ಪರ್ಸೆಂಟೇಜ್ ಕೊಟ್ಟಿಲ್ಲ, ಆದ್ರೆ ಹಣ ಕಟ್ ಮಾಡಿ ಕೊಡ್ತೇನೆ ಅನ್ನೋ ಹಠಕ್ಕೆ ಅಧಿಕಾರಿಗಳು ಬಿದ್ದಿದ್ದಾರೆ‌!

ಬಾಲೆಹೊಸೂರು ಮಠಕ್ಕೆ ಬರಬೇಕಾದ 75 ಲಕ್ಷ ರೂಪಾಯಿಗೆ 25 ಲಕ್ಷ ಕೇಳಿದ್ದಾರೆ‌‌. ಗದಗ ಲ್ಯಾಂಡ್ ಆರ್ಮಿ ಅಧಿಕಾರಿಗಳು ಡಿಮ್ಯಾಂಡ್ ಇಟ್ಟಿದ್ದಾರೆ.. ಭ್ರಷ್ಟಾಚಾರ ನಡೆದಿಲ್ಲ ಅನ್ನೋದಾದ್ರೆ 75 ಕ್ಕೆ 75 ಲಕ್ಷ ರಿಲೀಸ್ ಮಾಡ್ಸಿ ಅಂತಾ ದಿಂಗಾಲೇಶ್ವರ ಶ್ರೀಗಳು ಸವಾಲು ಹಾಕಿದ್ದಾರೆ. 

dingaleshwara seer says Percentage not given but Officials says will cut money san

ಗದಗ (ಏ.19): ಮಠಕ್ಕೆ (Grant to Mutt)ನೀಡುವ ಅನುದಾನದಲ್ಲೂ ಪರ್ಸೆಂಟೇಜ್ (Percentage ) ನೀಡಬೇಕು ಅನ್ನೋ ಹೇಳಿಕೆ ನೀಡಿದ್ದ ಶಿರಹಟ್ಟಿ ಸಂಸ್ಥಾನ ಮಠದ ದಿಂಗಾಲೇಶ್ವರ ಶ್ರೀಗಳು (Dingaleshwara Seer) ಈಗ, ಪರ್ಸೆಂಟೇಜ್ ಕೊಟ್ಟಿಲ್ಲ. ಆದ್ರೆ ಹಣ ಕಟ್ ಮಾಡಿ ಕೊಡ್ತೇನೆ  ಅನ್ನೋ ಹಠಕ್ಕೆ ಅಧಿಕಾರಿಗಳು ಬಿದ್ದಿದ್ದಾರೆ‌ ಅಂತಾ ಹೇಳಿಕೆ ನೀಡಿದ್ದಾರೆ.

ಬಾಲೆಹೊಸೂರು ಮಠಕ್ಕೆ ಬರಬೇಕಾದ 75 ಲಕ್ಷ ರೂಪಾಯಿಗೆ 25 ಲಕ್ಷ ಕೇಳಿದ್ದಾರೆ‌‌. ಗದಗ ಲ್ಯಾಂಡ್ ಆರ್ಮಿ ಅಧಿಕಾರಿಗಳು ಡಿಮ್ಯಾಂಡ್ ಇಟ್ಟಿದ್ದಾರೆ.. ಭ್ರಷ್ಟಾಚಾರ ನಡೆದಿಲ್ಲ ಅನ್ನೋದಾದ್ರೆ 75 ಕ್ಕೆ 75 ಲಕ್ಷ ರಿಲೀಸ್ ಮಾಡ್ಸಿ ಅಂತಾ ಸವಾಲು ಹಾಕಿದ್ದಾರೆ. ದಾಖಲೆ ಕೇಳುತ್ತಿರುವವರಿಗೆ ಇದಕ್ಕಿಂತ ಹೆಚ್ಚಿನ ದಾಖಲೆ ಏನು ಬೇಕು..ಮಠದಲ್ಲಿ ದೇಣಿಗೆ ಕೊಟ್ಟರೆ ಪಾವತಿ ಪುಸ್ತಕ ಇರುತ್ತೆ.. ಭ್ರಷ್ಟಾಚಾರಕ್ಕೆ ಸರ್ಕಾರಿ ಕಚೇರಿಯಲ್ಲಿ ಪಾವತಿ ಪುಸ್ತಕ ಇರುತ್ತಾ‌ ಎಂದು ಪ್ರಶ್ನಿಸಿದ ಅವರು, ಬಾಯಿ ಬಿಟ್ಟು ಹೇಳುತ್ತಿದ್ದೀವಿ.. ಲ್ಯಾಂಡ್ ಆರ್ಮಿಯವರು 25 ಲಕ್ಷ ಡಿಮ್ಯಾಂಡ್ ಇಟ್ಟಿದ್ದಾರೆ.. ಅಧಿಕಾರಿಗಳನ್ನ ಮಂಪರು ಪರೀಕ್ಷೆಗೆ ಒಳಪಡಿಸಿ.. ಹೇಳಿದ್ದಾರೋ ಇಲ್ಲವೋ ಕೇಳಿ ಆಗ ಸತ್ಯ ಬಯಲಾಗಲಿದೆ ಎಂದಿದ್ದಾರೆ. 

ಭೂಮಿ ಪೂಜೆ ಮಾಡಲು ಪರ್ಸೆಂಟೇಜ್, ಟ್ರಾನ್ಸಫರ್ ಆಗ್ಬೇಕಾದ್ರೂ ದುಡ್ಡು.. ಇವೆಲ್ಲ ಗೊತ್ತಿಲ್ಲವೇ. ನಾನು ಹಣ ಕೊಟ್ಟಿಲ್ಲ ಆದ್ರೆ, ಕಟ್ಟಡದ ಹಣ ಕೊಡಲು ಲಂಚ ಕೇಳಿದ್ದಾರೆ ಅಂತಾ ಹೇಳಿದ್ದೇನೆ‌..ಅದನ್ನ ಬಿಟ್ಟು ಏನೇನೋ ಮಾತಾಡಿದ್ರೆ ಹೇಗೆ ಅಂತಾ ಬಿಜೆಪಿ ನಾಯಕರ (BJP Leaders) ವಿರುದ್ಧ ಹರಿಹಾಯ್ದರು.. ಕಾಂಗ್ರೆಸ್ (Congress) ಕುಮ್ಮಕ್ಕಿನಿಂದ ಸ್ವಾಮಿಗಳು ಮಾತಾಡಿದ್ದಾರೆ ಅನ್ನೊ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಯಡಿಯೂರಪ್ಪ ಪರವಾಗಿ ನಿಂತು ಮಾತಾಡ್ದಾಗ ಬಿಜೆಪಿಯವರು ಹೇಳಿದ್ರಾ. ಆಮಿಷಗಳಿಗೆ, ಪ್ರೇರಣೆಯಿಂದ ಮಾತನಾಡುವ ಬುದ್ಧಿಗೇಡಿ ಸ್ವಾಮಿಗಳು ನಾವಲ್ಲ ಅಂತಾ ತಮ್ಮ ನಿಲುವನ್ನ ಸಮರ್ಥಿಸಿಕೊಂಡರು.

ಸಚಿವ ಸಿಸಿ ಪಾಟೀಲರ ಪತ್ರಿಕಾ ಹೇಳಿಕೆಗೆ ದಿಂಗಾಲೇಶ್ವರ ಶ್ರೀಗಳ ತಿರುಗೇಟು: ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಸ್ವಾಮೀಜಿ ಅವರ ಜನ್ಮದಿನವಾದ ಫೆಬ್ರವರಿ 21ನ್ನ ಭಾವೈಕ್ಯ ದಿನ’ವನ್ನಾಗಿ ಆಚರಿಸೋದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ರು. ಈ ಬಗ್ಗೆ ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತ ಪಡಿಸಿದ ಹಿನ್ನೆಲೆ ಸಚಿವ ಸಿಸಿ ಪಾಟೀಲ ಪತ್ರಿಕಾ ಹೇಳಿಕೆ ಮೂಲಕ ಶ್ರೀಗಳನ್ನ ನಡೆಯನ್ನ ಖಂಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವಾಮಿಗಳು ಸಚಿವರಿಗೆ ಮಠದಲ್ಲಿ ರಾಜಕೀಯ ಮಾಡುವ ಉದ್ದೇಶ ಇದೆಯೋ.. ಅಥವಾ ಮಠದ ಇತಿಹಾಸ ತಿಳಿದುಕೊಳ್ಳುವ ಜವಾಬ್ದಾರಿ ಇದೆಯೋ ಎಂದು ಪ್ರಶ್ನಿಸಿದ್ರು. ಪತ್ರಿಕಾ ಪ್ರಕಟನೆಯಲ್ಲಿ ದಿಂಗಾಲೇಶ್ವರ ಇತಿಹಾಸ ಬಲ್ಲೆವು ಎಂದು ಹೇಳಿದ್ದೀರಿ. ಇದು ನಮ್ಮ ಇತಿಹಾಸದ ಬಗ್ಗೆ ನಡೆದ ಚರ್ಚೆಯಲ್ಲ. ಸಚಿವರೇ, ವ್ಯಕ್ತಿಯ ವಿಚಾರ ಬೇರೆ. ಸೈದ್ಧಾಂತಿಕ ವಿಚಾರ ಬೇರೆ ಇತಿಹಾಸದ ವಿಚಾರ ಬೇರೆ.‌ ರಾಜಕೀಯ ಗುಂಗಿನಲ್ಲಿ ಪ್ರಜ್ಞೆ ಕಳೆದುಕೊಂಡು ಮಾತಾಡೋದನ್ನ ನಿಲ್ಲಿಸಬೇಕು.. ವೈಯಕ್ತಿಕ ಜೀವನದ ಬಗ್ಗೆ ಮಾತಾಡೋದಾದ್ರೆ ಒಂದು ವೇದಿಕೆ ಸಿದ್ಧಮಾಡೋಣ ಅಂತಾ ಸಚಿವ ಸಿಸಿ ಪಾಟೀಲರಿಗೆ ಸವಾಲು ಹಾಕಿದ್ರು.. ಐನೂರು ವರ್ಷದ ಇತಿಹಾಸ ಇರುವ ಶಿರಹಟ್ಟಿ ಮಠದ ಭಾವೈಕ್ಯತೆ ಬಗ್ಗೆ ಇಲ್ಲಿ ಮಾತಾಡಿದ್ದೆವೆ.‌ 

ಬ್ರಾಹ್ಮಣರನ್ನ ಬಯ್ಯುವವರು ಭಾವೈಕ್ಯತೆ ಮೂರ್ತಿಗಳಾಗ್ತಾರಾ..?: ತೋಂಟದ ಸಿದ್ದಲಿಂಗಸ್ವಾಮಿಗಳ ಬಗ್ಗೆ ಇಲ್ಲ ಸಲ್ಲದ ಮಾತನಾಡಿದ್ದೇವೆ ಎಂದು ಸಚಿವ ಸಿಸಿ ಪಾಟೀಲರು ಹೇಳಿದ್ದಾರೆ. ತೋಂಟದ ಸಿದ್ದಲಿಂಗಸ್ವಾಮಿಗಳು ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಬ್ರಾಹ್ಮಣರನ್ನ ಬಯ್ಯುವವರು ಭಾವೈಕ್ಯತೆ ಮೂರ್ತಿಯಾಗುತ್ತಾರಾ. ಹಿಂದುತ್ವ ವಾದಿಗಳನ್ನ ಹೀಯಾಳಿಸಿದವರು ಭಾವೈಕ್ಯತೆಯ ಮೂರ್ತಿಗಳಾಗುತ್ತಾರಾ. ವೀರಶೈವ-ಲಿಂಗಾಯತ ಒಂದಲ್ಲ ಅಂತ ಹೇಳುವ ಮೂಲಕ ಸಮಾಜ ಹೊತ್ತಿ ಉರಿಯುವ ಹಾಗೆ ಮಾಡಿದ್ದರು. ಒಂದು ಪಕ್ಷದ ಬೆಂಬಲ ತೆಗೆದುಕೊಂಡು, ಅವರು ಕೆಟ್ಟ ನಿರ್ಧಾರಕ್ಕೆ ಕೈಹಾಕಿದ್ದು ನಿಮಗ ಅರಿವಿಲ್ಲವೆ.

ಸಂಘಪರಿವಾರದವನ್ನ ವಿರೋಧಿಸಿದರು, ಆರ್ ಎಸ್ ಎಸ್ ಅವರನ್ನ ವಿರೋಧಿಸಿದ್ದು ನಿಮಗೆ ಅರಿವಿಲ್ಲವೇ. ಅವರಿಗಾಗಿ ಭಾವೈಕ್ಯತಾ ದಿನವನ್ನಾಗಿ ಘೋಷಿಸುತ್ತಿದ್ದೀರಿ.‌ ಇದರ ಹಿನ್ನೆಲೆ ಏನು ಅನ್ನೋದನ್ನ ರಾಜ್ಯಕ್ಕೆ ತಿಳಿಸಬೇಕು‌. ನಿಮ್ಮ ರಾಜಕಾರಣಕ್ಕೆ ಮಠಗಳೂ ಸಾಲುತ್ತಿಲ್ಲ ಅನ್ನೋದು ದುರಂತವೇ ಸರಿ‌. ನಿಮ್ಮ ನಿಲುವು ಮಠದ ಪರವಾಗಿದ್ದಾವೋ ಅಥವಾ ಮಠಗಳನ್ನ ನಾಶ ಮಾಡಬೇಕೆಂದಿದ್ದಾವೋ ಸ್ಪಷ್ಟ ಪಡಿಸಬೇಕು.. ತೋಂಟದ ಶ್ರೀಗಳಿಗೆ ನೂರು ಪ್ರಶಸ್ತಿಗಳನ್ನ ಕೊಡಲಿ. ಆದರೇ, ಅವರು ಭಾವೈಕ್ಯತೆ ಅನ್ನೋ ಶಬ್ಧಕ್ಕೆ ಕಡು ವೈರಿಗಳು.‌ ಅವರ ನಡತೆ ಭಾವೈಕ್ಯತೆಯ ಶಬ್ದಕ್ಕೆ ವಿರೋಧವಾಗಿದೆ. ರಾಜಕಾರಣಿ ಗಳಿಗೆ ಅಧ್ಯಯನ ಕೊರತೆ ಇರುತ್ತೆ.. ಓದಲಿಕ್ಕೆ ಸಮಯ ಇರಲ್ಲ‌. ಭಾವೈಕ್ಯತೆ ಹಾಗೂ ನಡತೆ ಸಾಮ್ಯತೆ ಇರಬೇಕು.. ಐದುನೂರು ವರ್ಷದಿಂದ ಶಿರಹಟ್ಟಿ ಮಠ ಭಾವೈಕ್ಯತೆ ಸಾರಿದೆ. 13 ತಲೆಮಾರಿನಿಂದ ಭಾವೈಕ್ಯತೆ ಪೀಠ ಅಂತಾ ಶಿರಹಟ್ಟಿ ಮಠವನ್ನ ಕರೆಯಲಾಗುತ್ತೆ.‌ ನರಗುಂದದಿಂದ 50 ಕಿಲೋ ಮೀಟರ್ ದೂರದಲ್ಲಿರುವ ಶಿರಹಟ್ಟಿ ಮಠದ ಹಿತಿಹಾಸ ನಿಮಗೆ ಗೊತ್ತಿಲ್ಲವೆ ಎಂದು ಸಚಿವ ಸಿಸಿ ಪಾಟೀಲರಿಗೆ ಪ್ರಶ್ನೆ ಮಾಡಿದ್ದಾರೆ.

ತೋಂಟದಾರ್ಯ ಮಠಕ್ಕೂ ಶಿರಹಟ್ಟಿ ಮಠಕ್ಕೂ ಬೆಂಕಿ ಹಚ್ಚುವ ಕಾರ್ಯ ಮಾಡಿದ್ದೀರಿ‌. ನಿಮ್ಮ ಉದ್ದೇಶ ಜನರಿಗೆ ಗೊತ್ತಿದೆ‌‌. ದಿಂಗಾಲೇಶ್ವರ ಶ್ರೀಗಳನ್ನ ಕೇಳಿ ಘೋಷಣೆ ಮಾಡಬೇಕಾಗಿಲ್ಲ ಅನ್ನೋ ಹೇಳಿಕೆ ನೀಡಿದ್ದೀರಿ. ಇದು ನಮ್ಮ ಸರ್ಕಾರ ಕೇಳುವ ಹಕ್ಕು ನಮಗಿದೆ ಎಂದರು.

ಯಡಿಯೂರಪ್ಪ ಪರ ನಿಂತಿದ್ದಕ್ಕೆ ಲಿಂಗಾಯತರೇ ಮುಖ್ಯಮಂತ್ರಿಗಳಾಗಿ ಉಳಿದುಕೊಂಡರು: ಶಾಸಕ ಬಸವರಾಜ್ ಪಾಟೀಲ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಗುಂಗಿನಲ್ಲಿ ಇರುವವರಿಗೆ ನಮ್ಮ ನಿರ್ಣಯ ಅರ್ಥ ಆಗಲ್ಲ.. ಕೂಲಂಕಷವಾಗಿ ಗಮನಿಸಿದರೇ ಮಾತ್ರ ಅರಿವಾಗುತ್ತೆ..  ಯಡಿಯೂರಪ್ಪ ಪರವಾಗಿ ನಿಂತಿದ್ದು ಸತ್ಯ.. ಯಡಿಯೂರಪ್ಪ ಅವರನ್ನ ಯಾವ ಕಾರಣಕ್ಕೆ ಪದಚ್ಯುತ ಮಾಡಿದ್ದೀರಿ ಅನ್ನೋ ಪ್ರಶ್ನೆ ಕೇಳಿದ್ವಿ.. ‌ಯಡಿಯೂರಪ್ಪ ಅವರನ್ನ ಕೆಳಗಿಳಿಸುವ ಕಾರಣ ಕೊಡಬೇಕು ಅಂತಾ ಕೇಳಿದ್ವಿ.. ಯಡಿಯೂರಪ್ಪ ಅವರ ಕೊಡುಗೆ ಬಹಳಷ್ಟು ಇದೇ ಅಂತಾ ಹೇಳಿದ್ವಿ.. 

ಯಾವ ಯಡಿಯೂರಪ್ಪ ಅವರಿಂದ ಯತ್ನಾಳ್ ಅವರು ಬೆಳದ್ರೋ ಅವರ ವಿರುದ್ಧವೇ ಈಗ ಕತ್ತಿಮಸಿಯುತ್ತಿರುವುದು ಈಗ ರಾಜ್ಯಕ್ಕೆ ಗೊತ್ತಿದೆ‌‌.. ಯಡಿಯೂರಪ್ಪ, ಬಾಲೆಹೊಸೂರು ಸ್ವಾಮಿಗಳ ಹಾಗೂ ಬಸನಗೌಡ ಯತ್ನಾಳ್ ಅವರ ತತ್ವ ಸಿದ್ಧಾಂತಗಳು ರಾಜ್ಯಕ್ಕೆ ಗೊತ್ತಿದೆ.. ನಾನು ಅವತ್ತು 500 ಮಠಾಧೀಶರನ್ನ ಸೇರಿಸಿ ಹೋರಾಟ ಮಾಡಿದ್ದೆ.. ಅದರ ಫಲವಾಗೇ ಇವತ್ತು ಲಿಂಗಾಯ ಮುಖ್ಯಮಂತ್ರಿಯೊಬ್ಬರು ಉಳಿದುಕೊಂಡಿದ್ದಾರೆ.. ದಿಂಗಾಲೇಶ್ವರ ಶ್ರೀಗಳು ಅನ್ಯಾಯದ ವಿರುದ್ಧ ಹೋರಾಡುತ್ತಾರೆ ಹೊರತು ವೈಯಕ್ತಿಕ ಕಾರಣಕ್ಕೆ ಹೋರಾಡಲ್ಲ.. ನನ್ನ ಹೋರಾಟ ಹತ್ತಿಕ್ಕಲು ಅಸಾಧ್ಯ.. ಮಠಾಧೀಶನಿದ್ದೇನೆ.. ಗೌರವಾನ್ವಿತ ಸನ್ಯಾಸಿ ಸ್ಥಾನದಲ್ಲಿದ್ದು ನಾನೇನು ಮಾತಾಡುತ್ತೇನೆ ಅನ್ನೋದು ಗೊತ್ತಿದೆ ಎಂದು ನಮ್ಮ ಮಾತುಗಳ ಬಗ್ಗೆ ಅರಿವಿದೆ ಅನ್ನೋದನ್ನ ಮತ್ತೊಮ್ಮೆ ಹೇಳಿದ್ರು..

Bagalkot: ಮಠಮಾನ್ಯಗಳ ಅನುದಾನದಲ್ಲಿ 30 % ಕಮಿಷನ್ ನೀಡಬೇಕಿದೆ: ದಿಂಗಾಲೇಶ್ವರ ಶ್ರೀ

ನಯಾಪೈಸೆ ಕೊಟ್ಟಿಲ್ಲ: ನಿರಂಜನಾನಂದಪುರಿ ಸ್ವಾಮೀಜಿ

ಗದಗ : ‘ಕಾಗಿನೆಲೆ ಕನಕ ಗುರುಪೀಠ ಸೇರಿದಂತೆ ಹಲವು ಮಠಗಳು ಸರ್ಕಾರದಿಂದ ಸಾಕಷ್ಟು ಅನುದಾನ ಪಡೆದಿವೆ. ಆದರೆ, ಯಾರೂ ಯಾವುದೇ ಕಮಿಷನ್ ಕೊಟ್ಟಿಲ್ಲ. ಇತ್ತೀಚೆಗೆ ಈ ಭಾಗದ ಸ್ವಾಮೀಜಿಯೊಬ್ಬರು ಮಠಗಳಿಂದಲೂ ಕಮಿಷನ್ ಪಡೆಯಲಾಗುತ್ತಿದೆ ಎಂದು ಸರ್ಕಾರದ ಮೇಲೆ ಗೂಬೆ ಕೂರಿಸಿರುವುದು ಸತ್ಯಕ್ಕೆ ದೂರ’ ಎಂದು ಹಾವೇರಿಯ ಕಾಗಿನೆಲೆ ಮಹಾಸಂಸ್ಥಾನಮಠದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

dingaleshwara seer says Percentage not given but Officials says will cut money san

ಯಾತ್ರಿ ನಿವಾಸಕ್ಕೆ ಕೊಟ್ಟ ಅನುದಾನ ಬಳಕೆ ಮಾಡೋಕೆ ಬಿಡ್ತಿಲ್ಲ Dingaleshwara Swamiji

ಗಜೇಂದ್ರಗಡ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದುಳಿದ,ದಲಿತ ಮಠಾಧೀಶರ ಒಕ್ಕೂಟಕ್ಕೆ ₹119 ಕೋಟಿ ಅನುದಾನ ನೀಡಿದ್ದಾರೆ. ಈ ಹಿಂದೆ ಸದಾನಂದಗೌಡ, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರುಗಳು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಮಠಗಳಿಗೆ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ನೂರಾರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಈ ಎಲ್ಲ ಅನುದಾನಗಳು ಸರ್ಕಾರದಿಂದ ಜಿಲ್ಲಾಧಿಕಾರಿಗಳ ಖಜಾನೆಗೆ ಬಂದು ಅಲ್ಲಿಂದ ನೇರವಾಗಿ ಮಠಗಳ ಖಾತೆಗೆ ಜಮೆಯಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಿವೆ. ಇದರಲ್ಲಿ ಯಾರಿಗೂ ನಯಾ ಪೈಸೆ ಕಮಿಷನ್ ನೀಡಿಲ್ಲ’ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳ ಹೆಸರು ಉಲ್ಲೇಖಿಸದೇ ತಿರುಗೇಟು ನೀಡಿದರು.

Latest Videos
Follow Us:
Download App:
  • android
  • ios