಡೋ ಡೋಂಟ್‌ಕೇರ್‌

ಕಾನೂನು ಕೋಶ ಮಂಗಳವಾರ ವರದಿ ನೀಡಲಿದೆ. ಅಲ್ಲಿಯವರೆಗೂ ಓಲಾ, ಉಬರ್‌ ಆಟೋಗಳನ್ನು ಜಪ್ತಿ ಮಾಡುವುದಿಲ್ಲ. ಈ ಹಿಂದೆ ಆ ಕಂಪನಿಗಳು ಯಾವುದೇ ಕ್ರಮ ಜರುಗಿಸಬಾರದೆಂದು ಕೋಟ್‌ನಿಂದ ತಡೆಯಾಜ್ಞೆ ತಂದಿವೆ. ಹೀಗಾಗಿ, ಚರ್ಚಿಸಿ ಮಂಗಳವಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಅನಧಿಕೃತ ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸುವಂತೆ ಹಾಗೂ ಕ್ಯಾಬ್‌ಗಳಲ್ಲಿ ಹೆಚ್ಚಿನ ದರ ವಸೂಲಿ ಮಾಡದಂತೆ ರಾಜ್ಯ ಸಾರಿಗೆ ಇಲಾಖೆ ಅ.6ರಂದು ಓಲಾ, ಉಬರ್‌ ಹಾಗೂ ರಾರ‍ಯಪಿಡೋ ಸಂಸ್ಥೆಗಳಿಗೆ ನೋಟಿಸ್‌ ನೀಡಿ ಮೂರು ದಿನಗಳಲ್ಲಿ ಉತ್ತರಿಸಲು ಸೂಚಿಸಲಾಗಿತ್ತು. ಸೋಮವಾರ ಓಲಾ ಮತ್ತು ಉಬರ್‌ ಸಂಸ್ಥೆಗಳು ನೋಟಿಸ್‌ಗೆ ಉತ್ತರ ನೀಡಿದ್ದವು.

ಆಟೋ ಜಪ್ತಿ ಮಾಡ್ತಿಲ್ಲ:

ಎರಡೂ ಕಂಪನಿಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕಾನೂನು ಕೋಶಕ್ಕೆ ಕೋರಿದ್ದೇವೆ. ಕಾನೂನು ಕೋಶ ಮಂಗಳವಾರ ವರದಿ ನೀಡಲಿದೆ. ಅಲ್ಲಿಯವರೆಗೂ ಓಲಾ, ಉಬರ್‌ ಆಟೋಗಳನ್ನು ಜಪ್ತಿ ಮಾಡುವುದಿಲ್ಲ. ತಾವು ತಪ್ಪು ಮಾಡಿಲ್ಲ, ಹೆಚ್ಚಿನ ದರ ವಸೂಲಿ ಮಾಡಿಲ್ಲ ಎಂದು ಕಂಪನಿಗಳು ನೋಟಿಸ್‌ಗೆ ಉತ್ತರ ನೀಡಿವೆ ಅಂತ ಸಾರಿಗೆ ಆಯುಕ್ತ ಎಚ್‌ಎಂಟಿ ಕುಮಾರ್‌ ತಿಳಿಸಿದ್ದಾರೆ. 

ಸಾರಿಗೆ ಇಲಾಖೆಯ ನಿಯಮಗಳು, ನಿರ್ಧಾರಗಳಿಗೆ ಒಪ್ಪಿಕೊಂಡ್ರೆ ಓಲಾ, ಊಬರ್ ಕಂಪನಿಗಳನ್ನ ನಡೆಸಲು ಅನುಮತಿ ನೀಡಬಹುದು. ಸಾರಿಗೆ ಅಧಿಕಾರಿಗಳ ಆದೇಶ, ನಿಯಮಗಳನ್ನ ಮೀರಿ ದರ ವಸೂಲಿ ಮುಂದುವರಿಸಿದರೆ ಸರ್ಕಾರ ಓಲಾ, ಉಬರ್ ಕಂಪನಿಗಳನ್ನ ಬ್ಯಾನ್ ಮಾಡುವ ಸಾಧ್ಯತೆ ಇದೆ. ಹಿಂದೆಯೂ ಸಾರಿಗೆ ಇಲಾಖೆ ನೋಟಿಸ್ ನೀಡಿತ್ತು.ಆಗ ನಮ್ಮ ಮೇಲೆ ಕ್ರಮ ಕೈಗೊಳ್ಳದಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದ ಕಂಪನಿಗಳು. ಹೀಗಾಗಿ ಈ ಮಹತ್ವದ ಸಭೆಯಲ್ಲಿ. ಕಾನೂನು ಕೋಶದ ಅಭಿಪ್ರಾಯದ ಮೇಲೆ ಕ್ರಮ ಕೈಗೊಳ್ಳುವ ಕುರಿತು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.

ಸಭೆಯಲ್ಲಿ ಈ ವಿಚಾರಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ:

  • ನಿಗದಿತ ದರ 0-2 ಕೀ. ಮೀ ಗೆ, 30 ರೂ ದರ ನಿಗದಿಯಿದೆ.
  • ಕಂಪನಿಗಳಿಗೆ 10 ರೂ. ಹೆಚ್ಚು ಮಾಡಲು ಅವಕಾಶ ನೀಡಬಹುದು
  • ಕನಿಷ್ಟ ದರದ 30 ರೂಪಾಯಿಗೆ 10 ರೂ. ಹೆಚ್ಚಳ ಮಾಡಿದ್ರೆ ಆ್ಯಪ್ ಆಧಾರಿತ ಕಂಪನಿಗಳಿಗೆ ಲಾಭವೇ ಹೊರತು, ನಷ್ಟವಿಲ್ಲ ಎಂದು ತಿಳಿಸಬಹುದು
  •  ಆನ್ಲೈನ್ ಸಾರಿಗೆ ನೆಟ್ವರ್ಕ್ ಕಂಪನಿಗಳಾಗಿರುವ ಓಲಾ, ಉಬರ್ ಗೆ ಇಂತಿಷ್ಟೆ ಪ್ರಯಾಣದ ದರ ನಿಗಧಿ ಮಾಡಬೇಕೆಂದು ಸೂಚನೆ ನೀಡಬಹುದು
  • ಕರ್ನಾಟಕ ರಾಜ್ಯ ಬೇಡಿಕೆ ಆಧರಿತ ಸಾರಿಗೆ ತಂತ್ರಜ್ಞಾನ ನಿಯಮ –2016ರ ಅಡಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ
  •  ಸಾರಿಗೆ ಇಲಾಖೆಯ ಆದೇಶ, ನಿಯಮಗಳನ್ನ ಪಾಲಿಸದಿದ್ರೆ, 2016ರ ಅಡಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಂಪನಿಗಳಿಗೆ ಕೊಟ್ಟ ಪರವಾನಗಿ ರದ್ದು ಮಾಡಲಾಗುವುದೆಂದು ಎಚ್ಚರಿಕೆ ನೀಡುವ ಸಾಧ್ಯತೆ
  • ರ್ಯಾಪಿಡೋ ಬೈಕ್ ಸೇವೆಗೂ ವಾನ್೯ ಮಾಡುವ ಸಾಧ್ಯತೆ
  • Rapido bike ಆ್ಯಪ್ ಮೂಲಕ ಟ್ಯಾಕ್ಸಿ, ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳ ಸೇವೆ ಒದಗಿಸುತ್ತಿರುವ ರೊಪೆನ್ ಟ್ರಾನ್ಸ್‌ಪೋರ್ಟೇಷನ್ ಪ್ರೈವೆಟ್ ಲಿಮಿಟೆಡ್‌ ಗೂ ಸಾರಿಗೆ ಇಲಾಖೆ ನೋಟಿಸ್ ನೀಡಿದೆ
  •  ಇದರಂತೆ ಕರ್ನಾಟಕ ರಾಜ್ಯ ಬೇಡಿಕೆ ಆಧರಿತ ಸಾರಿಗೆ ತಂತ್ರಜ್ಞಾನ ನಿಯಮ ಮತ್ತು ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ–2021ರ ಅಡಿಯಲ್ಲಿ ಪರವಾನಗಿ ಪಡೆದು ಕಾರ್ಯನಿರ್ವಹಿಸಬೇಕು ಎಂದು ಆದೇಶ ನೀಡುವ ಸಾಧ್ಯತೆ