ಬಾಗಲಕೋಟೆ(ಫೆ.10): ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಬರಲು ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಬಾಗಲಕೋಟೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಶೇ.14ರಷ್ಟು ಮುಸ್ಲಿಮರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮೋದಿ ಕೇವಲ ಬಾಯಿ ಮಾತಿನಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ ಎಂದ ಸಿದ್ದರಾಮಯ್ಯ, ತಾವು ಶಾದಿಭಾಗ್ಯ ಜಾರಿಗೆ ತಂದಾಗ ಯಡಿಯೂರಪ್ಪ ವಿರೋಧ ಮಾಡಿದ್ದರು ಎಂದು ಹೇಳಿದರು.

"

ನಾನು ಎಲ್ಲ ಧರ್ಮ, ಸಮುದಾಯದ ಪರ ಇದ್ದು, ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಹೋರಾಡಿದ್ದಾಗಿ ಸಿದ್ದರಾಮಯ್ಯ ಹೇಳಿದರು. ಆದರೆ ಮುಸ್ಲಿಂ ವಿರೋಧಿಯಾಗಿರುವ ಬಿಜೆಪಿ ತಮ್ಮ ಯೋಜನೆಗಳ ಕುರಿತು ಅಪಪ್ರಚಾರ ಮಾಡಿತು ಎಂದು ಮಾಜಿ ಸಿಎಂ ಹರಿಹಾಯ್ದರು.