Asianet Suvarna News Asianet Suvarna News

FRUITS ತಂತ್ರಾಂಶ ಅಳವಡಿಕೆಯಲ್ಲಿ ಗದಗ ರಾಜ್ಯಕ್ಕೆ ಪ್ರಥಮ! ಏನಿದು ಫ್ರೂಟ್ಸ್ ತಂತ್ರಾಂಶ?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ, ರೈತರಿಗೆ ಹೆಚ್ಚಿನ ಅನುಕೂಲಕಾರಿ ಎಂದು ಹೇಳಲಾಗುತ್ತಿರುವ ಫ್ರುಟ್ಸ್ ತಂತ್ರಾಂಶ ಅಳವಡಿಕೆ ಎಲ್ಲಾ ಜಿಲ್ಲೆಗಳಲ್ಲಿಯೂ ಭರದಿಂದ ನಡೆಯುತ್ತಿದೆ. ಅಗತ್ಯ ದಾಖಲೆ ತಂತ್ರಾಂಶದಲ್ಲಿ ದಾಖಲೀಕರಣ ಮಾಡುವಲ್ಲಿ ಗದಗ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.

Gadag first for the state in implementation Farmer Registration and Unified Beneficiary in For mation System rav
Author
First Published Nov 28, 2023, 1:19 PM IST

ಶಿವಕುಮಾರ ಕುಷ್ಟಗಿ

ಗದಗ (ನ.28) :  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ, ರೈತರಿಗೆ ಹೆಚ್ಚಿನ ಅನುಕೂಲಕಾರಿ ಎಂದು ಹೇಳಲಾಗುತ್ತಿರುವ ಫ್ರುಟ್ಸ್ ತಂತ್ರಾಂಶ ಅಳವಡಿಕೆ ಎಲ್ಲಾ ಜಿಲ್ಲೆಗಳಲ್ಲಿಯೂ ಭರದಿಂದ ನಡೆಯುತ್ತಿದೆ. ಅಗತ್ಯ ದಾಖಲೆ ತಂತ್ರಾಂಶದಲ್ಲಿ ದಾಖಲೀಕರಣ ಮಾಡುವಲ್ಲಿ ಗದಗ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.

ಎಫ್.ಐ.ಡಿ. (ಫಾರ್ಮರ್ ಐಡೆಂಟಿಫಿಕೇಶನ್ ಡಾಕ್ಯುಮೆಂಟ್) ಇದನ್ನು ಪ್ರತಿಯೊಬ್ಬ ರೈತರು ಮಾಡಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ರೈತರ ಎಲ್ಲಾ ಸರ್ವೇ ನಂಬರ್‌ಗಳು ಇದರಲ್ಲಿ ಕಡ್ಡಾಯವಾಗಿ ಜೋಡಣೆಯಾಗಬೇಕು ಇದರಿಂದಾಗಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ಕಾರದ ಸೌಲಭ್ಯಗಳು, ರಿಯಾಯತಿ ದರದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ, ಸಹಾಯಧನ, ಬೆಳೆ ವಿಮೆ ಸೇರಿದಂತೆ ಎಲ್ಲವಕ್ಕೂ ಈ ಎಫ್‌ಐಡಿ, ಫ್ರೂಟ್ಸ್‌ ತಂತ್ರಾಂಶ ಅಗತ್ಯ. ಇನ್ನು ಜಂಟಿ ಖಾತೆಗಳಲ್ಲಿದ್ದಲ್ಲಿ ಪ್ರತಿಯೊಬ್ಬರೂ ಪ್ರತ್ಯೇಕ ಎಫ್ಐಡಿ ಪಡೆದುಕೊಂಡಲ್ಲಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನೇರವಾಗಿ ಅವರ ಖಾತೆಗೆ ತಲುಪುತ್ತದೆ.

ಯುವ ಸಂಸತ್‌ನಲ್ಲಿ ಪಾಲ್ಗೊಂಡವರಲ್ಲಿ ನಾಯಕತ್ವ ಗುಣ: ಸಚಿವ ಎಚ್.ಕೆ.ಪಾಟೀಲ್‌

ಗದಗ ಮೊದಲ ಸ್ಥಾನ:

ಗದಗ ಜಿಲ್ಲಾಡಳಿತದಿಂದ ಒಟ್ಟು 336208 ಹೊಲಗಳು ಇದಕ್ಕೆ ಅರ್ಹತೆಯನ್ನು ಹೊಂದಿವೆ ಎಂದು ಗುರುತಿಸಿದ್ದು, ಅವುಗಳಲ್ಲಿ ಈಗಾಗಲೇ 259135 ಈಗಾಗಲೇ ನೊಂದಾವಣೆಯಾಗಿದ್ದು, ಇನ್ನು 77073 ನೊಂದಾವಣಿ ಬಾಕಿಯಾಗಿದ್ದು, ಹೊಲಗಳ ದಾಖಲಾತಿಗಳು ಸರಿಯಾಗಿರದ ಹಿನ್ನೆಲೆಯಲ್ಲಿ 1282 ಮಾತ್ರ ತಾಂತ್ರಿಕ ಸಮಸ್ಯೆಯಿಂದ ಬಾಕಿ ಉಳಿದಿದ್ದು, ನವೆಂಬರ್ 23 ರವರೆಗೆ ಶೇ 77.08 ಪ್ರಗತಿಯನ್ನು ಸಾಧಿಸಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದೆ.

ಬೆಂಗಳೂರು ನಗರ ಕೊನೆಯ ಸ್ಥಾನದಲ್ಲಿ

ಶೇ 77.08ರಷ್ಟು ಪ್ರಗತಿ ಸಾಧಿಸಿರುವ ಗದಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದರೆ, ರಾಜಧಾನಿ ಲ್ಯಾಂಡ್ ವಿಷಯದಲ್ಲಿ ಸಮಸ್ಯೆಗಳ ಆಗರವೇ ಆಗಿರುವ, ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿಯನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆ ಕೇವಲ ಶೇ 32.65ರಷ್ಟು ಪ್ರಗತಿ ಸಾಧಿಸಿ ಕೊನೆಯ ಸ್ಥಾನದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಆಸ್ತಿ ವಿಷಯದಲ್ಲಿರುವ ವ್ಯಾಜ್ಯಗಳು, ದೂರ ದೂರದ ಪ್ರದೇಶಗಳಲ್ಲಿ ವಾಸಿಸುವವರು, ವಾರ್ಸಾ ಇಲ್ಲದೇ ಇರುವ ಆಸ್ತಿಗಳ ಅಕ್ರಮ ನೋಂದಣಿ ಸಾಧ್ಯತೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಪ್ರಗತಿ ಸಾಧಿಸಲು ಸಾಧ್ಯವಿಲ್ಲದಂತಾಗಿದೆ.

ಶೇಕಡಾವಾರು ವಿವರ

ಗದಗ 77.08, ಬಾಗಲಕೋಟೆ 75.71, ದಾವಣಗೆರೆ 73.84, ಹಾವೇರಿ 72.93, ಚಿತ್ರದುರ್ಗ 71.57, ಕೊಪ್ಪಳ 68.45, ಕಲಬುರಗಿ 68.20, ಬೀದರ್‌ 66.93, ಬೆಳಗಾವಿ 65.17, ಹಾಸನ 65.15, ವಿಜಯನಗರ 64.97, ಧಾರವಾಡ 64.81, ಶಿವಮೊಗ್ಗ 64.34, ಯಾದಗಿರಿ 64.27, ವಿಜಯಪುರ 63.71, ಚಿಕ್ಕಬಳ್ಳಾಪುರ 62.30, ಉತ್ತರ ಕನ್ನಡ 60.11, ಬಳ್ಳಾರಿ 59.18, ರಾಯಚೂರ 59.06, ಮಂಡ್ಯ 58.94, ಚಿಕ್ಕಮಗಳೂರ 57.05, ಮೈಸೂರು 56.51, ಕೋಲಾರ 56.18, ಬೆಂಗಳೂರು ಗ್ರಾಮಾಂತರ 55.67, ಕೊಡಗು 54.69, ತುಮಕೂರು 54.62, ಚಾಮರಾಜನಗರ 53.49, ಉಡುಪಿ 46.48, ರಾಮನಗರ 44.81, ದಕ್ಷಿಣ ಕನ್ನಡ 41.51, ಬೆಂಗಳೂರು ನಗರ 32.65 ಸೇರಿದಂತೆ ಎಲ್ಲಾ ಜಿಲ್ಲೆಗಳ ಪ್ರಗತಿಯಾಗಿವೆ.

ರಾಜ್ಯದ ಪ್ರಗತಿ ಶೇ. 59

ಪ್ರುಟ್ಸ್ ತಂತ್ರಾಂಶದಲ್ಲಿ ಅಳವಡಿಕೆ ಮಾಡಲು ಎಲ್ಲಾ ಜಿಲ್ಲೆಗಳು ಸೇರಿದಂತೆ ಒಟ್ಟು 2,23,04,978 ಹೊಲಗಳು ಅರ್ಹತೆ ಹೊಂದಿದ್ದು, ಅವುಗಳಲ್ಲಿ ಈಗಾಗಲೇ 13362112 ಅಳವಡಿಕೆ ಮಾಡಲಾಗಿದ್ದು, 8942866 ಅಳವಡಿಕೆ ಮಾಡಬೇಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳು ಸೇರಿ 53258 ಹೊಲಗಳ ದಾಖಲೆಗಳ ಪರಿಶೀಲನೆ ನಡೆದಿದ್ದು, ಒಟ್ಟು ರಾಜ್ಯ ಪ್ರುಟ್ಸ್ ತಂತ್ರಾಂಶ ಅಳವಡಿಕೆಯಲ್ಲಿ ಶೇ 59.91ರಷ್ಟು ಪ್ರಗತಿಯನ್ನು ಸಾಧಿಸಿದೆ.

ಏನಿದು ಪ್ರುಟ್ಸ್ ತಂತ್ರಾಂಶ

ಪ್ರುಟ್ಸ್ ತಂತ್ರಾಂಶದ ಬಗ್ಗೆ ಹುಬ್ಬೇರಿಸುತ್ತಾರೆ, ಪ್ರುಟ್ಸ್ ಪೂರ್ಣ ಹೆಸರು ಫಾರ್ಮರ್ ರಜಿಸ್ಟ್ರೇಶನ್ ಆ್ಯಂಡ್ ಯುನಿಫೈಡ್ ಬೆನಿಫಿಶರಿ ಇನ್ ಫಾರ್ ಮೇಶನ್ ಸಿಸ್ಟಂ ಪ್ರತಿಯೊಂದು ಶಬ್ದದ ಮೊದಲ ಅಕ್ಷರವನ್ನು ತೆಗೆದುಕೊಂಡು ಪ್ರುಟ್ಸ್ ಎಂದು ನಾಮಕರಣ ಮಾಡಲಾಗಿದ್ದು, ಇದರಿಂದಾಗಿ ರೈತರಿಗೆ ಸರ್ಕಾರಿ ಸೌಲಭ್ಯಗಳು ನೇರವಾಗಿ ಲಭ್ಯವಾಗುವುದರೊಟ್ಟಿಗೆ ರೈತರ ಹೆಸರಿನಲ್ಲಿ ಆಗುತ್ತಿದ್ದ ಹಣ ದುರುಪಯೋಗ ತಪ್ಪುತ್ತದೆ. ರೈತರಿಗೆ ಒಂದೇ ಐಡಿ ಅಡಿಯಲ್ಲಿ ಅವರ ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಲಭ್ಯವಾಗಲಿದೆ.

ಗದಗ: ಕಾಡಿನಲ್ಲಿ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ; ಇಂಗು ಗುಂಡಿ ನಿರ್ಮಿಸಿ ಪರಿಸರ ಕಾಳಜಿ ತೋರಿದ ಕಾಲೇಜ್ ಹುಡುಗ್ರು..!

ಪ್ರುಟ್ಸ್ ತಂತ್ರಾಂಶ ಅಳವಡಿಕೆಯಲ್ಲಿ ಗದಗ ಜಿಲ್ಲೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿರುವ ಹೆಮ್ಮೆಯ ವಿಷಯ. ಜಿಲ್ಲೆಯ ರೈತರು ಆಸಕ್ತಿಯಿಂದ ಈ ಕಾರ್ಯದಲ್ಲಿ ತೊಡಗಿದ್ದು ಇದಕ್ಕೆ ಪೂರಕವಾಗಿ ಕೆಲಸ ಮಾಡಿದ ಜಿಲ್ಲೆಯ ಎಲ್ಲಾ ಆಡಳಿತ ವರ್ಗವೂ ಅಭಿನಂದನೆ ಅರ್ಹವಾಗಿದೆ. ಇದರಿಂದಾಗಿ ಜಿಲ್ಲೆಯ ರೈತರಿಗೆ ಸರ್ಕಾರದ ಸೌಲಭ್ಯ ವೇಗವಾಗಿ ತಲುಪಲಿವೆ.

ಎಚ್.ಕೆ.ಪಾಟೀಲ. ಕಾನೂನು, ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ.

Follow Us:
Download App:
  • android
  • ios