2025ರ ಕ್ಯಾಲೆಂಡರ್ ಬಹಿಷ್ಕರಿಸಿದ ಸರ್ಕಾರಿ ನೌಕರರು? ಯಾಕೆ ಈ ಬೇಸರ?
2025ರ ಸರ್ಕಾರಿ ರಜಾ ಪಟ್ಟಿ ಬಿಡುಗಡೆಯಾಗಿದ್ದು, ಹಲವು ರಜೆಗಳು ಭಾನುವಾರ ಬಂದಿರುವುದು ಸರ್ಕಾರಿ ನೌಕರರಲ್ಲಿ ಬೇಸರ ಮೂಡಿಸಿದೆ. 7 ಸರ್ಕಾರಿ ರಜೆಗಳು ಶನಿವಾರ ಮತ್ತು ಭಾನುವಾರ ಬಂದಿವೆ.
ಬೆಂಗಳೂರು: 2024ಕ್ಕೆ ವಿದಾಯ ಹೇಳುವ ಸಮಯ ಬಂದಿದ್ದು, 2025ರ ವರ್ಷವನ್ನು ಸ್ವಾಗತಿಸಲು ಜನರು ಸಿದ್ಧವಾಗಿದ್ದಾರೆ. ಈಗಾಗಲೇ ಮುಂದಿನ ವರ್ಷ ಹೇಗಿರಬೇಕು ಎಂದು ಬಹುತೇಕರು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಹೊಸ ವರ್ಷದ ಆಚರಣೆ ಮಾಡಲು ಉತ್ಸುಕರಾಗಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ವಿಷಯವೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ. 2025ರ ರಜಾಪಟ್ಟಿಯನ್ನು ಸಹ ಸರ್ಕಾರ ಬಿಡುಗಡೆಗೊಳಿಸಿದೆ. ಆದರೆ ಬಹುತೇಕ ಸರ್ಕಾರಿ ರಜೆಗಳು ಭಾನುವಾರ ಬಂದಿವೆ. ಹಾಗಾಗಿ ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಬೇಸರವನ್ನುಂಟು ಮಾಡಿದೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶುಕ್ರವಾರ ನಂತರ ಮತ್ತು ಭಾನುವಾರ ನಂತರದ ದಿನಗಳಲ್ಲಿ ಸರ್ಕಾರಿ ರಜೆ ಬಂದ್ರೆ ಜನರು ಖುಷಿಯಾಗುತ್ತಾರೆ. ಭಾನುವಾರ ಸಾರ್ವತ್ರಿಕ ರಜಾ ದಿನವಾಗಿದ್ದು, ಅದರ ನಂತರ ಅಥವಾ ಹಿಂದಿನ ದಿನಗಳಲ್ಲಿ ವಿಶೇಷ ರಜಾ ದಿನಗಳು ಸಿಕ್ಕರೆ ಲಾಂಗ್ ಟ್ರಿಪ್ ಹೋಗಲು ಅಥವಾ ಇನ್ನಿತರ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಆದರೆ 2025ರಲ್ಲಿ ಶನಿವಾರ ಮತ್ತು ಭಾನುವಾರವೇ 7 ಸರ್ಕಾರಿ ರಜೆಗಳು ಬಂದಿವೆ. ಹೀಗಾಗಿ 2025ರ ರಜಾದಿನದ ಕ್ಯಾಲೆಂಡರ್ ಬಹಿಷ್ಕರಿಸೋಣ ಎಂಬ ಶೀರ್ಷಿಕೆಯಡಿಯಲ್ಲಿ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಶನಿವಾರ ಮತ್ತು ಭಾನುವಾರ ಬಂದಿರುವ ರಜಾದಿನಗಳ ವಿವರ ಇಲ್ಲಿದೆ.
ದಿನಾಂಕ | ಸಾರ್ವತ್ರಿಕ ರಜೆ | ದಿನ |
ಜನವರಿ 26 | ಗಣರಾಜ್ಯೋತ್ಸವ | ಭಾನುವಾರ |
ಮಾರ್ಚ್ 30 | ಯುಗಾದಿ | ಭಾನುವಾರ |
ಜೂನ್ 07 | ಬಕ್ರೀದ್ | ಶನಿವಾರ |
ಜುಲೈ 06 | ಮೊಹರಂ | ಭಾನುವಾರ |
ಸೆಪ್ಟೆಂಬರ್ 21 | ಮಹಾಲಯ ಅಮವಾಸ್ಯೆ | ಭಾನುವಾರ |
ನವೆಂಬರ್ 1 | ಕನ್ನಡ ರಾಜ್ಯೋತ್ಸವ | ಶನಿವಾರ |
ನವೆಂಬರ್ 8 | ಕನಕದಾಸ ಜಯಂತಿ | ಶನಿವಾರ |
2024ರ ವರ್ಷ ಕೊನೆಗೊಳ್ಳಲು ಒಂದೂವರೆ ತಿಂಗಳು ಬಾಕಿ ಇರುವಂತೆಯೇ ರಾಜ್ಯ ಸರ್ಕಾರ (public holidays 2025) 2025ರ ಸಾರ್ವತ್ರಿಕ ಹಾಗೂ ಪರಿಮಿತ ರಜಾದಿನಗಳ (restricted holiday 2025) ಪಟ್ಟಿಯನ್ನು ಗುರುವಾರ ಪ್ರಕಟ ಮಾಡಿದೆ. ಎಲ್ಲಾ 2ನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರದೊಂದಿಗೆ ಈ ದಿನಗಳು ಕೂಡ ರಜಾದಿನವಾಗಿರುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ,. 17 ಗೆಜೆಟೆಡ್ ಮತ್ತು 34 ನಿರ್ಬಂಧಿತ ರಜೆಗಳು ಸೇರಿವೆ. ಕ್ಯಾಲೆಂಡರ್‌ನಲ್ಲಿ 17 ಗೆಜೆಟೆಡ್ ರಜಾದಿನಗಳನ್ನು ಕಡ್ಡಾಯ ಎಂದು ರಜೆ ತೋರಿಸಲಾಗಿರುತ್ತದೆ.
ಗಜೆಟೆಡ್ ರಜಾದಿನಗಳ ಪಟ್ಟಿ
ದಿನಾಂಕ | ರಜೆ ಕಾರಣ | ವಾರ |
ಜನವರಿ 26 | ಗಣರಾಜ್ಯೋತ್ಸವ | ಭಾನುವಾರ |
ಫೆಬ್ರವರಿ 26 | ಮಹಾ ಶಿವರಾತ್ರಿ | ಬುಧವಾರ |
ಮಾರ್ಚ್ 14 | ಹೋಳಿ | ಶುಕ್ರವಾರ |
ಮಾರ್ಚ್ 31 | ಈದ್-ಉಲ್-ಫಿತರ್ | ಸೋಮವಾರ |
ಏಪ್ರಿಲ್ 10 | ಮಹಾವೀರ ಜಯಂತಿ | ಗುರುವಾರ |
ಏಪ್ರಿಲ್ 18 | ಗುಡ್ ಫ್ರೈಡೆ | ಶುಕ್ರವಾರ |
ಮೇ 12 | ಬುದ್ಧ ಪೂರ್ಣಿಮ | ಸೋಮವಾರ |
ಜೂನ್ 7 | ಬಕ್ರೀದ್ | ಶನಿವಾರ |
ಜುಲೈ 6 | ಮೊಹರಂ | ಭಾನುವಾರ |
ಆಗಸ್ಟ್ 15 | ಸ್ವಾತಂತ್ರ್ಯ ದಿನಾಚರಣೆ | ಶುಕ್ರವಾರ |
ಆಗಸ್ಟ್ 16 | ಕೃಷ್ಣ ಜನ್ಮಾಷ್ಠಮಿ | ಶನಿವಾರ |
ಸೆಪ್ಟೆಂಬರ್ 5 | ಮಿಲಾದ್-ಉನ್-ನಬಿ | ಶುಕ್ರವಾರ |
ಅಕ್ಟೋಬರ್ 2 | ಗಾಂಧಿ ಜಯಂತಿ | ಶುಕ್ರವಾರ |
ಅಕ್ಟೋಬರ್ 2 | ದಸರಾ | ಶುಕ್ರವಾರ |
ಅಕ್ಟೋಬರ್ 20 | ದೀಪಾವಳಿ | ಸೋಮವಾರ |
ನವೆಂಬರ್ 5 | ಗುರು ನಾನಕ್ ಜಯಂತಿ | ಬುಧವಾರ |
ಡಿಸೆಂಬರ್ 25 | ಕ್ರಿಸ್ಮಸ್ | ಗುರುವಾರ |
ಇದನ್ನೂ ಓದಿ: ಬಿಎಸ್‌ಎನ್‌ಎಲ್‌ಗೆ ಗುನ್ನಾ ಕೊಟ್ಟ ಜಿಯೋ; 10 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 2 ಬಿಗ್ ಆಫರ್ ಕೊಟ್ಟ ಅಂಬಾನಿ
ಐಚ್ಛಿಕ ರಜಾದಿನಗಳ ಪಟ್ಟಿ
ನಿಯಮಗಳ ಪ್ರಕಾರ ಪ್ರತಿ ಉದ್ಯೋಗಿಗೆ 12 ಐಚ್ಛಿಕ ರಜಾದಿನಗಳನ್ನು ನೀಡಲಾಗಿರುತ್ತದೆ. ಆದರೆ ಈ 12ರಲ್ಲಿ 3ನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿರುತ್ತದೆ. ಉದ್ಯೋಗಿಗಳುಉ ತಮ್ಮ ವೈಯಕ್ತಿಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಕುಟುಂಬಕ್ಕಾಗಿ ಈ ರಜೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದಸರಾಗೆ ಒಂದು ಹೆಚ್ಚುವರಿ ರಜೆಯನ್ನು ಸೇರಿಸಿಕೊಳ್ಳಬಹುದು. ಇನ್ನುಳಿದಂತೆ ಯಾವ ಹಬ್ಬಕ್ಕೆ ಐಚ್ಛಿಕ ರಜೆ ನೀಡಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ದಿನಾಂಕ | ರಜೆ | ವಾರ |
ಜನವರಿ 1 | ಹೊಸ ವರ್ಷದ ಆಚರಣೆ | ಬುಧವಾರ |
ಜನವರಿ 6 | ಗುರು ಗೋಬಿಂದ್ ಸಿಂಗ್ ಜಯಂತಿ | ಸೋಮವಾರ |
ಜನವರಿ 14 | ಮಕರ ಸಂಕ್ರಾಂತಿ/ಪೊಂಗಲ್/ಮಾಘ ಬಿಹು | ಮಂಗಳವಾರ |
ಫೆಬ್ರವರಿ 2 | ಬಸಂತ್ ಪಂಚಮಿ | ಭಾನುವಾರ |
ಫೆಬ್ರವರಿ 12 | ಗುರುರವಿ ದಾಸ್ ಜಯಂತಿ | ಬುಧವಾರ |
ಫೆಬ್ರವರಿ 19 | ಶಿವಾಜಿ ಜಯಂತಿ | ಬುಧವಾರ |
ಫೆಬ್ರವರಿ 23 | ಸ್ವಾಮಿ ದಯಾನಂದ ಸರಸ್ವತಿ ಜಯಂತಿ | ಭಾನುವಾರ |
ಮಾರ್ಚ್ 13 | ಹೋಳಿ ದಹನ ದಿನ | ಗುರುವಾರ |
ಮಾರ್ಚ್ 14 | ಡೋಲ್‌ಯಾತ್ರ | ಶುಕ್ರವಾರ |
ಏಪ್ರಿಲ್ 16 | ರಾಮ ನವಮಿ | ಭಾನುವಾರ |
ಆಗಸ್ಟ್ 15 | ಜನ್ಮಾಷ್ಠಮಿ | ಶುಕ್ರವಾರ |
ಆಗಸ್ಟ್ 27 | ಗಣೇಶ ಚತುರ್ಥಿ | ಬುಧವಾರ |
ಸೆಪ್ಟೆಂಬರ್ 5 | ಓಣಂ | ಬುಧವಾರ |
ಸೆಪ್ಟೆಂಬರ್ 29 | ದಸರಾ | ಮಂಗಳವಾರ |
ಅಕ್ಟೋಬರ್ 1 | ದಸರಾ ಮಹಾನವಮಿ | ಬುಧವಾರ |
ಅಕ್ಟೋಬರ್ 7 | ವಾಲ್ಮೀಕಿ ಜಯಂತಿ | ಮಂಗಳವಾರ |
ಅಕ್ಟೋಬರ್ 10 | ಕರ್ವಾ ಚೌಥ್ | ಶುಕ್ರವಾರ |
ಅಕ್ಟೋಬರ್ 20 | ನರಕ ಚತುರರ್ದಶಿ | ಸೋಮವಾರ |
ಅಕ್ಟೋಬರ್ 22 | ಗೋವರ್ಧನ ಪೂಜೆ | ಬುಧವಾರ |
ಅಕ್ಟೋಬರ್ 23 | ಭಾಯಿ ದುಜಾ | ಗುರುವಾರ |
ಅಕ್ಟೋಬರ್ 28 | ಛತ್ ಪೂಜಾ | ಮಂಗಳವಾರ |
ನವೆಂಬರ್ 24 | ಗುರು ತೇಜ್ ಬಹದ್ಧೂರ್ ಜಯಂತಿ | ಸೋಮವಾರ |
ಡಿಸೆಂಬರ್ 24 | ಕ್ರಿಸ್ಮಸ್ ಸಂಜೆ | ಬುಧವಾರ |
ಇದನ್ನೂ ಓದಿ: 2025-26ರ ಕರ್ನಾಟಕ ಶಾಲಾ ರಜಾದಿನಗಳ ಪಟ್ಟಿ ಬಿಡುಗಡೆ