ನಾಳೆ ಬೆಂಗಳೂರಿಗೆ ಬಂದ್, ಶಾಲಾ ಕಾಲೇಜು, ಆಫೀಸ್ ಕತೆ ಏನು? ಸಾರಿಗೆ ಸಚಿವ ಸುದ್ದಿಗೋಷ್ಠಿ!
ನಾಳೆ ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಇದರ ಹಿನ್ನಲೆಯಲ್ಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಬಂದ್ ಎದುರಿಸಲು ಸಿದ್ಧತೆ ಕುರಿತು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲ ಒಕ್ಕೂಟದ ಬೇಡಿಕೆ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು(ಸೆ.10) ಖಾಸಗಿ ಸಾರಿಗೆ ಒಕ್ಕೂಟ ನಾಳೆ(ಸೆ.11) ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಕೈಬಿಡುವಂತೆ ಸರ್ಕಾರ ನಡೆಸಿದ ಪ್ರಯತ್ನಗಳು ವಿಫಲವಾಗಿದೆ. ಹೀಗಾಗಿ ನಾಳೆ ಬೆಂಗಳೂರು ಬಂದ್ ಪಕ್ಕಾ ಆಗಿದೆ. ಇದರ ಹಿನ್ನಲೆಯಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಬಂದ್ ಕರೆಯಿಂದ ಚಾಲಕರ ಒಕ್ಕೂಟ ಹಿಂದೆ ಸರಿದಿಲ್ಲ. ಹೀಗಾಗಿ ಬಂದ್ ಎದುರಿಸಲು ಸರ್ಕಾರ ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ. ನಾಳೆ ಶಾಲಾ ಕಾಲೇಜು ಹಾಗೂ ಆಫೀಸು ಹೋಗುವವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ದಿನ 40 ಲಕ್ಷ ಜನ ಬಸ್‌ಗಳಲ್ಲಿ ಓಡಾಡುತ್ತಿದ್ದಾರೆ. ನಮ್ಮ ಬಳಿ 6 ಸಾವಿರ ಬಸ್‌ಗಳಿವೆ. ಹೀಗಾಗಿ ಬಂದ್‌ನಿಂದ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಾಳೆ ಹೆಚ್ಚುವರಿ 4,000 ಟ್ರಿಪ್ ಹಾಕಲಾಗಿದೆ ಎಂದಿದ್ದಾರೆ.
ನಾಳೆ ಖಾಸಗಿ ಸಾರಿಗೆ ಮುಷ್ಕರ; ಬೆಂಗಳೂರಿನ ಈ ಪ್ರದೇಶದ ಶಾಲೆಗಳಿಗೆ ರಜೆ ಘೋಷಣೆ
ಎರಡು ಬಾರಿ ಚಾಲಕರ ಒಕ್ಕೂಟ ಸಂಘದ ಜೊತೆ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ. ಒಟ್ಟು 28 ಬೇಡಿಕೆ ಮುಂದಿಟ್ಟಿದ್ದಾರೆ. ಹಣಕಾಸಿನ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇನ್ನ ಒಲಾ ಉಬರ್ ಕುರಿತು ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದೆ. ಆಟೋಚಾಲಕರ ವಸತಿ, ಏರ್‌ಪೋರ್ಟ್, ಕ್ಯಾಂಟೀನ್ ಸೇರಿದಂತೆ ಹಲವು ಬೇಡಿಕೆಗಳು ಪ್ರಗತಿಯಲ್ಲಿದೆ ಎಂದಿದ್ದಾರೆ.
ಆ್ಯಪ್ ಮಾಡಬೇಕೆಂಬ ಬೇಡಿಕೆಯೂ ಪ್ರಗತಿಯಲ್ಲಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಶಕ್ತಿ ಯೋಜನೆ ಹಾಗೂ ಟ್ಯಾಕ್ಸಿ ಹೆಚ್ಚಿಸಿದರ ಕುರಿತು ಅಸಮಾಧಾನ ವ್ಯಕ್ತಪಡಿಸಿ ಬೇಡಿಕೆ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇವರೆಡು ಮಾತ್ರ ಕಾಂಗ್ರೆಸ್ ಸರ್ಕಾರ ಆಡಳಿತದ ವಿರುದ್ಧ ಇರುವ ಬೇಡಿಕೆ. ಇನ್ನುಳಿದ ಬೇಡಿಕೆ ಹಳೇ ಸರ್ಕಾರ ಮಾಡಿಟ್ಟ ಎಡವಟ್ಟು ಎಂದು ರಾಮಲಿಂಗಾ ರೆಡ್ಡಿಹೇಳಿದ್ದಾರೆ.
ಇಂದು ರಾತ್ರಿಯಿಂದ ಬೆಂಗ್ಳೂರಲ್ಲಿ ಖಾಸಗಿ ಸಾರಿಗೆ ಸೇವೆ ಬಂದ್!
ಚಾಲಕ ಒಕ್ಕೂಟ ಎಷ್ಟು ಸಂಘಟನೆ ಬೇಕಾದರೂ ಇಟ್ಟುಕೊಳ್ಳಲಿ. ನಾವು ಅವರ ಸಂಖ್ಯೆ ಕುರಿತು ತಲೆಕೆಡಿಸಿಕೊಂಡಿಲ್ಲ. ಅವರು ಬಂದೇ ಮಾಡೇ ಮಾಡುತ್ತೀನಿ ಎಂದಿದ್ದಾರೆ. ಸರ್ಕಾರ ಎಲ್ಲಾ ಪ್ರಯತ್ನ ಮಾಡಿದೆ. ನಮ್ಮ ಮೊದಲ ಆದ್ಯತೆ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು. ಇದಕ್ಕೆ ಎಲ್ಲಾ ತಯಾರಿ ಮಾಡಲಾಗಿದೆ. ಏರ್ಪೋರ್ಟ್ ರೋಡ್ ಗೂ ಹೆಚ್ಚುವರಿ ಬಸ್ ಹಾಕಲಾಗಿದೆ. ಶಾಲೆಗಳು ಜೆ ಕೊಟ್ಟಿದ್ದರೆ ನಾವು ಏನು ಮಾಡಲು ಸಾಧ್ಯವಿಲ್ಲಎಂದಿದ್ದಾರೆ.