ರಾಜ್ಯದಲ್ಲಿ ಮತ್ತೊಂದು ದೋಣಿ ದುರಂತ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಇದರ ನಡುವೆ ಮತ್ತೊಂದು ದೋಣಿ ದುರಂತ ಸಂಭವಿಸಿದೆ

four drowns after coracle capsizes in krishna river at raichuru

ರಾಯಚೂರು, (17): ಕುಂದಾಪುರ ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಬಂದರಿನ ಬಳಿ ಭಾನುವಾರ ದೋಣಿಯೊಂದು ಮುಳುಗಿ ನಾಲ್ಕು ಮಂದಿ ಮೀನುಗಾರರು ಮೃತಪಟ್ಟಿದ್ದರು. 

ಇದರ ಬೆನ್ನಲ್ಲೇ  ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಲ್ವರು ನೀರುಪಾಲು ಆಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಉಡುಪಿಯ ಕೊಡೇರಿ ಸಮುದ್ರದಲ್ಲಿ ನಾಡದೋಣಿ ದುರಂತ: ಮೂವರು ಕಣ್ಮರೆ

ಜಿಲ್ಲೆಯ ಕುರವಕುಲ್ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ 13 ಜನರು ದಾಟುತ್ತಿದ್ದರು. ಈ ವೇಳೆ ತೆಪ್ಪ ಮುಳುಗಿ ನಾಲ್ವರು ನೀರುಪಾಲು ಆಗಿದ್ದು ಉಳಿದ 8 ಜನ ಸುರಕ್ಷಿತವಾಗಿ ದಡ ಸೇರಿದ್ದಾರೆ.

ಘಟನೆಯಲ್ಲಿ 8 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರು ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ. ತೆಪ್ದದಲ್ಲಿ ಪ್ರಯಾಣಿಸುತ್ತಿದ್ದವರು ಶ್ರಾವಣ ಸೋಮವಾರ ಹಿನ್ನೆಲೆ ನಾರದಗಡ್ಡೆಗೆ ತೆರಳಿ ದರ್ಶನ ಪಡೆದಿದ್ದರು. ನಂತರ ತೆಲಂಗಾಣದ ಮಕ್ತಲಗೆ ತೆರಳಿ ವಾಪಸ್​ ಅಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ರಾಯಚೂರು: ತುಂಬಿ ಹರಿಯುತ್ತಿರುವ ಕೃಷ್ಣೆ , ತೆಪ್ಪದಲ್ಲಿ ಜೀವದ ಹಂಗು ತೊರೆದು ಸಂಚಾರ..!

ಸದ್ಯ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಹಳ್ಳ-ಕೊಳ್ಳ, ನದಿ-ಸೇತುವೆಗಳನ್ನ ದಾಟುವ ದುಸ್ಸಾಹಸಕ್ಕೆ ಹೋಗಬೇಡಿ. ಇದು ನಿಮ್ಮ ಸುವರ್ಣ ನ್ಯೂಸ್.ಕಾಂ ಕಳಕಳಿಯ ಮನವಿ

Latest Videos
Follow Us:
Download App:
  • android
  • ios