* ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪಂಚಭೂತಗಳಲ್ಲಿ ಲೀನ* ಕಲ‌ ಸರ್ಕಾರಿ ಗೌರವಗಳೊಂದಿಗೆ ದೊರೆಸ್ವಾಮಿ ಅವರ ಅಂತ್ಯಕ್ರಿಯೆ* ಬ್ರಾಹ್ಮಣರ ಸಂಪ್ರದಾಯದಂತೆ ಅಂತ್ಯಸಂಸ್ಕಾರ

ಬೆಂಗಳೂರು, (ಮೇ.26): ಹೃದಯಾಘಾತದಿಂದ ಕೊನೆಯುಸಿರೆಳೆದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಅಂತ್ಯಕ್ರಿಯೆ ಇಂದು (ಬುಧವಾರ) ಸಂಜೆ ಚಾಮರಾಜಪೇಟೆಯ ಚಿತಾಗಾರದಲ್ಲಿ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬ್ರಾಹ್ಮಣರ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆದಿದ್ದು, ಅವರ ಪುತ್ರ ರಾಜು ದೊರೆಸ್ವಾಮಿ ವಿಧಿವಿಧಾನಗಳನ್ನ ನೆರವೇರಿಸಿದರು. ಸರ್ಕಾರದ ಸೂಚನೆ ಹಿನ್ನಲೆ ಸಕಲ‌ ಸರ್ಕಾರಿ ಗೌರವಗಳೊಂದಿಗೆ ದೊರೆಸ್ವಾಮಿ ಅವರ ಅಂತ್ಯಕ್ರಿಯೆ ನಡೆಸಲಾಯ್ತು.

ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್. ದೊರೆಸ್ವಾಮಿ ವಿಧಿವಶ

 ಪಾರ್ಥೀವ ಶರೀರ ಚಿತಾಗಾರಕ್ಕೆ ಆಗಮಿಸುತ್ತಲೇ ಬೆಂಬಲಿಗಲು ದೊರೆಸ್ವಾಮಿಯವರಿಗೆಎ ಜಯವಾಗಲಿ, ಅಮರವಾಗಲಿ ಎಂದು ಜೈಕಾರಗಳನ್ನು ಕೂಗಿದರು.

ದೊರೆಸ್ವಾಮಿಯವರ ಅಂತ್ಯಸಂಸ್ಕಾರದಲ್ಲಿ ಶಾಸಕ ಕೃಷ್ಣ ಭೈರೇಗೌಡ, ಶಾಸಕಿ ಸೌಮ್ಯ ರೆಡ್ಡಿ ಪಾಲ್ಗೊಂಡಿದ್ರು.