ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇಗುಲದ ಪ್ರಧಾನ ಅರ್ಚಕ ಡಾ. ಪ್ರಸನ್ನ ಕುಮಾರ್ ನಿಧನ

ಕರ್ನಾಟಕದ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದ ಪ್ರಧಾನ ಅರ್ಚಕ ಡಾ. ಪ್ರಸನ್ನ ಕುಮಾರ್ ಅವರು ಅನಾರೋಗ್ಯದಿಂದ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 

Goravanahalli Sri Mahalakshmi Temple Priest Dr Prasanna Kumar Passed Away gvd

ತುಮಕೂರು (ಜು.23): ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದ ಪ್ರಧಾನ ಅರ್ಚಕ ಡಾ. ಪ್ರಸನ್ನಕುಮಾರ್ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕರ್ನಾಟಕದ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿಯ ಶ್ರೀಮಹಾಲಕ್ಷ್ಮೀ ದೇವಿ ದೇವಾಲಯದಲ್ಲಿ ಹಲವು ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಮಹಾಲಕ್ಷ್ಮಿದೇವಿಗೆ ಪೂಜೆ ಸಲ್ಲಿಸುತ್ತಿದ್ದರು. 

ಜು.13ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಜು.23ರ ಶನಿವಾರ ಬೆಳಿಗ್ಗೆ 10.05ಕ್ಕೆ ಪ್ರಧಾನ ಅರ್ಚಕ ನಿಧನರಾಗಿದ್ದಾರೆ. ಅರ್ಚಕ ಪ್ರಸನ್ನ ಕುಮಾರ್ ನಿಧನದಿಂದ ಗೊರವನಹಳ್ಳಿ ಪುಣ್ಯಕ್ಷೇತ್ರದಲ್ಲಿ ನಿರವ ಮೌನ ಆವರಿಸಿದೆ. ಇಂದಿನಿಂದ ನಾಳೆ ಮಧ್ಯಾಹ್ನ 2ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. 

ಶುಕ್ರವಾರ ಈ ತಪ್ಪುಗಳನ್ನು ಮಾಡಿದರೆ, ದುರಾದೃಷ್ಟ ಹಿಂಬಾಲಿಸೋದು ಪಕ್ಕಾ!

ನಾಳೆ ಬೆಳಿಗ್ಗೆ (ಭಾನುವಾರ) ಕಮಲಪ್ರಿಯ ಪ್ಯಾಲೆಸ್ ಆವರಣದಲ್ಲಿ ದೈವಾಧೀನರಾಗಿರುವ ಪ್ರಸನ್ನಕುಮಾರ್ ಅವರ ಅಂತ್ಯಕ್ರಿಯೆಯನ್ನು ಮಾಡಲಾಗುತ್ತದೆ ಎಂದು ಕುಟುಂಬಸ್ಥರು ಹಾಗೂ  ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದ್ದಾರೆ. ಇನ್ನು ಪ್ರಸನ್ನಕುಮಾರ್ ಅವರ ಮೃತ ಶರೀರದ ದರ್ಶನಕ್ಕೆ ಸಾವಿರಾರು ಭಕ್ತಾಧಿಗಳು ಗೊರವನಹಳ್ಳಿ ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಹಾಲು, money plant ಜೊತೆಯಾಗಿ ನಿಮ್ಮನ್ನು ಲಕ್ಷ್ಮೀಪುತ್ರನಾಗಿಸಬಲ್ಲವು!

ಇನ್ನು ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನವು ಕರ್ನಾಟಕದ ತುಮಕೂರು ಜಿಲ್ಲೆಯ ಅತ್ಯಂತ ಜನಪ್ರಿಯ ಮಹಾಲಕ್ಷ್ಮಿ ದೇವಾಲಯವಾಗಿದೆ. ಈ ಗ್ರಾಮವು ತನ್ನಲ್ಲಿ ಇರುವ ಲಕ್ಷ್ಮಿ ದೇವಸ್ಥಾನದಿಂದಾಗಿ ಚಿರಪರಿಚಿತವಾಗಿದೆ. ಇಲ್ಲಿನ ಮಹಾಲಕ್ಷ್ಮಿ ವಿಗ್ರಹವು ಸ್ವತಃ ಅದಾಗಿಯೇ ಉದ್ಭವಗೊಂಡಿದೆ ಎಂದು ಹೇಳಲಾಗುತ್ತದೆ.

Latest Videos
Follow Us:
Download App:
  • android
  • ios