Asianet Suvarna News Asianet Suvarna News

ಇಂದು ‘ಗೃಹಲಕ್ಷ್ಮಿ’ ಅರ್ಜಿ ಸಲ್ಲಿಕೆ ದಿನಾಂಕ ನಿಗದಿ?

ಬುಧವಾರ ರಾಜ್ಯ ಸರ್ಕಾರದ ಮೂರನೇ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಸಭೆಯಲ್ಲಿ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆ ಜಾರಿ ವಿಚಾರ ಚರ್ಚೆಗೆ ಬರಲಿದೆ. ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸುವ ಸಾಧ್ಯತೆಯೂ ಇದೆ.

Ghrilakshmi scheme application submission date fixed today? bengaluru rav
Author
First Published Jun 28, 2023, 12:02 AM IST

ಬೆಂಗಳೂರು (ಜೂ.28) : ಬುಧವಾರ ರಾಜ್ಯ ಸರ್ಕಾರದ ಮೂರನೇ ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಸಭೆಯಲ್ಲಿ ‘ಗೃಹಲಕ್ಷ್ಮಿ’ ಗ್ಯಾರಂಟಿ ಯೋಜನೆ ಜಾರಿ ವಿಚಾರ ಚರ್ಚೆಗೆ ಬರಲಿದೆ. ಯೋಜನೆಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸುವ ಸಾಧ್ಯತೆಯೂ ಇದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧ(Vidhanagoudha)ದಲ್ಲಿ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಈಗಾಗಲೇ ಅಧಿಕೃತವಾಗಿ ಜಾರಿಗೊಳಿಸಿರುವ ಗೃಹ ಜ್ಯೋತಿ, ಶಕ್ತಿ ಹೊರತುಪಡಿಸಿ ಬಾಕಿ ಇರುವ ಗೃಹ ಲಕ್ಷ್ಮಿ, ಅನ್ನ ಭಾಗ್ಯದ 10 ಕೆ.ಜಿ.ಅಕ್ಕಿ ಯೋಜನೆಗಳ ಜಾರಿ ಯಾವಾಗಿನಿಂದ ಮಾಡಲು ಸಾಧ್ಯ ಎನ್ನುವ ವಿಚಾರಗಳು ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಯುವನಿಧಿ ಯೋಜನೆಗೆ ಜಾರಿಗೆ ಇನ್ನೂ ಕಾಲಾವಕಾಶ ಇರುವುದರಿಂದ ಸದ್ಯ ಆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಆಹಾರ ಧಾನ್ಯ ಬೆಲೆ ಹೆಚ್ಚಳ ತಡೆ ಕೇಂದ್ರದ ಕೆಲಸ: ಸಿಎಂ ಸಿದ್ದರಾಮಯ್ಯ

ಈ ಪೈಕಿ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೆ ಇಲಾಖಾ ಮಟ್ಟದಲ್ಲಿ ಅರ್ಜಿ ನಮೂನೆಯನ್ನು ಅಂತಿಮಗೊಳಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೇ ಹೆಬ್ಬಾಳ್ಕರ್‌(Lakshmi hebbalkar) ಅವರು ಹೇಳಿರುವಂತೆ ಇದಕ್ಕೆ ಮುಖ್ಯಮಂತ್ರಿ ಅವರ ಒಪ್ಪಿಗೆಯಷ್ಟೆಬಾಕಿ ಇದೆ. ಜೊತೆಗೆ ಯೋಜನೆಯನ್ನು ಯಾವಾಗಿನಿಂದ ಜಾರಿಗೊಳಿಸಬೇಕು ಮತ್ತು ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿಪಡಿಸುವುದು ಬಾಕಿ ಇದೆ. ಇದೆಲ್ಲದಕ್ಕೂ ಸಭೆಯಲ್ಲಿ ನಿರ್ಧಾರಗಳನ್ನು ಕೈಗೊಂಡು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ.

ಇನ್ನು, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಲು ಅಗತ್ಯವಿರುವ ಅಕ್ಕಿ ಖರೀದಿಗೆ ಕೊಡಲು ಭಾರತೀಯ ಆಹಾರ ನಿಗಮ ಒಪ್ಪಿಗೆ ನೀಡದ ಕಾರಣ ಮುಂದೇನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಿದರೆ ಸರ್ಕಾರಕ್ಕೆ ಆಗುವ ಆರ್ಥಿಕ ಹೊರೆ ಎಷ್ಟು. ಎಫ್‌ಸಿಐ ಬದಲು ಕೇಂದ್ರದ ಇನ್ನಿತರೆ ಸಂಸ್ಥೆಗಳಿಂದ ಅಕ್ಕಿ ಖರೀದಿಯಿಂದ ತಗಲುವ ವೆಚ್ಚವೆಷ್ಟುಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಇದರ ಮೇಲೆ ಅಕ್ಕಿ ಖರೀದಿಗೆ ಸೂಕ್ತ ಪರ್ಯಾಯ ಮಾರ್ಗ ಯಾವುದು ಎಂಬುದನ್ನು ಸಂಪುಟ ಸಭೆ ನಿರ್ಧರಿಸುವ ಸಾಧ್ಯತೆ ಇದೆ. ಜೊತೆಗೆ ಅಕ್ಕಿ ಖರೀದಿಗೆ ಇನ್ನೂ ಸಮಯವಾಕಾಶ ಬೇಕಿರುವುದರಿಂದ ಜುಲೈನಿಂದ 10 ಕೆ.ಜಿ.ಅಕ್ಕಿ ನೀಡಲು ಸಾಧ್ಯವೇ ಇಲ್ಲ. ಆಗಸ್ಟ್‌ನಿಂದ ಜಾರಿಗೊಳಿಸುವುದೇ ಎಂಬ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

 

ಗೃಹಲಕ್ಷ್ಮಿ ಯೋಜನೆಗೆ ಸಾಫ್ಟವೇರ್‌, ಆ್ಯಪ್‌ ರೆಡಿ: ಲಕ್ಷಿfಮೀ ಹೆಬ್ಬಾಳ್ಕರ್‌

Follow Us:
Download App:
  • android
  • ios