ನನ್ನಷ್ಟು ಜನರಿಗೆ ಹತ್ತಿರವಾಗಿ ಸಿಗುವವನು ಭೂಮಿಮೇಲೆ ಯಾರೂ ಇಲ್ಲ: ಎಚ್‌ಡಿಕೆ
ರಾಜ್ಯ ಸರ್ಕಾರದ ಲಘುವಾದ ನಿರ್ಧಾರ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದರು.
ರಾಮನಗರ: (ಆ.20): ರಾಜ್ಯ ಸರ್ಕಾರದ ಲಘುವಾದ ನಿರ್ಧಾರ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ರಾಜ್ಯಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಕಿಡಿ ಕಾರಿದರು.
ಇಂದು ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ವ ಪಕ್ಷಗಳ ಸಭೆ ಕರೆಯುವಂತೆ ನಾನು ಒತ್ತಾಯ ಮಾಡಿದ್ದೆ.
ಇದೀಗ ಸಭೆ ಕರೆಯೋಕೆ ಚರ್ಚೆ ಮಾಡಿದ್ದಾರಂತೆ. ತಮಿಳುನಾಡಿನವರು ಸುಪ್ರೀಂ ಕೋರ್ಟ್ ಗೆ ಹೋಗಿ ಅರ್ಜಿ ಹಾಕಿದ ತಕ್ಷಣ ಇವರು ನೀರು ಬಿಟ್ಟಿದ್ದಾರೆ. ಮೊದಲು ಹೋಗಿ ವಾದ ಮಾಡಬೇಕಿತ್ತು. ರಾಜ್ಯದ ವಾಸ್ತವ ಸ್ಥಿತಿಯನ್ನ ತಿಳಿಸುವ ಕೆಲಸ ಮಾಡಬೇಕಿತ್ತು. ಆ ಕೆಲಸ ಮಾಡದೇ ಏಕಾಏಕಿ ನೀರು ಬಿಟ್ಟಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಇವರು "ನಮ್ಮ ನೀರು ನಮ್ಮ ಹಕ್ಕು ಅಂತ ದೊಡ್ಡ ಹೋರಾಟ ಮಾಡಿದ್ರು. ಅದನ್ನ ಎಷ್ಟು ಚೆನ್ನಾಗಿ ಉಳಿಸಿಕೊಳ್ತಿದ್ದಾರೆ ಅಂತ ನೋಡ್ತಿದ್ದೀರಿ ಎನ್ನುವ ಮೂಲಕ ಮೇಕೆದಾಟು ಪಾದಯಾತ್ರೆ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಏನ್ ‘ಸತ್ಯ ಹರಿಶ್ಚಂದ್ರನೇ’: ಸಚಿವ ದರ್ಶನಾಪುರ ವಾಗ್ದಾಳಿ
ರಾಮನಗರಕ್ಕೆ ಕುಡಿಯುವ ನೀರಿನ ಯೋಜನೆ ಮಾಡ್ತೀವಿ ಅಂತ ಹೇಳ್ತಿದ್ದಾರೆ. ಕಲರ್ ಕಲರ್ ಫೋಟೊ ಹಾಕೊಂಡು ಫೋಸ್ ಕೊಟ್ಟಿದ್ದಾರಲ್ಲ. ಅದೇನೋ ಡಿಕೆ ಶಿವಕುಮಾರ್ ಕನಸಿನ ಕೂಸು ಅಂತಲ್ಲ. 50 ಕೋಟಿ 60ಕೋಟಿ ಇದ್ದ ಆಸ್ತಿಯನ್ನ 1400ಕೋಟಿ ಮಾಡ್ಕೊಂಡಿದ್ದಾರೆ. ರಾಮನಗರಕ್ಕೆ ಕುಡಿಯುವ ನೀರಿಗೆ 460ಲೋಟಿ ಪ್ರಪೋಸಲ್ ತಂದಿದ್ದು ನಾನು. ಏನ್ ಡಿಕೆಶಿ ತಂದಿದ್ರಾ ಅದನ್ನ ಎಂದು ಗರಂ ಆಗಿ ಪ್ರಶ್ನಿಸಿದರು.
ನೈಸ್ ರಸ್ತೆ ವಿಚಾರ ಕುರಿತು ಸಂಸದ ಡಿಕೆ ಸುರೇಶ್ ಹೇಳಿಕೆ ಪ್ರಸ್ತಾಪಿಸಿದ ಎಚ್‌ಡಿ ಕುಮಾರಸ್ವಾಮಿ, ಅವರೇನೋ ನೈಸ್ ಕಂಪನಿ ಜೊತೆ ವ್ಯವಹಾರ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ. ನೈಸ್ ಕಂಪನಿ ಜತೆಗೆ ಯಾರು ವ್ಯವಹಾರ ಮಾಡಿದ್ದಾರೆ ಅಂತಾ ಗೊತ್ತಿದೆ. ರೈತರ ಭೂಮಿ ಕಿತ್ಕೊಂಡು ಲೂಟಿ ಮಾಡಕೊಂಡು ಕೂತಿದ್ದಾರೆ. ಆ ವಿಚಾರದ ಬಗ್ಗೆ ಶೀಘ್ರದಲ್ಲೇ ಎಲ್ಲವನ್ನೂ ತೆಗೆದು ಜನರ ಮುಂದೆ ಇಡ್ತೀನಿ. ರಾಮನಗರ ಅಭಿವೃದ್ಧಿನೇ ಆಗಿಲ್ಲ ಅಂತ ಇಲ್ಲಿಯ ಶಾಸಕ ಹೇಳ್ತಾನೆ. ಮೊದಲು ಚುನಾವಣೆಗೂ ಮುನ್ನ ಅದ್ಯಾವುದೋ ಗಿಫ್ಟ್ ಕಾರ್ಡ್ ಕೊಟ್ಟಿದ್ದಲ್ಲಪ್ಪ. ಅದನ್ನ ಮೊದಲು ಜನರಿಗೆ ತಲುಪಿಸಿ. 3 ಸಾವಿರ 5 ಸಾವಿರದ ಕೂಪನ್ ಕೊಟ್ಟಿದ್ರಲ್ಲ, ಏನಾಯ್ತು ಅದು? ರಾಮನಗರ ದೇವೇಗೌಡರ ಕುಟುಂಬ ಬರೋದಕ್ಕೂ ಮುಂಚೆ ಹೇಗಿತ್ತು.ಈಗ ಹೇಗಿದೆ ಅನ್ನೋದನ್ನ ನೋಡಲಿ. ಸರ್ವೇ ಪ್ರಕಾರ ರಾಮನಗರ ಜಿಲ್ಲೆ ರಾಜ್ಯದಲ್ಲಿ ಕಡಿಮೆ ಬಡತನ ರೇಖೆ ಹೊಂದಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ.ಇದು ದೇವೇಗೌಡರ ಕುಟುಂಬ ಕೊಟ್ಟಿರೋ ಕೊಡುಗೆ. ನಾವು ಮಾಡಿರುವ ಕೆಲಸಕ್ಕೆ ಮೊದಲು ಸುಣ್ಣ ಬಣ್ಣ ಹಾಕಿಸಿ ಸಾಕು. ಹೊಸ ಕೆಲಸ ತರೋದು ಬೇಕಾಗಿಲ್ಲ ಎಂದು ಡಿಕೆ ಬ್ರದರ್ಸ್ ವಿರುದ್ಧ ಎಚ್‌ಡಿಕೆ ವಾಗ್ದಾಳಿ ನಡೆಸಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಹಂಚಿದ್ದ ಗಿಫ್ಟ್ ಕಾರ್ಡ್ ವಿರುದ್ಧ ಕಾನೂನು ಹೋರಾಟ ಮಾಡೋದ್ರಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ ಈ ರಾಜ್ಯದಲ್ಲಿ ಕಾನೂನು ಇದ್ಯಾ? ದುಡ್ಡಿದ್ದವನಿಗೆ ಮಾತ್ರ ಕಾನೂನು, ಬಡವರಿಗೆ ಕಾನೂನು ಇಲ್ಲ.ಸರ್ಕಾರ ಬಡವರಿಗೆ ನೋಟಿಫೈ ಮಾಡಿರೋ ಭೂಮಿನಾ ಯಾರಾದ್ರೂ ಖರೀದಿ ಮಾಡಲು ಸಾಧ್ಯವೇ.? ಅದನ್ನ ಎಂಪಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಅಂತವರಿಗೆ ಈ ದೇಶದ ಕಾನೂನು ಇರೋದು.
ಅವರಿಗೆ ರಕ್ಷಣೆ ಕೊಡೋಕೆ ಕಾನೂನು ಇದೆ ಎಂದು ಕಾನೂನು ದುಡ್ಡಿದ್ದವರಿಗೆ ಮಂಡಿಯೂರಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕೈ ಮೇಲುಗೈ ವಿಚಾರ ಸಂಬಂಧ ಮಾತನಾಡಿದ ಎಚ್‌ಡಿಕೆ, ರಾಮನಗರವನ್ನ ಯಾರಿಂದಲೂ ಕಬ್ಜ ಮಾಡಲು ಆಗಲ್ಲ. ಇದು ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಕ್ಷ. ಜಿಲ್ಲೆಗೆ ನಮ್ಮ ಕೊಡುಗೆ ಏನು ಅಂತ ಎಲ್ಲರಿಗೂ ಗೊತ್ತಿದೆ. ಜನ ಒಂದು ತೀರ್ಪು ಕೊಟ್ಟಿದ್ದಾರೆ.
ಅದಕ್ಕೆ ನಾವು ತಲೆ ಬಾಗಿದ್ದೇವೆ. ಕುಮಾರಸ್ವಾಮಿ ಕಬ್ಜ, ರಾಮನಗರ ಕಬ್ಜ ಮಾಡೋದು ಸುಲಭ ಅಲ್ಲ. ರಾಮನಗರ ಯಾರಪ್ಪನ ಆಸ್ತಿ ಅಲ್ಲ.
ಕಾಂಬೋಡಿಯಾ ಪ್ರವಾಸ ಮುಗಿಸಿ ಎಚ್‌ಡಿಕೆ ವಾಪಸ್: 'ವಿದೇಶದಲ್ಲೇ ಇರಿ ವ್ಯವಸ್ಥೆ ಮಾಡ್ತೇವೆ' ಅಂದಿದ್ದ ಸಚಿವರ
ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಚ್‌ಡಿ ಕುಮಾರಸ್ವಾಮಿ, ಬದುಕಲು ಹಲವು ಮಾರ್ಗಗಳಿವೆ. ಭಗವಂತ ಅವರಿಗೆ ಆದ ಒಂದು ಕಲೆ ಕೊಟ್ಟಿದ್ದಾನೆ. ಅವರು ರಾಜಕೀಯದಿಂದಲೇ ಬದುಕಬೇಕಾ? ಅವರಿಗೆ ರಾಜಕೀಯದಿಂದ ಬದುಕುವ ಅವಶ್ಯಕತೆ ಇಲ್ಲ. ಈಗ ರಾಜಕೀಯಕ್ಕೆ ಲೂಟಿ ಹೊಡೆಯಲು ಬರುವವರೇ ಹೆಚ್ಚು.
ಅಂತಹವರಿಗೆ ಜನರು ಮಣೆ ಹಾಕ್ತಿದ್ದಾರೆ. ರಾಜಕೀಯ ಬೇಡ ಅಂತ ನಿಖಿಲ್ ಗೆ ಹಲವು ಬಾರಿ ಹೇಳಿದ್ದೇನೆ. ನಿಖಿಲ್ ನೆಮ್ಮದಿಯಿಂದ ಜೀವನ ಮಾಡಲಿ, ಕಷ್ಟಪಟ್ಟು ಬದುಕಲಿ. ನಮ್ಮ ಕುಟುಂಬದಿಂದ ಯಾವುದೇ ಕಾರಣಕ್ಕೂ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರ ಇದ್ದಾಗ ಹೋಟೆಲ್ನಲ್ಲಿ ಕೂತು ಬ್ಯುಸಿನೆಸ್ ಮಾಡ್ತಿದ್ರು ಎಂದು ಡಿ.ಕೆ.ಸುರೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್‌ಡಿ ಕುಮಾರಸ್ವಾಮಿ ಅವರು,
ಮೊನ್ನೆ ವಿಪಕ್ಷಗಳ ಮೈತ್ರಿ ಸಭೆ ಮಾಡಿದ್ರಲ್ಲ, ಇವರೆಲ್ಲಿ ಮಾಡಿದ್ರು. ಅದೇ ಜಾಗದಲ್ಲಿ ತಾನೇ ಸಭೆ ಮಾಡಿದ್ದು. ಒಂದು ತಿಳ್ಕೊಳ್ಳಿ ನನ್ನಷ್ಟು ಜನರಿಗೆ ಹತ್ತಿರವಾಗಿ ಸಿಗುವವನು ಭೂಮಿಮೇಲೆ ಯಾರೂ ಇಲ್ಲ. ಬಡವರಿಗೆ ಹತ್ತಿರವಾಗಿ ಸಿಗುವವರು ಯಾರಿದ್ದಾರೆ. ಇವರತ್ರ ನಾನು ಕಲಿಯಬೇಕಾ? ಜನರ ಹಣ ಆಸ್ತಿ ಲೂಟಿ ಮಾಡ್ಕೊಂಡು ತಿರಗಾಡ್ತಾ ಇದ್ದೀರಿ. ಇವನು ಎಂಪಿ ಆಗೋದಕ್ಕೂ ಮುಂಚೆ ಇವನ ಆಸ್ತಿ ಎಷ್ಟಿತ್ತು.ಈಗ ಎಷ್ಟಿದೆ.? ಎಂಪಿ ಆಗಿ 8ವರ್ಷದಲ್ಲಿ ಎಷ್ಟು ಆಸ್ತಿ ಮಾಡ್ಕೊಂಡಿದ್ದಾನೆ, ನಾನು ಮಾಡಿದ್ದೀನಾ?ನೈಸ್ ಸಂಸ್ಥೆಗೆ ಅಗ್ರಿಮೆಂಟ್ ಮಾಡಿದ್ದು ದೇವೇಗೌಡರು ಅಂತಾ ಆರೋಪ ಮಾಡ್ತಾರೆ. ಹೌದು ಅಗ್ರಿಮೆಂಟ್ ಮಾಡಿದ್ದು, ದೇವೇಗೌಡರೇ ಆದರೆ ಅಗ್ರಿಮೆಂಟ್ ಮಾಡಿರೋ ಉದ್ದೇಶ ಬೆಂ-ಮೈ ನಡುವೆ ರಸ್ತೆ ಮಾಡಿ ಅಂತಾ. ಆಗ ರಾಮಕೃಷ್ಣ ಹೆಗ್ಗಡೆ ಅವ್ರು ಹಣ ಇಲ್ಲ ಅಂತ ಮಾಡಲಿಲ್ಲ. ಆದ್ರೆ ಇವರು ಮಾಡ್ತಿರೋದು ಏನು? ಬೆಂಗಳೂರು ಸುತ್ತಮುತ್ತ ರೈತರ ಜಮೀನು ಲೂಟಿ ಮಾಡಿದ್ರು. ಅದರ ಬಗ್ಗೆ ಡಾಕ್ಯುಮೆಂಟ್ ಇಡೋಣ ಬನ್ನಿ. ಸಂಸದ ಡಿ.ಕೆ.ಸುರೇಶ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.