ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗಳ ಅರಣ್ಯ ತೊಡಕು ಶೀಘ್ರ ನಿವಾರಣೆ?

ರಾಜ್ಯದ ಎರಡು ಪ್ರಮುಖ ನೀರಾವರಿ ಯೋಜನೆಗಳಿ ಗಿರುವ ತೊಡಕು ನಿವಾರಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಸಕಾರಾತ್ಮಕ ಹೆಜ್ಜೆಯನ್ನಿಟ್ಟಿದೆ. 

Forest Problem of Mahadayi Bhadra Upper Projects to be Solved Soon gvd

• ಗಿರೀಶ್ ಗರಗ

ಬೆಂಗಳೂರು (ಅ.17): ರಾಜ್ಯದ ಎರಡು ಪ್ರಮುಖ ನೀರಾವರಿ ಯೋಜನೆಗಳಿ ಗಿರುವ ತೊಡಕು ನಿವಾರಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಸಕಾರಾತ್ಮಕ ಹೆಜ್ಜೆಯನ್ನಿಟ್ಟಿದೆ. ಆ ಮೂಲಕ ಮಹದಾಯಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಅನುಷ್ಠಾನಕ್ಕೆ ಶೀಘ್ರ ದಲ್ಲೇ ಅರಣ್ಯ ಭೂಮಿ ದೊರೆಯುವ ಸಾಧ್ಯತೆಗಳಿವೆ. ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿ ಯುವ ನೀರು ಪೂರೈಸಲು ಕಳಸಾ-ಬಂಡೂರಿ ನಾಲೆ ನಿರ್ಮಿಸಿ ಮಹದಾಯಿ ನದಿ ನೀರನ್ನು ಬಳಸಿಕೊಳ್ಳುವ ಮಹದಾಯಿ ನೀರಾವರಿ ಯೋಜನೆ ರೂಪಿಸಲಾಗಿದೆ. ಅದರ ಅನುಷ್ಠಾನಕ್ಕಾಗಿ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದ 10.68 ಹೆಕ್ಟೇರ್ ಭೂಮಿ ಸೇರಿದಂತೆ ಒಟ್ಟು 26 ಹೆಕ್ಟೇರ್‌ಗೂ ಹೆಚ್ಚಿನ ಅರಣ್ಯ ಭೂಮಿಯ ಅವಶ್ಯಕತೆಯಿದೆ. 

ಹಾಗೆಯೇ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿ ಅಭಯಾರಣ್ಯ ದಲ್ಲಿ 51.32 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಬೇಕಿದೆ. ಈ ಎರಡೂ ಯೋಜನೆಗಳಿಗೆ ಅರಣ್ಯ ಭೂಮಿ ಬಳಕೆ ಮಾಡಲು ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ ಅನುಮತಿ ಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತಾದರೂ, ಹಲವು ದಿನಗಳಿಂದ ರಾಷ್ಟ್ರೀಯವನ್ಯ ಜೀವಿಮಂಡಳಿ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ವಿಷಯ ಮುಂದೂಡುತ್ತಿತ್ತು. ಆದರೆ, ಕಳೆದ ಅ.9ರಂದು ನಡೆದ 80ನೇ ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಸಭೆಯಲ್ಲಿ ಎರಡೂ ಯೋಜನೆಗೆ ಸಂಬಂಧಿಸಿದಂತೆ ಸಕಾರಾತ್ಮಕ ನಿರ್ಧಾರ ತೆಗೆದು ಕೊಂಡಿದ್ದು, ಮುಂದಿನ ಒಂದೆರಡು ಸಭೆಯಲ್ಲಿ ಯೋಜನೆಗಳಿಗೆ ಅರಣ್ಯ ಭೂಮಿ ನೀಡುವ ಸಂಬಂಧ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆಗಳಿವೆ. 

ವಾಲ್ಮೀಕಿ ನಿಗಮ ಹಗರಣ: ಹವಾಲಾಗೆ 20 ರು. ನೋಟು ಪಾಸ್‌ವರ್ಡ್!

ಮಹದಾಯಿ ವರದಿ ಸಲ್ಲಿಕೆಗೆ ಸರ್ಕಾರಕ್ಕೆ ಸೂಚನೆ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ನೇಮಿಸಿದ ಸಮಿತಿಯು ಮಯದಾಯಿ ಯೋಜನೆ ಕಾಮಗಾರಿ ನಡೆಯಲಿರುವ ಕಾಳಿ ಮತ್ತು ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಈಗಾಗಲೇ ಪರಿಶೀಲನೆ ನಡೆಸಿದೆ. ಆದರೆ, ಎನ್ ಟಿಸಿಎಯು ತನ್ನ ವರದಿಯಲ್ಲಿ ಯೋಜನೆ ವಿಚಾರವು ಸುಪ್ರೀಂಕೋರ್ಟ್ ಹಂತದಲ್ಲಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ತಿಳಿಸಿತ್ತು. ಆದರೀಗ ಅ. 9ರಂದು ನಡೆದ ಸಭೆಯಲ್ಲಿ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಭಿಪ್ರಾಯವನ್ನು ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀ ಯ ವನ್ಯಜೀವಿ ಮಂಡಳಿ ಸೂಚಿಸಿದೆ. ಅದರ ಜತೆಗೆ ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿನೀಡುವ ಸಂಬಂಧ ಇರುವ ಕಾನೂನು ತೊಡಕಿನ ಕುರಿತು ವಾಸ್ತವ ಸ್ಥಿತಿ ಬಗ್ಗೆ ಲಿಖಿತ ವರದಿ ಅಥವಾ ಅಭಿಪ್ರಾಯ ಸಲ್ಲಿಸುವಂತೆಯೂ ನಿರ್ದೇಶಿಸಲಾಗಿದೆ.

ಭಾರತೀಯ ವನ್ಯಜೀವಿ ಮಂಡಳಿಯಿಂದ ಸ್ಥಳ ಪರಿಶೀಲನೆ: ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ಶಿರಾ ವ್ಯಾಪ್ತಿಯಲ್ಲಿ ಶಾಖಾ ಕಾಲುವೆ (ನಾಲಾ) ನಿರ್ಮಿಸಲು ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿ ಅಭಯಾರಣ್ಯದ 51.32 ಹೆಕ್ಟೇರ್ ಅರಣ್ಯ ಭೂಮಿ ಬಳಕೆ ಮಾಡಬೇಕಿದೆ. ಈ ಕಾಮಗಾರಿಯಲ್ಲಿ ವನ್ಯಜೀವಿಗೆ ಯಾವುದೇ ಸಮಸ್ಯೆ ಯಾಗದಂತೆ ಅರಣ್ಯ ಪ್ರದೇಶದಲ್ಲಿ ಭೂಮಿ ಮಟ್ಟ ದಿಂದ ಕೆಳಭಾಗದಲ್ಲಿ ಕಾಲುವೆ ಅಳವಡಿಸುವುದು ಹಾಗೂ ಅದನ್ನು ಮೇಲ್ಬಾಗದಿಂದ ಮುಚ್ಚುವ ಯೋಜನೆ ರೂಪಿಸಲಾಗಿದೆ. ಹೀಗಾಗಿ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಅಭಿಪ್ರಾಯ ನೀಡುವಂತೆ ಭಾರತೀಯ ವನ್ಯಜೀವಿ ಸಂಸ್ಥೆಗೆ ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ 79ನೇ ಸಭೆಯಲ್ಲಿ ಸೂಚಿಸಲಾಗಿತ್ತು. 

ಒಳಮೀಸಲಿಗೆ ಅಡ್ಡಿ ಇದೆ, ಯಾರಿಂದ ಅಂತ ಗೊತ್ತಿಲ್ಲ: ಎಚ್‌.ಆಂಜನೇಯ ಸಂದರ್ಶನ

ಅದರಂತೆ ಭಾರತೀಯ ವನ್ಯಜೀವಿ ಸಂಸ್ಥೆಯು ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ 80ನೇ ಸಭೆಗೂ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಮಗಾರಿ ನಡೆ ಯಲಿರುವ ಸ್ಥಳ ಪರಿಶೀಲನೆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿಸಿದೆ. ಅದಕ್ಕಾಗಿ ಭಾರತೀಯ ವನ್ಯ ಜೀವಿ ಸಂಸ್ಥೆ ಮೂಲಕ ಮುಂದಿನ 1 ತಿಂಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡುವಂತೆ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಜತೆಗೆ ಈ ವಿಷಯವನ್ನು 81ನೇ ವನ್ಯ ಜೀವಿ ಮಂಡಳಿ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸುವ ಕುರಿತು ತೀರ್ಮಾ ನಿಸಲಾಗಿದೆ. ಆ ಮೂಲಕ ಭದ್ರಾ ಮೇಲ್ದಂಡೆ ಯೋಜ ನೆಗೆ ಅವಶ್ಯವಿರುವ ಅರಣ್ಯ ಭೂಮಿ ದೊರೆಯುವ ಆಶಾಭಾವನೆ ಮೂಡುವಂತಾಗಿದೆ.

Latest Videos
Follow Us:
Download App:
  • android
  • ios