Asianet Suvarna News Asianet Suvarna News

ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಗೆಲುವಿಗೆ 'ಗೆದ್ದು ಬಾ ಓ ಇಂಡಿಯಾ..' ಸಾಂಗ್ ಬಿಡುಗಡೆ; ವಿಡಿಯೋ ಇಲ್ಲಿದೆ!

ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಗೆಲುವಿನ ಅಭಿಯಾನಕ್ಕೆ ಶುಭ ಕೋರಿ ದಾವಣಗೆರೆಯ ಬ್ಲ್ಯಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ ತಂಡ ಸಿದ್ಧಪಡಿಸಿರುವ ಗೆದ್ದು ಬಾ ಓ ಇಂಡಿಯಾ.. ಭಾರತೀಯ ಕ್ರಿಕೆಟ್ ಗೀತೆ- 2023ನ್ನು  ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

Geddu Ba O India.. song released for Indias victory in Cricket World Cup rav
Author
First Published Oct 12, 2023, 7:02 PM IST

ವರದಿ: ವರದರಾಜ್ 

ದಾವಣಗೆರೆ (ಅ.12): ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಗೆಲುವಿನ ಅಭಿಯಾನಕ್ಕೆ ಶುಭ ಕೋರಿ ದಾವಣಗೆರೆಯ ಬ್ಲ್ಯಾಕ್ ಕ್ಯಾಟ್ಸ್ ಕ್ರಿಯೇಟಿವ್ ಲ್ಯಾಬ್ ತಂಡ ಸಿದ್ಧಪಡಿಸಿರುವ ಗೆದ್ದು ಬಾ ಓ ಇಂಡಿಯಾ.. ಭಾರತೀಯ ಕ್ರಿಕೆಟ್ ಗೀತೆ- 2023ನ್ನು  ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ಹಳೆ ಪಿಬಿ ರಸ್ತೆಯ ಅರುಣ ಚಿತ್ರಮಂದಿರದ ಪಕ್ಕದಲ್ಲಿರುವ ಬಿಎಲ್‌ಸಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ಗೆದ್ದು ಬಾ ಓ ಇಂಡಿಯಾ... ಪ್ಯಾನ್ ಇಂಡಿಯಾ ವಿಡಿಯೋ ಸಾಂಗ್‌ನ್ನು ಅಧಿಕೃತವಾಗಿ ಯೂ-ಟೂಬ್ ಇತರೆ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಸಾಂಗ್  ನಿರ್ದೇಶಕ ವಿ.ಜಿ.ಎಸ್. ಬಾಲು, ಪ್ರತಿ ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಭಾರತ ತಂಡ ಚಾಂಪಿಯನ್‌ಶಿಪ್ ಆಗಲಿ ಎಂದು ಶುಭ ಹಾರೈಕೆಯ ವಿಡಿಯೋ ಸಾಂಗ್ ಬಿಡುಗಡೆ ಮಾಡಿಕೊಂಡು ಬರುತ್ತಿದ್ದೇವೆ.  2011,2015,2019  ರಲ್ಲಿ 'ಗೆದ್ದು ಬಾ ಇಂಡಿಯಾ' ಹಾಡು ಸಿದ್ಧಪಡಿಸಿ, ಬಿಡುಗಡೆ ಮಾಡಲಾಗಿತ್ತು ಎಂದು ತಿಳಿಸಿದರು.

DDCA ಅಟೆಂಟರ್‌ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಟೀಂ ಇಂಡಿಯಾ..! ಮತ್ತೆ ಫ್ಯಾನ್ಸ್ ಹೃದಯ ಗೆದ್ದ ಭಾರತ

ಈ ಬಾರಿಯ ವಿಶ್ವಕಪ್ ಭಾರತದಲ್ಲೇ ನಡೆಯುತ್ತಿರುವುದರಿಂದ ಏನಾದರೂ ವಿಶೇಷವಾಗಿರಬೇಕು ಎಂದು 'ಗೆದ್ದು ಬಾ ಓ ಇಂಡಿಯಾ...' ಕ್ರಿಕೆಟ್ ಗೀತೆಯನ್ನ ಮೊದಲು ಕನ್ನಡದಲ್ಲಿ ಮಾತ್ರ ಹೊರ ತರಲು ಯೋಜನೆ ಇತ್ತು. ವಿಶ್ವ ಕಪ್ ಬರೀ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೇ ಅನ್ವಯಿಸುವುದರಿಂದ ಐದು ಭಾಷೆಯಲ್ಲಿ ಹೊರ ತರುವ ಗೆಳೆಯರ ಸಲಹೆ, ಸೂಚನೆಯಂತೆ ಕನ್ನಡದ ಜೊತೆಗೆ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆ ಯಲ್ಲಿ ಸಿದ್ಧಪಡಿಸಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಬಂದಿರಬಹುದು. ಆದರೆ, ಈ ರೀತಿ ಐದು ಭಾಷೆಯಲ್ಲಿ ಥೀಮ್ ಸಾಂಗ್ ದೇಶದಲ್ಲೇ ಇದೇ ಪ್ರಥಮ ಎಂದು ತಿಳಿಸಿದರು.

ಬಿ.ಜಿ. ಕಾರ್ತಿಕ್ ಮಾತನಾಡಿ, ವಾಸ್ತವವಾಗಿ ವಿಶ್ವಕಪ್ ಪ್ರಾರಂಭದ ಮುನ್ನವೇ ಥೀಮ್ ಸಾಂಗ್ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ, ಮಳೆ ಮತ್ತು ಮಲಯಾಳಂ ಇತರೆ ಭಾಷೆಯಲ್ಲಿ ಹಾಡು ಸಿದ್ಧಪಡಿಸುವ ಕೆಲಸ ವಿಳಂಬವಾಯಿತು. ಈಗ ಅಹಮದಬಾದ್‌ನಲ್ಲಿ ನಡೆಯುವ ಭಾರತ-ಪಾಕಿಸ್ತಾನ ಪಂದ್ಯದ ಮುನ್ನವೇ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

World Cup 2023: 'ಪಾಕ್ ಎದುರಿನ ಪಂದ್ಯಕ್ಕಿಂತ ನನ್ನಮ್ಮ ನನಗೆ ಮುಖ್ಯ': ಜಸ್ಪ್ರೀತ್ ಬುಮ್ರಾ ಹೀಗಂದಿದ್ದೇಕೆ?

ಭಾರತೀಯ ಕ್ರಿಕೆಟ್ ಗೀತೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಒಳಗೊಂಡಂತೆ ಆಯಾಯ ರಾಜ್ಯದ ಸಂಸ್ಕೃತಿ, ಸಂಪ್ರದಾಯ, ವೇಷಭೂಷಣ, ಕಲಾಪ್ರಕಾರಗಳನ್ನು ತೋರಿಸಲಾಗಿದೆ. ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ 25 ಅಡಿ ಎತ್ತರದ ವಿಶ್ವಕಪ್ ಪ್ರತಿಕೃತಿ ಸಿದ್ಧಪಡಿಸಿ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೊತೆ ಚಿತ್ರೀಕರಣ ಮಾಡಲಾಗಿದೆ. 18 ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆ. ಭಾರತ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲಿ ಎಂಬ ಮಹದಾಸೆಯಿಂದ ಭಾರತೀಯ ಕ್ರಿಕೆಟ್ ಗೀತೆ ವಿಡಿಯೋ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು. ಡಿ. ಶೇಷಾಚಲ್, ನವೀನ್, ಅಮಿತ್ ಪಾಟೀಲ್ ಇತರರು ಇದ್ದರು.

ಗೆದ್ದು ಬಾ ಓ ಇಂಡಿಯಾ ಹಾಡು ವೀಕ್ಷಿಸಲು ಕ್ಲಿಕ್ ಮಾಡಿ 

Follow Us:
Download App:
  • android
  • ios