ಬೆಂಗಳೂರು[ಅ. 18]  ಐಪಿಎಸ್‌ ಅಧಿಕಾರಿ ರಾಘವೇಂದ್ರ ಎಚ್‌.ಔರಾದ್ಕರ್‌ ವರದಿಯನ್ವಯ ಪೊಲೀಸರ ವೇತನ ಪರಿಷ್ಕರಣೆ ಮಾಡಿ  ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿ ದಿಢೀರನೇ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿ ಬ್ರೇಕ್‌ ಹಾಕಿತ್ತು. ಈ ಸುದ್ದಿ ಒತ್ತಟ್ಟಿಗೆ ಇರಲಿ. ಪೊಲೀಸ್ ಸಿಬ್ಬಂದಿಯ ನೋವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಅವರಿಗೆ ನೀಡುತ್ತಿದ್ದ ಕಷ್ಟ ಪರಿಹಾರ ಭತ್ಯೆ ಪರಿಷ್ಕರಿಸಿದೆ.

ವಿಶೇಷ ಭತ್ಯೆ ಜಾರಿ ಕ್ರಮಕ್ಕೆ ಹಸಿರು ನಿಶಾನೆ ತೋರಿದೆ. ಜಮೇದಾರ್ , ಮುಖ್ಯ ಪೇದೆ, ಸಹಾಯಕ ಸಬ್ ಇನ್ಸಪೆಕ್ಟರ್ , ಸಬ್ ಇನ್ಸ್ ಪೆಕ್ಟರ್   ಇದರ ಲಾಭ ಪಡೆದುಕೊಳ್ಳಲಿದ್ದಾರೆ.

ಪೊಲೀಸ್‌ ವೇತನ ಏರಿಕೆ ಜಾರಿಗೆ ದಿಢೀರ್‌ ತಡೆ!

ಮಾಸಿಕ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ನೀಡಿದ್ದು ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದೆ. ಇನ್ನೊಂದು ಕಡೆ ಸರ್ಕಾರಿ ನೌಕರರ ಭತ್ಯೆ ಹೆಚ್ಚಳ ಪ್ರಸ್ತಾವನೆಗೂ ಅಂಕಿತ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲ ಕೆಲಸಗಳು ಮುಗಿದಿದ್ದು ಅಧಿಕೃತ ಆದೇಶವೊಂದೇ ಬಾಕಿ ಇದೆ.

ಪ್ರಮುಖ ಪಾಯಿಂಟ್ಸ್

ಡಿಸೆಂಬರ್ 1 ರ ಬದಲಾಗಿ ನವೆಂಬರ್ 1 ರಿಂದಲೇ ಪರಿಷ್ಕೃತ ಭತ್ಯೆ ಹೆಚ್ಚಳ ಜಾರಿ 

ಜಮೇದಾರ್/ ಅನುಯಾಯಿ- 1000 ರೂ. ಇದ್ದದ್ದು 2000ಕ್ಕೆ ಏರಿಕೆ
ಪೊಲೀಸ್ ಪೇದೆ 2000 ದಿಂದ 3000
ಮುಖ್ಯ ಪೇದೆ 1000 ದಿಂದ 2000
ಸಹಾಯಕ ಸಬ್ ಇನ್ಸ್ ಪೆಕ್ಟರ್ 1000 ದಿಂದ 2000
ಪೊಲೀಸ್   ಸಬ್ ಇನ್ಸ್ ಪೆಕ್ಟರ್1000 ದಿಂದ 2000