ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ ನಿಧನ, ಕಳಚಿತು ಈಸೂರಿನ ಕೊನೆಯ ಕೊಂಡಿ
ಭಾರತದಲ್ಲಿ ಮೊದಲ ಸ್ವಾತಂತ್ರ್ಯ ಪಡೆದ ಈಸೂರು ಗ್ರಾಮದ ಹೋರಾಟಗಾರರ ಕೊನೆಯ ಕೊಂಡಿ ಕಳಚಿದೆ.
ಶಿವಮೊಗ್ಗ, (ಆ.18): ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ(104) ಮಂಗಳವಾರ ವಿಧಿವಶರಾಗಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾದ ಹುಚ್ಚರಾಯಪ್ಪ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಈಸೂರು ಗ್ರಾಮದ ಹೋರಾಟಗಾರರೆಲ್ಲರೂ ಮೃತರಾಗಿದ್ದು,ಇವರು ಕೊನೆಯವರಾಗಿದ್ದರು. ಇದೀಗ ಹುಚ್ಚರಾಯಪ್ಪ ಅವರೂ ಸಹ ಮೃತರಾಗಿದ್ದು, ಈಸೂರು ಗ್ರಾಮದ ಹೋರಾಟಗಾರರ ಕೊನೆಯ ಕೊಂಡಿ ಕಳಚಿದೆ.
ಬೆಂಗಳೂರು ಗಲಭೆಗೆ ಟೆರರ್ ನಂಟು, ನಿವಾರಣೆಯಾಯ್ತು ಗಣೇಶೋತ್ಸವ ಕಗ್ಗಂಟು: ಆ.18ರ ಟಾಪ್ 10 ಸುದ್ದಿ!
ಈಸೂರು ಗ್ರಾಮವು ಸ್ವಾತಂತ್ರ್ಯ ಹೋರಾಟ ಭಾರತದ ಇತಿಹಾಸದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದೆ. ಭಾರತದಲ್ಲಿ ಮೊದಲ ಸ್ವಾತಂತ್ರ್ಯ ಪಡೆದ ಗ್ರಾಮ ಇದಾಗಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರಾದ ಹುಚ್ಚರಾಯಪ್ಪ ಬ್ರಿಟಿಷರ ವಿರುದ್ಧ 1942 ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸವನ್ನು ಅನುಭವಿಸಿದ್ದರು.
ಹುಚ್ಚುರಾಯಪ್ಪನವರಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ "ಭಾರತ ಶಾಂತಿ" ರಾಷ್ಟ್ರೀಯ ಪುರಸ್ಕಾರ ಸೇರಿದಂತೆ ಹಲವು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಲಭಿಸಿವೆ.