ಜರ್ಮನ್ ಯುವತಿಯ ಕನ್ನಡ ಪ್ರೇಮ, ರಾಜ್ಯದಲ್ಲಿದ್ದೂ ಕನ್ನಡ ಕಲಿಯದ ಹಿಂದಿವಾಲಾಗಳೇ ಇಲ್ಲಿ ನೋಡಿ!
ಜರ್ಮನಿ ಮೂಲದ ಮಹಿಳೆ ಬೆಂಗಳೂರಿನ ಕೆಆರ್ ಮಾರ್ಕೆಟ್‌ನ ಸ್ಥಳೀಯ ವ್ಯಾಪಾರಿಯೊಂದಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬೆಂಗಳೂರು (ಅ.11): ಉದ್ಯೋಗ, ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದು ಹತ್ತನ್ನೆರಡು ವರ್ಷಗಳಿಂದ ಸಿಲಿಕಾನ್ ಸಿಟಿಯಲ್ಲಿ ಬದುಕುತ್ತಿದ್ದರೂ, ಕನ್ನಡಿಗರೊಂದಿಗೆ ಕನ್ನಡ ಮಾತನಾಡದ ಹಿಂದಿವಾಲಗಳು ಜೀವನಪೂರ್ತಿ ಕನ್ನಡದ ಅನ್ನ ನೀರು ಕುಡಿದು ಕುಡಿದು ಕನ್ನಡ ಕಲಿಯದ ಹಿಂದಿವಾಲಗಳ ನಡುವೆ ಜರ್ಮನಿಯಿಂದ ಬಂದು ಇಲ್ಲಿನ ಜನರೊಂದಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡುವ ಫಾರಿನ್ ಗರ್ಲ್ ಕನ್ನಡಿಗರ ಮನಸು ಗೆದ್ದಿದ್ದಾಳೆ.
ಕರ್ನಾಟಕದಲ್ಲಿದ್ದೂ ಕನ್ನಡ ಕಲಿಯದ ಹಿಂದಿವಾಲಗಳು ನಾಚಿಕೊಳ್ಳುವಂತೆ ಸ್ಪಷ್ಟವಾಗಿ, ಸುಲಲಿತವಾಗಿ ಕನ್ನಡ ಮಾತನಾಡುತ್ತಾಳೆ ಈಕೆ. ಜರ್ಮನ್ ಯುವತಿಯ ಕನ್ನಡ ಪ್ರೇಮಕ್ಕೆ ಕನ್ನಡಿಗರು ಸಲಾಂ ಎಂದಿದ್ದಾರೆ. ಮೂಲತಃ ಜರ್ಮನಿಯಿಂದ ಬೆಂಗಳೂರಿಗೆ ಬಂದಿರುವ ಯುವತಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಯುವತಿಯ ಕನ್ನಡ ಪ್ರೇಮ ಎಂತಹದ್ದೆಂದರೆ,ಇಲ್ಲಿನ ಸ್ನೇಹಿತರು, ಮಕ್ಕಳು, ಸಹೋದ್ಯೋಗಿಗಳು, ಸಣ್ಣಪುಟ್ಟ ವ್ಯವಹಾರಕ್ಕೆ ಸ್ಥಳೀಯರೊಂದಿಗೆ ಕನ್ನಡವನ್ನೇ ಮಾತನಾಡುತ್ತಾಳೆ. ಕರ್ನಾಟಕದಲ್ಲಿದ್ರೂ ಕನ್ನಡ ಮಾತನಾಡದ ಹಿಂದಿವಾಲಾಗಳಿಗೆ ಇದನ್ನೊಮ್ಮೆ ತೋರಿಸಬೇಕು ಎಂದೆನಿಸದಿರದು.
ನಾರ್ತ್ ಇಂಡಿಯನ್ಸ್ ಇಲ್ಲವೆಂದರೆ ಬೆಂಗಳೂರು ಖಾಲಿ ಖಾಲಿ ಎಂದಿದ್ದ ಸುಗಂಧ ಶರ್ಮಾಗೆ ಮತ್ತೊಂದು ಸಂಕಷ್ಟ!
ನಗರದ ಕೆಆರ್ ಮಾರ್ಕೆಟ್‌ಗೆ ತರಕಾರಿ ಖರೀದಿಗೆ ಹೋಗಿರುವ ಯುವತಿ ಅಲ್ಲಿನ ವ್ಯಾಪಾರಿಯೊಬ್ಬರ ಜೊತೆ ಕನ್ನಡದಲ್ಲಿ ಮಾತನಾಡಿರುವುದು ವೈರಲ್ ಆಗಿದೆ. 'ಈಗಿನ್ನೂ ಕನ್ನಡ ಭಾಷೆ ಕಲಿಯುತ್ತಿದ್ದೇನೆ' ಎನ್ನುವ ಆಕೆಯ ಕಂಗಳಲ್ಲಿ ಕನ್ನಡ ಪ್ರೇಮ ಎದ್ದು ಕಾಣುತ್ತಿದೆ. ಯುವತಿಯ ಕನ್ನಡ ಅಭಿಮಾನಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ಸ್ ಸುರಿಮಳೆಗೈದಿರುವ ಕನ್ನಡಿಗರು.