Asianet Suvarna News Asianet Suvarna News

ಮಳೆ ಕೈಕೊಟ್ಟಾಗೆಲ್ಲಾ ತಮಿಳುನಾಡಿನಿಂದ ವಿವಾದ ಸೃಷ್ಟಿ: ಮಾಜಿ ಸಿಎಂ ಡಿವಿಎಸ್‌ ಆಕ್ರೋಶ

ಕರ್ನಾಟಕದಲ್ಲಿ ಮಳೆ ಕೊರತೆಯಾದ ಪ್ರತಿಬಾರಿಯೂ ತಮಿಳುನಾಡು ಅನವಶ್ಯಕವಾಗಿ ವಿವಾದದ ಸೃಷ್ಟಿಸುತ್ತಿದೆ ಎಂದು ಸಂಸದ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.

Former CM DV Sadananda Gowda advises Karnataka Tamil Nadu Cauvery river water dispute all party meeting sat
Author
First Published Aug 23, 2023, 1:20 PM IST

ಬೆಂಗಳೂರು (ಆ.23): ರಾಜ್ಯದಲ್ಲಿ ಮಳೆ ಕೈಕೊಟ್ಟಾಗೆಲ್ಲ ತಮಿಳುನಾಡು ಅನವಶ್ಯಕವಾಗಿ ವಿವಾದದ ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ನೀರಿನ ಕೊರತೆ (shortge)ಯಿದೆ. ಆದರೆ, ರಿವಾರ್ಡ್‌ನಲ್ಲಿ ಹೇಳಿರುವ ರೀತಿಯಲ್ಲಿ ನೀರು ಬೀಡಬೇಕಾದದ್ದು ನಮ್ಮ ಕರ್ತವ್ಯವಾದರೂ, ನಮ್ಮ ರಾಜ್ಯದ ಜನತೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷದ ಸಭೆಯಲ್ಲಿ ಭಾಗವಹಿಸಿ ಬಂದ ನಂತರ ಮಾತನಾಡಿದ ಅವರು, ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನೀರಾವರಿ ತಜ್ಞರು ಸೇರಿ ಹೇಗೆ ಪರಿಸ್ಥಿತಿ ಬಗೆಹರಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿ ಮಳೆ ಕೈಕೊಟ್ಟ ಎಲ್ಲ ಸಂದರ್ಭದಲ್ಲಿಯೂ ತಮಿಳುನಾಡು ಅನವಶ್ಯಕವಾಗಿ ವಿವಾದವನ್ನು ಸೃಷ್ಟಿಸುತ್ತಿದೆ. ಕರ್ನಾಟಕದಲ್ಲಿ ನೀರಿನ ಕೊರತೆ ಹೆಚ್ಚಾಗಿದೆ. ಆದರೂ ರಿವಾರ್ಡ್‌ನಲ್ಲಿ ಹೇಳಿರುವ ರೀತಿಯಲ್ಲಿ ನೀರು ಬೀಡಬೇಕಾದದ್ದು ನಮ್ಮ ಕರ್ತವ್ಯ ಅಂತ ಹೇಳ್ತೀನಿ. ಈ ವೇಳೆ ಆದ್ರೆ ನಮ್ಮ ರಾಜ್ಯ ಜನರ ಪ್ರಾಮುಖ್ಯತೆ ಕೊಡಬೇಕು ಎಂದು ಹೇಳಿದರು.

ಅರ್ಧ ಕರ್ನಾಟಕ ಬರಗಾಲ, ಮುಂದೆಯೂ ಮಳೆ ಮುನ್ಸೂಚನೆಯಿಲ್ಲ: ಸಚಿವ ಕೃಷ್ಣಬೈರೇಗೌಡ

ತಮಿಳುನಾಡಿನ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹವಿದೆ: ಇನ್ನು ಸಭೆಯಲ್ಲಿ ನಾನು ಎರಡು ವಿಚಾರ ಬಗ್ಗೆ ಸಲಹೆ ಕೊಟ್ಟಿದ್ದೇನೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರೋದ್ರಿಂದ ಅದಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ತಮಿಳುನಾಡಿನ ಜಲಾಶಯದಲ್ಲಿ ನೀರು ಹೆಚ್ಚಾಗಿಯೇ ಇದೆ. ಅಲ್ಲಿಯ ಜಲಾಶಯದ ಹೆಚ್ಚುವರಿ ನೀರಿನ ಸಂಗ್ರಹದ ಬಗ್ಗೆ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು. ಮಳೆ ನೀರಿನ ಕೊರತೆಯಾದಾಗ ಜಲಾಶಯದಲ್ಲಿ ಶೇಖರಣೆಯಾದ ಹೆಚ್ಚವರಿ ನೀರನ್ನ ಬಳಕೆ‌ ಮಾಡಿಕೊಳ್ಳಬಹುದು. ಮಳೆ ಕೊರತೆಯಾದ ವರ್ಷದಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಸುಪ್ರೀಂ ಕೋರ್ಟ್ ಇದುವರೆಗೂ ಹೇಳಿಲ್ಲ.

ಮಳೆ ಕೊರತೆಯಾದಾಗ ನೀರು ಏನು ಮಾಡಬೇಕೆಂದು ಕೋರ್ಟ್‌ ಗಮನಕ್ಕೆ ತಂದಿಲ್ಲ: ಇನ್ನು ಕಾವೇರಿ ಪ್ರಾಧಿಕಾರ ಮತ್ತು ಲಿಗಲ್ ತಂಡವು ಇದರ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ. ಈ ಎರಡನ್ನೂ ಡಿಫೆಂಡ್ ಮಾಡಿದರೆ ಎಷ್ಟು ನೀರು ಬಿಡಬೇಕು ಅಂತ ಹೇಳಬಹುದು. ಬರೀ ಮ್ಯಾಥಮೆಟಿಕಲ್ ಕ್ಯಾಲುಕ್ಯೂಲೆಟ್ ಮಾಡಲು ಆಗೋದಿಲ್ಲ. ಯಾಕೆಂದರೆ ಸುಪ್ರೀಂ ಕೋರ್ಟ್ ಆದೇಶಗಳು ನಮ್ಮ ಅವಾರ್ಡ್‌ಗಳು ಈಗಾಗಲೇ ಉರ್ಜಿತದಲ್ಲಿವೆ. ಈ ಹಂತದಲ್ಲಿ ಮ್ಯಾಥಮೆಟಿಕಲ್ ಕ್ಯಾಲ್ಕುಲೇಟ್ ಬರೋದಿಲ್ಲ. ಈ ಅಂಶಗಳ ಬಗ್ಗೆ ಸಭೆಯಲ್ಲಿ ಗಮನಕ್ಕೆ ತಂದಿದ್ದೇನೆ‌ ಎಂದು ತಿಳಿಸಿದರು. 

ಚಂದ್ರಯಾನ 3 ಸಕ್ಸಸ್‌ಗಾಗಿ ದೇವಸ್ಥಾನ, ದರ್ಗಾಗಳಲ್ಲಿ ವಿಶೇಷ ಪೂಜೆ

ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡೊಲ್ಲವೆಂದ ಕುಮಾರಸ್ವಾಮಿ:  ಸರ್ವ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಸರ್ವ ಪಕ್ಷ ಸಭೆ  ಕರೆದಿದ್ದು ಸಂತೋಷ. ಸರ್ಕಾರ ನಮ್ಮ ರೈತರ ಹಿತರಕ್ಷಣೆ ಮಾಡಬೇಕು. ಇದರಲ್ಲಿ ನಾವು ರಾಜಕೀಯ ಮಾಡೋದಿಲ್ಲ. ರೈತರು ಪ್ರತಿಭಟನೆ  ಮಾಡಿದ್ರು ಅದಕ್ಕೆ ನೀರಾವರಿ ಮಂತ್ರಿಗಳು ರೈತರು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಲಿ ಅಂದಿದ್ದಾರೆ. ಈ ರೀತಿ ಮಾತನಾಡೋದು ಸರಿಯಲ್ಲ. ನಾವು ರೈತರ ಪರವಾಗಿ ನಿಲ್ಲಬೇಕು. ಈಗಾಗಲೇ ಸುಪ್ರೀಂ ಕೋರ್ಟ್ ಗೆ ಸರ್ಕಾರ ಅರ್ಜಿ ಹಾಕಿದ್ದಾರೆ. ಈಗ ನಾವು ಯಾವ ರೀತಿ ವಾದ ಮಂಡನೆ ಮಾಡಬೇಕು ಅನ್ನೋದನ್ನು ಚರ್ಚಿಸಬೇಕಾಗಿದೆ ಎಂದು ಹೇಳಿದರು.

Follow Us:
Download App:
  • android
  • ios