ತರಕಾರಿ ಬಳಿಕ ನಾನ್ ವೆಜ್ ಪ್ರಿಯರಿಗೆ ಶಾಕ್: ಮೀನುಗಳ ಬೆಲೆ ಏರಿಕೆ
ರಾಜ್ಯದಲ್ಲಿ ದಿನನಿತ್ಯ ಬಳಕೆಯ ಎಲ್ಲ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತರಕಾರಿ ಬೆಲೆ ಹೆಚ್ಚಳ ಆಗಿದ್ದು, ಜನರ ಜೇಬು ಸುಡುತ್ತಿದೆ. ಇದೀಗ ಮೀನುಗಳ ಬೆಲೆ ಸಹ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.30-40 ರಷ್ಟು ಬೆಲೆ ಏರಿಕೆ ಕಂಡಿದೆ ಎಂದು ಮಾರಾಟಗಾರರು ಹೇಳುತ್ತಾರೆ.
ಬೆಂಗಳೂರು (ಜು.15): ರಾಜ್ಯದಲ್ಲಿ ದಿನನಿತ್ಯ ಬಳಕೆಯ ಎಲ್ಲ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತರಕಾರಿ ಬೆಲೆ ಹೆಚ್ಚಳ ಆಗಿದ್ದು, ಜನರ ಜೇಬು ಸುಡುತ್ತಿದೆ. ಇದೀಗ ಮೀನುಗಳ ಬೆಲೆ ಸಹ ಏರಿಕೆಯಾಗಿದೆ. ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಶೇ.30-40 ರಷ್ಟು ಬೆಲೆ ಏರಿಕೆ ಕಂಡಿದೆ ಎಂದು ಮಾರಾಟಗಾರರು ಹೇಳುತ್ತಾರೆ. ಜೂನ್, ಜುಲೈ ಮತ್ತು ಆಗಸ್ಟ್ ಎರಡು ತಿಂಗಳಲ್ಲಿ ಮೀನು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ.
ಮತ್ತು ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿರುವುದರಿಂದ ಯಾಂತ್ರೀಕೃತ ಮೀನುಗಾರಿಕೆ ಮತ್ತು ಸಂಪ್ರದಾಯಿಕ ಮೀನುಗಾರಿಕೆ ರಾಜ್ಯ ಸರ್ಕಾರ ಜೂನ್ 1 ರಿಂದ ಜುಲೈ 30ರ ವರಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಹೇರಿದೆ. ಈ ಹಿನ್ನಲೆ ಮೀನುಗಳ ಬೆಲೆ ಹೆಚ್ಚಿದೆ. ಅಲ್ಲದೇ ಮಂಗಳೂರು , ಮಲ್ಪೆ, ಕಾರವಾರ, ದಂಗೊಡ್ಡಿ, ಭಟ್ಕಳ ಭಾಗದಿಂದ ಬರ್ತಿದ್ದ ಮೀನುಗಳು ಮೂರು ತಿಂಗಳಿನಲ್ಲಿ ಪೂರೈಕೆ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಸದ್ಯ ಹೊರ ರಾಜ್ಯಗಳಿಂದ ಮಾರಾಟಗಾರರು ಮೀನುಗಳನ್ನು ತರುತ್ತಿದ್ದಾರೆ. ಒರಿಸ್ಸಾ, ವಿಶಾಖಪಟ್ಟಣಂ, ನಾಗಪಟ್ಟಣಂ ಕನ್ಯ ಕುಮಾರಿ, ಕೇರಳ ಭಾಗದಿಂದ ಮೀನು ಆಮದು ಮಾಡಿಕೊಳ್ಳುತ್ತಿರುವುದರಿಂದ ಮೀನುಗಳ ದರ ಬಾರೀ ಏರಿಕೆ ಕಂಡಿವೆ
ಲಡಾಖ್‌ನತ್ತ ಯುವಕರ ಸಾಹಸಿ ಪ್ರಯಾಣ: ಕಾರವಾರದ ಯುವಕರು ಬದುಕಿ ಬಂದದ್ದೇ ಪವಾಡ
ಯಾವ್ಯಾವ ಫಿಶ್ ಎಷ್ಟೆಷ್ಟು ದರ?
1) ಬಂಗಡೆ
ಇಂದಿನ ಬೆಲೆ 350
ಹಿಂದಿನ ಬೆಲೆ - 120
2) ಭೂತಾಯಿ
ಇಂದಿನ ಬೆಲೆ 250
ಹಿಂದಿನ ಬೆಲೆ - 140
3) ಕಪ್ಪು ಬಾನ್ಚಿ
ಇಂದಿನ ಬೆಲೆ 1000
ಹಿಂದಿನ ಬೆಲೆ - 600
4) ಬಿಳಿ ಮಾನ್ಚಿ
ಇಂದಿನ ಬೆಲೆ- 1020
ಹಿಂದಿನ ಬೆಲೆ - 600
5) ಮದ್ಮಾಳ್
ಇಂದಿನ ಬೆಲೆ 570
ಹಿಂದಿನ ಬೆಲೆ 250
6) ಕೊಡ್ಡಾಯಿ
ಇಂದಿನ ಬೆಲೆ 450
ಹಿಂದಿನ ಬೆಲೆ 250
7) ಕಾಣಿ
ಇಂದಿನ ಬೆಲೆ 600
ಹಿಂದಿನ ಬೆಲೆ - 400
8) ಇಂಡಿಯನ್ ಸಾಲ್ಮನ್
ಇಂದಿನ ಬೆಲೆ - 910
ಹಿಂದಿನ ಬೆಲೆ - 650
9) ಸೀ ಫ್ರಾನ್ಸ್
ಹಿಂದಿನ ಬೆಲೆ 500
ಇಂದಿನ ಬೆಲೆ - 650
10) ಮಧುಮಾಳ್
ಇಂದಿನ ದರ 570
ಹಿಂದಿನದರ 300
11)ಟ್ಯೂನಾ
ಇಂದಿನ ಬೆಲೆ 380
ಹಿಂದಿನ ಬೆಲೆ - 250
12) ಸಿಲ್ವರ್ ಫಿಶ್
ಹಿಂದಿನ ಬೆಲೆ- 250
ಇಂದಿನ - 180
13) ಕ್ರಾಬ್
ಹಿಂದೆ 450
ಇಂದಿನ ಬೆಲೆ 300
14) ಕೆರೆ ಮೀನು
ಹಿಂದಿನ ಬೆಲೆ 180
ಇಂದಿನ ಬೆಲೆ 200
15) ರೂಲ್ ಕಟ್ಲಾ
ಹಿಂದಿನ ಬೆಲೆ 180
ಇಂದಿನ ಬೆಲೆ 210
ಬಸ್ಸಲ್ಲಿ ಫ್ರೀ ಬೇಡ, ಪುರುಷ, ಸ್ತ್ರೀಯರಿಗೆ ಅರ್ಧ ಚಾರ್ಜ್ ಮಾಡಿ: ಸಂಸದ ಸಂಗಣ್ಣ
16) ಬರಗುಡ
ಹಿಂದಿನ ಬೆಲೆ - 300
ಇಂದಿನ ಬೆಲೆ - 450