ಬೆಂಗಳೂರು(ಜೂ.19): ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೊಸ ಸೈಕಲ್‌ ಖರೀದಿ ಮಾಡಿದ್ದು, ಮನೆ ಆವರಣದಲ್ಲಿ ಸವಾರಿ ಮಾಡಿ ಗಮನ ಸೆಳೆದಿದ್ದಾರೆ.

ಗುರುವಾರ ಗಾಂಧೀ ಭವನ ರಸ್ತೆಯಲ್ಲಿರುವ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಹೊಸ ಸೈಕಲ್‌ ತರಲಾಗಿತ್ತು. ಸೈಕಲ್‌ ಕಂಡು ಖುಷಿಯಾದ ಸಿದ್ದರಾಮಯ್ಯ ಅವರು ಒಂದು ಸೈಕಲ್‌ ಏರಿ ಒಂದು ಸುತ್ತು ಹಾಕುವ ಮೂಲಕ ಸಂಭ್ರಮಿಸಿದ್ದಾರೆ. 

'ಟಿಕೆಟ್‌ ಕೈ ತಪ್ಪೋದಕ್ಕೆ ಸಿದ್ದರಾಮಯ್ಯ ಕಾರಣ!' 'ಬಿಜೆಪಿಗೆ ಹೈಕಮಾಂಡ್ ನಾನೇನಾ?'

ಈ ಸಂದರ್ಭದಲ್ಲಿ ವಿಧಾನಸಭೆ ಮುಖ್ಯ ಸಚೇತಕ ಅಜಯ್‌ಸಿಂಗ್‌ ಜತೆಯಲ್ಲಿದ್ದರು. ಸಿದ್ದರಾಮಯ್ಯ ಅವರು ಸೈಕಲ್‌ ಏರಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಿದ್ದರಾಮಯ್ಯ ಅವರು ಸೈಕಲ್‌ ತುಳಿಯುತ್ತಿರುವ ವಿಡಿಯೋ ಕೂಡ ಟಿಕ್‌ಟಾಕ್‌ನಲ್ಲಿ ವೈರಲ್‌ ಆಗಿದೆ.