30% Commission: ದಿಂಗಾಲೇಶ್ವರ ಶ್ರೀ ಹೇಳಿಕೆಗೆ ಮತ್ತೆ ಬಿಎಸ್‌ವೈ ಗರಂ

*  ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ: ಬಿಎಸ್‌ವೈ
*  ಇನ್ನೊಂದು ವಾರದ ನಂತರ ರಾಜ್ಯ​ ಪ್ರ​ವಾಸ ಆರಂಭ
*  ಸ್ವಾಮೀಜಿಗಳೇ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದರೆ ಏನು ಹೇಳಬೇಕು?
 

Former CM BS Yediyurappa React on Dingaleshwara Swamiji Statement grg

ದಾವಣಗೆರೆ(ಏ.21):  ಮಠ​ಗ​ಳಿಗೆ(Matha) ನೀಡುವ ಅನು​ದಾನ ಬಿಡು​ಗ​ಡೆಗೂ ಕಮಿ​ಷನ್‌ ಕೊಡ​ಬೇಕು ಎಂಬ ದಿಂಗಾ​ಲೇ​ಶ್ವರ ಶ್ರೀಗಳ ಆರೋ​ಪಕ್ಕೆ ಮಾಜಿ ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ(BS Yediyurappa) ತೀವ್ರ ಕಿಡಿ​ಕಾ​ರಿ​ದ್ದಾ​ರೆ. ಮಠಗಳಿಗೆ ನೀಡುವ ಅನುದಾನದಲ್ಲಿ ಶೇ.30 ಕಮಿಷನ್‌(30% Commission) ನೀಡಬೇಕೆಂಬ ಆರೋಪ ಮಾಡಿರುವ ದಿಂಗಾಲೇಶ್ವರ ಸ್ವಾಮೀಜಿ(Dingaleshwara Swamiji) ಅವ​ರು, ಕಮಿಷನ್‌ ವಿಚಾರವಾಗಿ ಸಾಕ್ಷ್ಯ ಕೊಡಲಿಕ್ಕಾಗುತ್ತದೆಯೇ ಎಂಬುದಾಗಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಗಳೇ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಿದರೆ ಏನು ಹೇಳಬೇಕು? ಎಂದು ಮಾಜಿ ಯಡಿಯೂರಪ್ಪ ಬೇಸರ ವ್ಯಕ್ತ​ಪ​ಡಿ​ಸಿ​ದ​ರು.

ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ಇಲ್ಲ: 

ರಾಜ್ಯದಲ್ಲಿ(Karnataka) ಅವಧಿಗೆ ಮುನ್ನ ವಿಧಾನಸಭೆ ಚುನಾವಣೆ(Assembly Election) ನಡೆಸುವ ಉದ್ದೇಶವಿಲ್ಲ. 2023ರ ಚುನಾವಣೆಗೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಹಿಂದೂ, ಆರ್‌ಎಸ್‌ಎಸ್‌ ವಿರೋಧಿ ಸಿದ್ಧಲಿಂಗ ಶ್ರೀ ಜನ್ಮದಿನ ಭಾವೈಕ್ಯತಾ ದಿನವೇಕೆ?: ದಿಂಗಾಲೇಶ್ವರ ಶ್ರೀ

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭೆ ಚುನಾವಣೆ ವಿಚಾರವಾಗಿ ನಮ್ಮ ಕೇಂದ್ರ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ. ಅವಧಿಗೆ ಮುನ್ನ ಚುನಾವಣೆ ನಡೆಸುವ ಉದ್ದೇಶವಂತೂ ಇಲ್ಲ ಎಂದರು.

ಪ್ರಧಾನಿ ಮೋದಿ(Narendra Modi) ಸೇರಿ ರಾಷ್ಟ್ರೀಯ ನಾಯಕರು ಕೊಟ್ಟ 150 ಕ್ಷೇತ್ರಗಳ ಗೆಲ್ಲುವ ಗುರಿಗಾಗಿ ನಾವು ಕಾರ್ಯತಂತ್ರ ರೂಪಿಸುತ್ತಿದ್ದೇವೆ. 150 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವುದು ನಮ್ಮೆಲ್ಲರ ಗುರಿ. ರಾಜ್ಯದಲ್ಲಿ ಬಿಜೆಪಿಗೆ(BJP) ಉತ್ತಮ ವಾತಾವರಣವಿದ್ದು, ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ವಿಶ್ವಾ​ಸ ವ್ಯಕ್ತ​ಪ​ಡಿ​ಸಿ​ದ​ರು.

ವಾರ​ದ ನಂತರ ರಾಜ್ಯ​ ಪ್ರ​ವಾ​ಸ: 

ಇನ್ನು ಒಂದು ವಾರದ ನಂತರ ರಾಜ್ಯ ಪ್ರವಾಸ ಆರಂಭಿಸಲಿದ್ದೇವೆ. ಪ್ರತಿ ಜಿಲ್ಲೆಗೂ ನಾನು ಭೇಟಿ ನೀಡುತ್ತೇನೆ. ನಮ್ಮ ಮುಖಂಡರು, ಕಾರ್ಯ​ಕ​ರ್ತರು 2-3 ಸಾವಿರ ಜನರನ್ನು ಸೇರಿಸಿ ಆಹ್ವಾನಿಸಿದರೆ ಹೋಗಿ ಸಭೆ, ಸಮಾರಂಭ, ಸಮಾವೇಶದಲ್ಲಿ ಭಾಗವಹಿಸುತ್ತೇವೆ. ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನಮ್ಮೆಲ್ಲರ ಗುರಿ, ಸಂಕಲ್ಪ ಎಂದು ಅವರು ಪುನರುಚ್ಛರಿಸಿದರು.

ಪರ್ಸೆಂಟೇಜ್ ಕೊಟ್ಟಿಲ್ಲ, ಆದ್ರೆ ಹಣ ಕಟ್ ಮಾಡಿ ಕೊಡ್ತೇನೆ ಅನ್ನೋ ಹಠಕ್ಕೆ ಅಧಿಕಾರಿಗಳು ಬಿದ್ದಿದ್ದಾರೆ‌!

ಪಕ್ಷದ ಏಜೆಂಟ​ರಂತೆ ದಿಂಗಾಲೇಶ್ವರ ಶ್ರೀ ಮಾತು: ಅಶೋ​ಕ್‌

ದಾವ​ಣ​ಗೆ​ರೆ: ಮಠ​ಗ​ಳಿಗೆ ನೀಡುವ ಅನು​ದಾ​ನ​ದಲ್ಲಿ ಶೇ.30 ಕಮಿ​ಷನ್‌ ನೀಡ​ಬೇ​ಕೆಂಬ ಆರೋಪ ಮಾಡಿ​ರುವ ದಿಂಗಾ​ಲೇ​ಶ್ವರ ಶ್ರೀಗಳ ವಿರುದ್ಧ ಕಂದಾಯ ಸಚಿವ ಆರ್‌.​ಅ​ಶೋಕ್‌(R Ashok) ತೀವ್ರ ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದಾರೆ. ಒಂದು ಮಠದ ಸ್ವಾಮೀಜಿಗಳಾದವರು ಯಾವುದೋ ಪಕ್ಷದ ಏಜೆಂಟರಂತೆ ಮಾತನಾಡುವುದು ಸರಿಯಲ್ಲ ಎಂದು ಹೇಳಿ​ದ್ದಾ​ರೆ.

ಬುಧ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾಡಿ ನಮ್ಮ ಸರ್ಕಾರವು ಕಾಗಿನೆಲೆ, ಪೇಜಾವರ ಮಠ ಸೇರಿ ನಾಡಿನ ಅನೇಕ ಮಠಗಳಿಗೆ ಅನುದಾನ ನೀಡಿದೆ. ಯಾರಿಗೂ ಇಲ್ಲದ ಕಮಿಷನ್‌ ಕಾಟ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಮಾತ್ರ ಏಕಿದೆ? ಕನಿಷ್ಠ ಯಾರಿಗೆ ಕಮಿಷನ್‌ ಕೊಟ್ಟಿದ್ದೀರಿ ಎಂಬುದನ್ನಾದರೂ ದಿಂಗಾಲೇಶ್ವರ ಸ್ವಾಮೀಜಿ ಬಹಿರಂಗಪಡಿಸಲಿ. ಅದನ್ನು ಬಿಟ್ಟು ವೇದಿಕೆ ಮೇಲೆ ರಾಜಕೀಯ ಭಾಷಣ ಮಾಡುವುದು ಸರಿಯಲ್ಲ ಎಂದು ಕಿಡಿ​ಕಾ​ರಿ​ದ​ರು.
 

Latest Videos
Follow Us:
Download App:
  • android
  • ios