Asianet Suvarna News Asianet Suvarna News

Ghar vapasi: 'ಬೆಂಗಳೂರಿಗೆ ಹೋಗಿ ನಿರ್ಧರಿಸುತ್ತೇನೆ' ಬಿಜೆಪಿ ಶಾಸಕ ಹೆಬ್ಬಾರ್ ನಡೆ ಸಸ್ಪೆನ್ಸ್!

ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ‘ಬಾಂಬೆ ಬಾಯ್‌್ಸ’ ಕಾಂಗ್ರೆಸ್‌ಗೆ ವಾಪಸಾಗುವ ಸುದ್ದಿಗಳ ಬೆನ್ನಲ್ಲೇ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಅವರು ಈ ಕುರಿತು ಏನನ್ನೂ ಸ್ಪಷ್ಟವಾಗಿ ಹೇಳದಿದ್ದರೂ ಬೆಂಗಳೂರಿಗೆ ಹೋಗಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಹೆಬ್ಬಾರ್‌ ಅವರ ಈ ಹೇಳಿಕೆ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Ghar vapasii bombay boys bjp MLA Shivram Hebbars decision is suspenseful at bengaluru rav
Author
First Published Aug 18, 2023, 4:28 AM IST

ಮುಂಡಗೋಡ (ಆ.18) :  ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ‘ಬಾಂಬೆ ಬಾಯ್‌್ಸ’ ಕಾಂಗ್ರೆಸ್‌ಗೆ ವಾಪಸಾಗುವ ಸುದ್ದಿಗಳ ಬೆನ್ನಲ್ಲೇ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಅವರು ಈ ಕುರಿತು ಏನನ್ನೂ ಸ್ಪಷ್ಟವಾಗಿ ಹೇಳದಿದ್ದರೂ ಬೆಂಗಳೂರಿಗೆ ಹೋಗಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಹೆಬ್ಬಾರ್‌ ಅವರ ಈ ಹೇಳಿಕೆ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮುಂಡಗೋಡದಲ್ಲಿ ಗುರುವಾರ ಪತ್ರಕರ್ತರು ಕಾಂಗ್ರೆಸ್‌ ಸೇರ್ಪಡೆ ಕುರಿತು ಪದೇ ಪದೇ ಪ್ರಶ್ನಿಸಿದಾಗ, ಬೆಂಗಳೂರಿಗೆ ಹೋಗಿ ಚರ್ಚೆ ನಡೆಸಿ ತಿಳಿಸುತ್ತೇನೆ ಎಂದಷ್ಟೇ ತಿಳಿಸಿದರು. ಆದರೆ ಯಾರೊಂದಿಗೆ ಚರ್ಚೆ ನಡೆಸುತ್ತೇನೆ ಎಂಬುದನ್ನು ಹೇಳಿಲ್ಲ. ಇದೇ ವೇಳೆ ಮಾಜಿ ಸಚಿವರು ಹಾಗೂ ತಮ್ಮ ಜತೆಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಮುನಿರತ್ನ ಹಾಗೂ ಸೋಮಶೇಖರ ಅವರ ಹೇಳಿಕೆ ಕುರಿತು ಪ್ರಸ್ತಾಪಿಸಿದಾಗ, ಯಾರೇನು ಹೇಳುತ್ತಾರೋ ಅದು ನನಗೆ ಗೊತ್ತಿಲ್ಲ. ಆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ನನ್ನ ಹೇಳಿಕೆ ನನಗೆ ಮುಖ್ಯ, ಅವರ ಹೇಳಿಕೆಗಳ ಬಗ್ಗೆ ನಾನು ಉತ್ತರಿಸಲು ಹೋಗಲ್ಲ ಎಂದರು.

Ghar Vapasi: ನನ್ನ ವಿರುದ್ಧ ಪಕ್ಷದಲ್ಲೇ ಪಿತೂರಿ; ಬಿಜೆಪಿಯ ಶಾಸಕ ಸೋಮಶೇಖರ್‌ ಬಹಿರಂಗ ಅತೃಪ್ತಿ

ಇದಕ್ಕೂ ಮುನ್ನ ಅವರು ಮುಂಡಗೋಡದಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರೂ ಕಾಂಗ್ರೆಸ್‌ ಸೇರ್ಪಡೆ ಕುರಿತಾಗಲಿ, ಬಿಜೆಪಿ ತೊರೆಯುವ ಕುರಿತಾಗಲಿ ಯಾವುದೇ ಮಾತನಾಡಲಿಲ್ಲ. ಒಟ್ಟಿನಲ್ಲಿ ಹೆಬ್ಬಾರ್‌ ಅವರ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿದೆ.

Follow Us:
Download App:
  • android
  • ios