ಇಂತಹ ಕೆಲಸದಲ್ಲಿ ತೊಡಗಿದ್ದ ಮಹಿಳೆ ಸೇರಿ 21 ಮಂದಿ ಅರೆಸ್ಟ್

ರಾಜ್ಯದಲ್ಲಿ ಖತರ್ನಾಕ್ ದಂಧೆಕೋರರು ಇನ್ನೂ ತಮ್ಮ ದಂಧೆ ಬಿಟ್ಟಿಲ್ಲ. ಈಗಾಗಲೇ ಗಾಂಜಾ ಸಾಕಷ್ಟು ಸದ್ದು ಮಾಡುತ್ತಿದ್ದರೂ ತಮ್ಮ ಕೆಲಸ ಬಿಡುವ ಹಾಗೆ ಕಾಣುತ್ತಿಲ್ಲ.

Ganja Case 21 People Arrested in Karnataka

ಬೆಂಗಳೂರು (ಸೆ.14):  ರಾಜ್ಯದಲ್ಲಿ ಭಾನುವಾರವೂ ಪ್ರತ್ಯೇಕವಾಗಿ ಏಳು ಕಡೆಗಳಲ್ಲಿ ಗಾಂಜಾ ವಿರುದ್ಧ ಕಾರ‍್ಯಚರಣೆ ಮುಂದವರಿಸಿರುವ ಪೊಲೀಸರು, ಮಹಿಳೆ ಸೇರಿ 21 ಮಂದಿ ಬಂಧಿಸಿ, ಲಕ್ಷಾಂತರ ಮೌಲ್ಯದ 244 ಕೆ.ಜಿಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕಳೆದ 16 ದಿನಗಳಲ್ಲಿ ಬರೋಬ್ಬರಿ 3153 ಕೆ.ಜಿಗೂ ಹೆಚ್ಚು ಗಾಂಜಾ ಜಪ್ತಿ ಮಾಡಿದಂತಾಗಿದ್ದು, 297 ಮಂದಿಯನ್ನು ಸೆರೆ ಹಿಡಿದು, 122 ಪ್ರಕರಣ ದಾಖಲಿಸಲಾಗಿದೆ.

ಮೂರು ಕ್ವಿಂಟಲ್‌ ಗಾತ್ರದ ಬೃಹತ್‌ ಗಾಂಜಾ ಪತ್ತೆಯಾದ ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಭಾರಿ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿದೆ. ಭಾನುವಾರ ಕಲಬುರಗಿಯ ಚಿಂಚೋಲಿಯಲ್ಲಿ 10.50 ಲಕ್ಷ ರು. ಮೌಲ್ಯದ ಬರೋಬ್ಬರಿ 224 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡಿರುವ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

'ಜಮೀರ್- ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ, ಕ್ಯಾಸಿನೋಗೆ ಹೋದ ತಕ್ಷಣ ಅಪರಾಧವಲ್ಲ' .

ಹುಬ್ಬಳ್ಳಿಯಲ್ಲಿ 6 ಕೆ.ಜಿ ಗಾಂಜಾ ಜಪ್ತಿಯಾಗಿದ್ದು, ಪೊಲೀಸರು ರಾಜಸ್ತಾನ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ಹಾಸನದ ಚನ್ನರಾಯಪಟ್ಟಣ ತಾಲೂಕಿನಲ್ಲಿ 4.5 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದು, ಆರೋಪಿ ಪರಾರಿಯಾಗಿದ್ದಾನೆ. ದಾವಣಗೆರೆಯ ಹರಿಹರದಲ್ಲಿ ಮೂವರನ್ನು ಬಂಧಿಸಿ, 1.25 ಲಕ್ಷ ಮೌಲ್ಯದ 4.1 ಕೆ.ಜಿ ಗಾಂಜಾ, 1 ಲಕ್ಷ ರು. ಮೌಲ್ಯದ ಆಟೋ ವಶಪಡಿಸಿಕೊಳ್ಳಲಾಗಿದೆ. ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ಓರ್ವ ಮಹಿಳೆ ಸೇರಿ ಆರು ಆರೋಪಿಗಳನ್ನು ಬಂಧಿಸಿ, 15 ಸಾವಿರ ಮೌಲ್ಯದ 2.3 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಮೈಸೂರಿನಲ್ಲೂ ಐವರನ್ನು ಬಂಧಿಸಿ, ಅರ್ಧ ಕೆ.ಜಿ, ರಾಮನಗರದ ಕನಕಪುರ ತಾಲೂಕಿನಲ್ಲಿ ಆರೋಪಿ ಬಂಧಿಸಿ 2.600 ಕೆ.ಜಿ, ಬಳ್ಳಾರಿಯ ಹೂವಿನಹಡಗಲಿಯಲ್ಲಿ ಮೂವರನ್ನು ಸೆರೆ ಹಿಡಿದು 2 ಸಾವಿರ ಮೌಲ್ಯದ ಗಾಂಜಾ, ಹಾವೇರಿಯ ಹಿರೇಕೆರೂರಿನಲ್ಲಿ ಓರ್ವನನ್ನು ಬಂಧಿಸಿ, 20 ಸಾವಿರ ರು. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Latest Videos
Follow Us:
Download App:
  • android
  • ios