ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇದುವಗೆ ಪಾಸ್ ಆಗಲು ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆಯಬೇಕಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಕೇವಲ 30 ಅಂಕ ಪಡೆದರೆ ಪಾಸ್ ಎಂದಿದೆ. ಸರ್ಕಾರ ಉತ್ತೀರ್ಣ ಅಂಕ ಕಡಿತಗೊಳಿಸಿದೆ.
ಬೆಂಗಳೂರು (ಜು.24) ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಎಸ್‌ಎಸ್ಎಲ್‌ಸಿ ಪರೀಕ್ಷೆ ಹಾಗೂ ಉತ್ತೀರ್ಣ ಅಂಕಗಳಿಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಇನ್ನು ಮುಂದೆ ಎಸ್‌ಎಸ್ಎಲ್‌ಸಿ ಪರೀಕ್ಷೆ ಪಾಸ್ ಮಾರ್ಕ್ 35 ಅಲ್ಲ. ಕೇವಲ 30 ಅಂಕ ಪಡೆದರೆ ಸಾಕು. ವಿದ್ಯಾರ್ಥಿಯನ್ನು ಉತ್ತೀರ್ಣ ಮಾಡಲು ಸರ್ಕಾರ ಮಹತ್ವದ ತಿದ್ದುಪಡಿ ಮಾಡಿದೆ. ಹೊಸ ನೀತಿ ಪ್ರಕಾರ ಎಸ್‌ಎಸ್ಎಲ್‌ಸಿ ಪರೀಕ್ಷೆಯ ಪ್ರತಿ ವಿಷಯದಲ್ಲಿ 30 ಅಂಕ ಪಡೆದರೆ ಸಾಕು, ವಿದ್ಯಾರ್ಥಿಗಳು ಪಾಸ್ ಎಂದು ನಿರ್ಧರಿಸಲಾಗುತ್ತದೆ.
206 ಅಂಕ ಪಡೆದರೆ ಪಾಸ್
ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಓವರ್ ಅಲ್ ಅಗ್ರಿಗೇಟ್ ಶೇಕಡಾ 33 ಪಾಸಿಂಗ್ ಅಂಕಕ್ಕೆ ಕಡಿತ ಮಾಡಲಾಗಿದೆ.ಹೀಗಾಗಿ ಇದೀಗ 625ಕ್ಕೆ 206 ಅಂಕ ಪಡೆದ ವಿದ್ಯಾರ್ಥಿಗಳನ್ನು ಪಾಸ್ ಎಂದು ಘೋಷಿಸಲಾಗುತ್ತದೆ. ಈ ಹಿಂದೆ ಓವರ್ ಆಲ್ ಪಾಸಿಂಗ್ ಶೇಕಡಾ 35 ಇತ್ತು. ಹೀಗಾಗಿ ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆದರೆ ಮಾತ್ರ ಪಾಸ್ ಆಗುತ್ತಿತ್ತು. ಆದರ ಇದೀಗ ಪ್ರತಿ ವಿಷಯದಲ್ಲಿ 30 ಅಂಕ ಪಡೆದರೆ ಸಾಕು. ಒಟ್ಟು ಪಾಸಿಂಗ್ ಅಗ್ರೇಗೇಟ್ ಶೇಕಡಾ 33 ಬರಬೇಕು.
ಅಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ
ಸಿಬಿಎಸ್ಇ ಮಾಡಲ್ ನಲ್ಲಿ ಇದೇ ಮಾದರಿ ಇದೆ. ಹೀಗಾಗಿ ರಾಜ್ಯ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಪ್ರಸ್ತಾವನೆಗೆ ಅಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಈ ಕುರಿತು ಅಕ್ಷೇಪ ಸಲ್ಲಿಸಿಕೆ ಅವಕಾಶ ನೀಡಲಾಗಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿಯಾಮಳಿ 1966ಕ್ಕೆ ಸರ್ಕಾರ ತಿದ್ದುಪಡಿ ತಂದಿದೆ. ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನ ಹಾಗೂ ಬಾಹ್ಯ ಪರೀಕ್ಷೆ ಸೇರಿ ಒಟ್ಟಾರೆ ಸರಾಸರಿ ಶೇಕಡಾ 33ರಷ್ಟು ಅಂಕಗಳನ್ನು ಪಡೆದರೆ ಪಾಸ್ ಎಂದು ನಿರ್ಧರಿಸಲಾಗಿದೆ.
