ಗೃಹಲಕ್ಷ್ಮಿ ಯೋಜನೆಗೆ ಸಾಫ್ಟವೇರ್‌, ಆ್ಯಪ್‌ ರೆಡಿ: ಲಕ್ಷಿfಮೀ ಹೆಬ್ಬಾಳ್ಕರ್‌

ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಾಫ್‌್ಟವೇರ್‌ ಮತ್ತು ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. ಬಹಳ ಬೇಗ ಇದನ್ನು ಬಿಡುಗಡೆ ಮಾಡುತ್ತೇವೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೇ ಹೆಬ್ಬಾಳಕರ್‌ ಹೇಳಿದ

Software App Ready for Gruhalakshmi Yojana says minister  lakshmi Hebbalkar at belgum rav

ಬೆಳಗಾವಿ (ಜೂ.19): ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಾಫ್‌್ಟವೇರ್‌ ಮತ್ತು ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. ಬಹಳ ಬೇಗ ಇದನ್ನು ಬಿಡುಗಡೆ ಮಾಡುತ್ತೇವೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೇ ಹೆಬ್ಬಾಳಕರ್‌ ಹೇಳಿದರು.

ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶೀಘ್ರದಲ್ಲೇ ಗೃಹಲಕ್ಷ್ಮಿ ಅರ್ಜಿ ಬಿಡುಗಡೆ ಮಾಡುತ್ತೇವೆ. ತ್ವರಿತ ಅನುಷ್ಠಾನಕ್ಕೆ ತಾಂತ್ರಿಕ ತೊಂದರೆ ಆಗುತ್ತಿರುವ ಕಾರಣ ಸಾಫ್ಟವೇರ್‌, ಆ್ಯಪ್‌ ರೆಡಿ ಮಾಡಲಾಗುತ್ತಿದೆ ಎಂದರು. ಗೃಹಲಕ್ಷ್ಮಿ ಯೋಜನೆ ಸಂಬಂಧ ಪ್ರತಿ ಬೂತ್‌ನಲ್ಲಿ 4 ಜನರನ್ನು ನೇಮಕ ಮಾಡುತ್ತಿದ್ದೇವೆ. 1.13 ಕೋಟಿ ಕುಟುಂಬಗಳು ಇದರ ಉಪಯೋಗ ಪಡೆಯಲಿವೆ. ಯೋಜನೆ ಬಿಡುಗಡೆ ಮಾಡಿದಾಗ ಗೊಂದಲ ಮೂಡಬಾರದು ಎಂಬ ಒಂದೇ ಕಾರಣಕ್ಕೆ ಸೂಕ್ಷ್ಮವಾಗಿ ಸಾಫ್‌್ಟವೇರ ರೆಡಿ ಮಾಡುತ್ತಿದ್ದೇವೆ. ಬಹಳ ಬೇಗ ಇದನ್ನು ಬಿಡುಗಡೆ ಮಾಡುತ್ತೇವೆ ಎಂದರು.

ಮನೆ ಯಜಮಾನಿಗೆ ಗೃಹಲಕ್ಷ್ಮಿ ಸವಲತ್ತು ಸಿಗಬೇಕು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆಯೇ ಹೊರತು, ಇದರಲ್ಲಿ ಬೇರೇನೂ ಇಲ್ಲ. ಭಾರತೀಯ ಆಹಾರ ನಿಗಮ (ಎಫ್‌ಸಿಐ)ದವರು ಮೊದಲು ಕೊಡುತ್ತೇವೆಂದು ಹೇಳಿ ಇದೀಗ ಹಿಂಪಡೆದುಕೊಂಡಿದ್ದಾರೆ. ರಾಜ್ಯದ ಜನ ವಿಚಾರ ಮಾಡಬೇಕಾಗಿಲ್ಲ. ನಾವು ಏನು ಭರವಸೆ ಕೊಟ್ಟಿದ್ದೇವೆಯೋ ಅದನ್ನು ಈಡೇರಿಸುತ್ತೇವೆ. ಜಾರ್ಖಂಡ್‌, ತೆಲಂಗಾಣ, ಪಂಜಾಬ್‌ ಜತೆ ಚರ್ಚೆ ಆಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ನಮ್ಮ ಆಹಾರ ಸಚಿವರು ಕೊಡುತ್ತಾರೆ ಎಂದರು.

ಗೃಹಲಕ್ಷ್ಮಿ ಯೋಜನೆಯ ಗುಡ್‌ ನ್ಯೂಸ್‌: ಗ್ರಾ.ಪಂ. ಮಟ್ಟದ ಬಾಪೂಜಿ ಸೇವಾ ಕೇಂದ್ರದಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ

ಗೃಹಜ್ಯೋತಿ ಕೌಂಟರ್‌ ಪ್ರಾರಂಭ

ಟೇಕಲ್‌: ಕಾಂಗ್ರೆಸ್‌ನ ಐದು ಗ್ಯಾರಂಟಿಯಲ್ಲಿ ಗೃಹಜ್ಯೋತಿ ಯೋಜನೆಯು ಭಾನುವಾರ ಟೇಕಲ್‌ನ ಬೆಸ್ಕಾಂ ಕಛೇರಿಯಲ್ಲಿ ಪ್ರಾರಂಭಸಲಾಯಿತು. ಈ ಬಗ್ಗೆ ಟೇಕಲ್‌ ಬೆಸ್ಕಾಂನ ಸೆಕ್ಷನ್‌ ಅಧಿಕಾರಿ ಮಂಜುನಾಥ್‌ ಮಾತನಾಡಿ, ಸೋಮವಾರದಿಂದ ಬೆಸ್ಕಾಂ ಕಛೇರಿಯಲಿ ಕೌಂಟರ್‌ ಪ್ರಾರಂಭವಾಗುತ್ತಿದ್ದು, ಗ್ರಾಹಕರು ತಮ್ಮ ಆಧಾರ ಕಾರ್ಡ್‌, ತಮ್ಮ ಮನೆಯ ವಿದ್ಯುತ್‌ ಬಿಲ್‌ ತರಬೇಕು. ಬಾಡಿಗೆ ಮನೆಯವರು ಮನೆಯ ಬಾಡಿಗೆಯ ಕರಾರು ಪತ್ರ ಇಲ್ಲವೆ ಲಿಜ್‌ ಆಗ್ರಿಮೆಂಟ್‌ ಜೊತೆಗೆ ಆಧಾರ ಕಾರ್ಡ್‌, ವಿದ್ಯುತ್‌ ಬಿಲ್‌ ತರಬೇಕು ಎಂದು ಹೇಳಿದರು. ಇದೇ ವೇಳೆ ಟೇಕಲ್‌ ನಾಡಕಚೇರಿಯ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬೆಸ್ಕಾಂನಿಂದ ನಾಡಕಚೇರಿ ಮುಂದೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಬ್ಯಾನರ್‌ ಹಾಕಲಾಗಿತ್ತು.

Latest Videos
Follow Us:
Download App:
  • android
  • ios