ಅತೀ ಮಳೆಗೆ ತತ್ತರಿಸಿದ ಹೂ ಬೆಳೆಗಾರರು: ಶ್ರಾವಣದ ಮೊದಲ ಸೋಮವಾರವೂ ಹೂವಿಗಿಲ್ಲ ಬೆಲೆ

ಜಿಲ್ಲೆಯಾದ್ಯಂತ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ನಿತ್ಯವೂ ಪರದಾಡುವ ಸ್ಥಿತಿ ಒಂದೆಡೆಯಾದರೆ, ಶ್ರಾವಣ ಪ್ರಾರಂಭವಾಗುತ್ತಿದ್ದಂತೆ ಹೂವಿಗೆ ಹೆಚ್ಚಿನ ಬೆಲೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಹೂ ಬೆಳೆಗಾರರಿಗೆ ಅತಿಯಾದ ಮಳೆ ಕಂಟಕ ಪ್ರಾಯವಾಗಿ ಪರಿಣಮಿಸಿದೆ.

flowers price falls due to heavy rain gvd

ಶಿವಕುಮಾರ ಕುಷ್ಟಗಿ

ಗದಗ (ಆ.02): ಜಿಲ್ಲೆಯಾದ್ಯಂತ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ನಿತ್ಯವೂ ಪರದಾಡುವ ಸ್ಥಿತಿ ಒಂದೆಡೆಯಾದರೆ, ಶ್ರಾವಣ ಪ್ರಾರಂಭವಾಗುತ್ತಿದ್ದಂತೆ ಹೂವಿಗೆ ಹೆಚ್ಚಿನ ಬೆಲೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಹೂ ಬೆಳೆಗಾರರಿಗೆ ಅತಿಯಾದ ಮಳೆ ಕಂಟಕ ಪ್ರಾಯವಾಗಿ ಪರಿಣಮಿಸಿದೆ.

ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಹೂವಿನ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ರೈತರು ಮಾರಾಟಕ್ಕೆ ತಂದಿದ್ದ ಹೂವುಗಳನ್ನು ಖರೀದಿಸುವವರೇ ಇರಲಿಲ್ಲ, ಸತತ 2 ವರ್ಷ ಕೊರೋನಾದಿಂದಾಗಿ ಕಳೆಗುಂದಿದ್ದ ಶ್ರಾವಣ ಮಾಸ ಈ ಬಾರಿಯಾದರೂ ಉತ್ತಮ ವಹಿವಾಟು ನಡೆಯುತ್ತದೆ ಎನ್ನುವ ಆಸೆಯೊಂದಿಗೆ ಹೂವಿನ ಬಿತ್ತನೆ ಮಾಡಿದ್ದ ರೈತರಿಗೆ ವ್ಯಾಪಕ ಮಳೆ ಕಂಟಕ ಪ್ರಾಯವಾಗಿದ್ದು, ಅದರಲ್ಲಿಯೂ ಭಾನುವಾರ ಸಂಜೆ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಹೂವುಗಳೆಲ್ಲಾ ನೆನೆದು ಹೋಗಿದ್ದು, ತೊಯ್ದ ಹೂವನ್ನೇ ರೈತರು ಅನಿವಾರ್ಯವಾಗಿ ಮಾರಾಟಕ್ಕೆ ತಂದಿದರು, ಅದನ್ನು ಸೋಮವಾರ ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲದಂತಾಗಿತ್ತು.

75ನೇ ಸ್ವಾತಂತ್ರ್ಯೋತ್ಸವದ ವೇಳೆ ಕುಗ್ರಾಮಕ್ಕೆ ಬಂತು ಬಸ್: ಗ್ರಾಮಸ್ಥರಲ್ಲಿ ಹರ್ಷ

ಸ್ಥಳೀಯ ಹೂವಿಗೆ ಮಾತ್ರ ಬೆಲೆ ಕುಸಿತ: ತಾಲೂಕಿನ ಅಡವಿಸೋಮಾಪುರ, ಹರ್ತಿ, ಕದಾಂಪುರ, ಸಂಭಾಪುರ ಗ್ರಾಮದ ರೈತರು ಶ್ರಾವಣ ಮಾಸದಲ್ಲಿ ಉತ್ತಮ ದರ ಬರುತ್ತದೆ ಎನ್ನುವ ಕಾರಣಕ್ಕಾಗಿ ಯರಿ (ಕಪ್ಪು) ಭೂಮಿಯಲ್ಲಿ ಮುಂಗಾರು ಪ್ರಾರಂಭದ ವೇಳೆಯಲ್ಲಿಯೇ ಪುಷ್ಪ ಕೃಷಿ ಆರಂಭಿಸುತ್ತಾರೆ. ಹಾಗಾಗಿ ಈ ಗ್ರಾಮಗಳಿಂದ ನಿತ್ಯವೂ ಗದಗ ಹೂವಿನ ಮಾರುಕಟ್ಟೆಗೆ 5 ರಿಂದ 10 ಕ್ವಿಂಟಾಲ್‌ ಸೇವಂತಿ ಹೂ ಮಾರಾಟಕ್ಕೆ ಬರುತ್ತಿದೆ. ಆದರೆ ಅತಿಯಾದ ಮಳೆಯಿಂದಾಗಿ ಹೂವೆಲ್ಲಾ ನೆನೆದು ಬರುತ್ತಿದ್ದು, ಅದಕ್ಕಾಗಿ ಸ್ಥಳೀಯ ಹೂವಿಗೆ ಮಾತ್ರ ಬೆಲೆ ಕುಸಿತವಾಗಿದೆ.

ಚಾಮರಾಜನಗರದಿಂದ ಹೂವು ಬರುತ್ತಿದೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಹೂವಿನ ಬೆಳೆಯಾದ ಸೇವಂತಿ, ಚೆಂಡು, ಮಲ್ಲಿಗೆ, ಕಾಕಡಾ ಸೇರಿದಂತೆ ಎಲ್ಲವೂ ನೆನೆದು ಹೋಗಿ ಉತ್ತಮ ಗುಣಮಟ್ಟದ ಹೂವು ಮಾರುಕಟ್ಟೆಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಬ್ಬಕ್ಕೆ ಬೇಕಾಗುವ ಹೂವನ್ನು ದೂರದ ಚಾಮರಾಜನಗರ ಜಿಲ್ಲೆಯಿಂದ ತರಿಸಿಕೊಳ್ಳಲಾಗುತ್ತಿದೆ. ಅಲ್ಲಿಯೂ ಈ ಬಾರಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಅದೂ ಕೂಡಾ ನೆನೆದುಹೋಗಿರುವುದರಿಂದ, ಉತ್ತಮ ಗುಣಮಟ್ಟದ ಹೂವಿಗಾಗಿ ಸಾರ್ವಜನಿಕರು ಕಾಯುತ್ತಿದ್ದಾರೆ.

ಗದಗ ಮಾರುಕಟ್ಟೆಯಲ್ಲಿ ಹೂವಿನ ದರ (ಕೆಜಿ)
ಹೂವು ಹಳೆಯ ದರ ಸೋಮವಾರದ ದರ

ಸೇವಂತಿ .175- 250 .100
ಚೆಂಡು ಹೂ .75-100 .25
ಕಲರ್‌ ಸೇವಂತಿ .250-350 .100
ಬುಡ್ಡಿ ಗುಲಾಬಿ .150-300 .100
ಮಲ್ಲಿಗೆ ಸೋಮವಾರ ಮಾರುಕಟ್ಟೆಗೆ ಬಂದೇ ಇಲ್ಲ

ಸುಬ್ರಹ್ಮಣ್ಯದಲ್ಲಿ ಭಾರಿ ಮಳೆ: ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣುಪಾಲು

ಅತಿಯಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುಣಮಟ್ಟದ ಹೂವು ಮಾರುಕಟ್ಟೆಗೆ ಬರುತ್ತಿಲ್ಲ, ಆದರೂ ನಾವು ಅದನ್ನೇ ಮಾರಾಟ ಮಾಡುವ ನಿಟ್ಟಿನಲ್ಲಿ ಸಾಕಷ್ಟುಪ್ರಯತ್ನಿಸುತ್ತಿದ್ದೇವೆ, ಶ್ರಾವಣದ ಮೊದಲ ಸೋಮವಾರವಾದರೂ ಹೂವಿನ ಖರೀದಿಗೆ ವ್ಯಾಪಾರಸ್ಥರು ಬರುತ್ತಿಲ್ಲ. ಇದರಿಂದಾಗಿ ಸಹಜವಾಗಿಯೇ ರೈತರಿಗೆ ನಷ್ಟವಾಗುತ್ತಿದೆ. ಇನ್ನು ದೂರ ದೂರ ಜಿಲ್ಲೆಗಳಿಂದ ಮಾರಾಟಕ್ಕೆ ಹೂವು ತರಿಸುವುದರಿಂದ ವ್ಯಾಪಾರಸ್ಥರಿಗೆ ಸಾಕಷ್ಟುನಷ್ಟವಾಗುತ್ತಿದೆ.
- ಬಾಷಾಸಾಬ ಮಲ್ಲಸಮುದ್ರ, ಹೂವು ವ್ಯಾಪಾರಿ

Latest Videos
Follow Us:
Download App:
  • android
  • ios