Exclusive news: ಹಿಂದೂ ದೇವರುಗಳು ಹೊರಗೆ, ಬುದ್ಧ, ಬಸವ, ಅಂಬೇಡ್ಕರ್ ಮೂರ್ತಿ ಒಳಗೆ! ವೈದಿಕ ಧರ್ಮ ತ್ಯಜಿಸಿದ ಕುಟುಂಬ!
ಮನುಸ್ಮೃತಿ ದಹನ ದಿನದಂದು ಗದಗದ ಪ್ರಗತಿಪರ ಹೋರಾಟಗಾರ ಶರೀಫ್ ಬಿಳೆಯಲಿ ಕುಟುಂಬವು ಹಿಂದೂ ಧರ್ಮದ ದೇವರುಗಳ ಮೂರ್ತಿಗಳನ್ನು ತೆಗೆದು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ತಾಯಿಯ ಅನಾರೋಗ್ಯದ ಸಂದರ್ಭದಲ್ಲಿ ದೇವರು ಸಹಾಯ ಮಾಡಲಿಲ್ಲ ಎಂದು ಶರೀಫ್ ಬಿಳೆಯಲಿ ತಿಳಿಸಿದ್ದಾರೆ.
ಗದಗ (ಡಿ.26): ಮನಸ್ಮೃತಿ ದಹನ ದಿನದಂದು ಹಿಂದೂ ಧರ್ಮದ ದೇವರುಗಳನ್ನ ಜಗುಲಿಯಿಂದ ಎತ್ತಿ ಹೊರಹಾಕುವ ಮೂಲಕ ಗದಗನ ಪ್ರಗತಿಪರ ಹೋರಾಟಗಾರ ಶರೀಫ್ ಬಿಳೆಯಲಿ ಕುಟುಂಬ ಸುದ್ದಿಯಾಗಿದೆ.
ಮನುಸ್ಮೃತಿ ದಹನ ದಿನದಂದು ವೈದಿಕ ಧರ್ಮ, ಜಾನಪದ ದೇವರುಗಳನ್ನ ತೆಜಿಸುವ ನಿರ್ಧಾರ ಮಾಡಿದ್ದ ಶರೀಫ್ ಅವರ ಕುಟುಂಬ, ಗುಲಿಗೆಮ್ಮ, ಯಲ್ಲಮ್ಮ, ಲಕ್ಷ್ಮೀ ದೇವರುಗಳನ್ನ ಮನೆಯಿಂದ ಹೊರ ಹಾಕಿ ಬೌದ್ಧ ಧರ್ಮ ಪಾಲನೆ ಮಾಡುವತ್ತ ಹೆಜ್ಜೆ ಇಟ್ಟಿದೆ.
ಪತ್ನಿ ಗಾಯಿತ್ರಿ ಜೊತೆ ಸೇರಿ ಮನೆಯ ಜಗುಲಿಯಲ್ಲಿದ್ದ ದೇವರುಗಳನ್ನ ಪ್ರಗತಿಪರ ಹೋರಾಟಗಾರ ಶರೀಫ್ ಹೊರಹಾಕಿದರು. ನಂತರ ಪ್ರಗತಿಪರ ಸ್ನೇಹಿತರು ಶರೀಫ್ ಕುಟುಂಬಕ್ಕೆ ಬುದ್ಧ ಬಸವ ಅಂಬೇಡ್ಕರ್ ಮೂರ್ತಿಯನ್ನ ನೀಡಿದರು. ಮೂರ್ತಿಯನ್ನ ತೆಗೆದುಕೊಂಡು ಮನೆ ತುಂಬಿಸಿಕೊಂಡ ಶರೀಫ್ ಕುಟುಂಬ, ಇನ್ಮುಂದೆ ಬುದ್ಧ ಬಸವ ಅಂಬೇಡ್ಕರ್ ನಡೆದ ದಾರಿಯಲ್ಲಿ ನಡೆಯೋದಾಗಿ ಸಂಕಲ್ಪ ಮಾಡಿದರು.
ಬಿಜೆಪಿ, ಆರ್‌ಎಸ್‌ಎಸ್ ಸಂವಿಧಾನ ವಿರೋಧಿಗಳು: ಸಿಎಂ ಸಿದ್ದರಾಮಯ್ಯ
ಶರೀಫ್, ಗಾಯಿತ್ರಿ ಕುಟುಂಬಕ್ಕೆ ಹಿರಿಯ ಸಾಹಿತಿ ಬಸವರಾಜ ಸೂಳಿಭಾವಿ ಸೇರಿದಂತೆ ಅನೇಕ ಪ್ರಗತಿಪರರ ಸಾಥ್ ನೀಡಿದರು. ಮೂರ್ತಿ ತ್ಯಜಿಸಿ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿನಿಧಿ ಜೊತೆ ಮಾತನಾಡಿದ ಶರೀಫ್ ಬಿಳೆಯಲಿ ಅವರು, ನಮ್ಮ ತಾಯಿ ನಿತ್ಯ ದೇವರ ಪೂಜೆ ಮಾಡಿದರು ಏನೂ ಲಾಭವಾಗಲಿಲ್ಲ. ಅನಾರೋಗ್ಯಕ್ಕೆ ತುತ್ತಾದಾಗ ಅವಳು ನಂಬಿದ ದೇವರು ಸಹಾಯಕ್ಕೆ ಬರಲಿಲ್ಲ, ಅದೆಲ್ಲವನ್ನೂ ನೋಡಿ ಹೊಸ ಆಲೋಚನೆ ಇಟ್ಟುಕೊಂಡು ಬುದ್ಧ, ಬಸವ, ಅಂಬೇಡ್ಕರ್ ಅವರನ್ನ ಸ್ವೀಕರಿಸಿದ್ದೇವೆ. ಜ್ನಾನದ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದ್ದೇವೆ ಎಂದರು.
1927 ರಲ್ಲಿ ಘೋಷಣೆಯ ಕೇಂದ್ರವಾಗಿದ್ದ ಮನುಸ್ಮೃತಿಯನ್ನ ಧಹಿಸಿದ ದಿನದಿಂದೇ ನಾವೂ ದೇವರುಗಳನ್ನ ಹೊರಹಾಕಿದ್ದೇವೆ. ಅವರ ಮಾರ್ಗದರ್ಶನದಂತೆ ಬೌದ್ಧ ಧರ್ಮ ಸ್ವೀಕಾರ ಮಾಡಿದ್ದೇವೆ. ಇನ್ನು ಶರೀಫ್ ಅವರ ಪತ್ನಿ ಗಾಯತ್ರಿ ಮಾತನಾಡಿ, ಪೂಜಾರಿ ಮನೆತನದಿಂದನೇ ಬಂದವರು ನಾವು. ಆದ್ರೆ ನಂತರದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅಧ್ಯಾಯನದಿಂದ ಪರಿವರ್ತನೆಯಾಗಿದೆ. ಹಿರಿಯರು ವಿರೋಧ ಮಾಡಿದ್ರೆ ಅವರಿಗೂ ತಿಳಿ ಹೇಳುತ್ತೇವೆ. ಹೆಣ್ಣಿಗೆ ಗೌರವ ಸಿಕ್ಕಿದ್ದು ಅಂಬೇಡ್ಕರ್ ಅವರಿಂದ. ದೈವ ಪೂಜೆಯಿಂದ ಹಣ ಖರ್ಚು ಆಗ್ತಿದೆ ಲಾಭವಿಲ್ಲ ಎಂದ್ರು.
ಮದನಿ ಮೊಂಡುವಾದಕ್ಕೆ ಬೆಂಬಲ, ಮನುಸ್ಮೃತಿ ಅಲ್ಲಾ ಮೇಲೆ ನಂಬಿಕೆ ಇಟ್ಟಿದ್ದ, ಸಾಜಿದ್ ರಶೀದಿ ಹೊಸ ವಿವಾದ!
ಇನ್ನು ಕಾರ್ಯಕ್ರಮಕ್ಕೆ ಬಂದಿದ್ದ ಹಿರಿಯ ಸಾಹಿತಿ ಬಸವರಾಜ್ ಸೂಳಿಭಾವಿ ಮಾತನಾಡಿ 33 ಕೋಟಿ ದೇವರಿದ್ದರು ದೇಶದಲ್ಲಿ ಅಸಮಾನತೆ, ಬಡತನ ತುಂಬಿದೆ. ದೇವರು ಅನ್ನೋದು ಕಲ್ಪನೆ, ಜನರ ದೌರ್ಬಲ್ಯ ದುರುಪಯೋಗ ಮಾಡಿಕೊಳ್ಳುವದ್ದಾಗಿದೆ.. ಮೌಢ್ಯ ತುಂಬಿದ ದೇವರನ್ನ ಕಿತ್ತುಹಾಕಿದಾಗ ಜನರಿಗೆ ಒಳ್ಳೆದಾಗುತ್ತೆ ಎಂದರು.