ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ವರ್ಷದ ಮೊದಲ ಮಳೆ
ರಾಜ್ಯದಲ್ಲಿ ವರ್ಷದ ಮೊದಲ ಮಳೆ ದಾಖಲಾಗಿದೆ. ಕೊಡಗು, ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆಯಾಗಿದ್ದು, ಚಳಿಗಾಲದ ಚಳಿಗೆ ಮತ್ತಷ್ಟು ತಂಪೆರೆಯಿತು.
ಮಂಗಳೂರು/ಮಡಿಕೇರಿ/ಚಿಕ್ಕಮಗಳೂರು(ಜ.25): ರಾಜ್ಯದಲ್ಲಿ ವರ್ಷದ ಮೊದಲ ಮಳೆ ದಾಖಲಾಗಿದೆ. ಕೊಡಗು, ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆಯಾಗಿದ್ದು, ಚಳಿಗಾಲದ ಚಳಿಗೆ ಮತ್ತಷ್ಟು ತಂಪೆರೆಯಿತು.
ಮಡಿಕೇರಿ, ಕುಶಾಲನಗರ, ಪೊನ್ನಂಪೇಟೆ, ವಿರಾಜಪೇಟೆ, ಸುಂಟಿಕೊಪ್ಪ, ಸಿದ್ದಾಪುರ, ಚೆಟ್ಟಳ್ಳಿ, ಪಾಲಿಬೆಟ್ಟ, ಕೊಟ್ಟಗೇರಿ, ಲಕ್ಕುಂದ, ಮಾಲ್ದಾರೆ ಸೇರಿ ಕೊಡಗಿನ ಹಲವೆಡೆ ಒಂದೂವರೆ ತಾಸು ಮಳೆ ಸುರಿಯಿತು. ಸೋಮವಾರಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಸಂಜೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ರಾತ್ರಿ ಕೂಡ ಮುಂದುವರಿದಿದೆ. ಅಕಾಲಿಕ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಕುಶಾಲನಗರ ತಾಲೂಕು ನಂಜರಾಯಪಟ್ಟಣ ಬಳಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹೊತ್ತುಕೊಂಡಿತು.
Chikkamagaluru: ಜನೆವರಿಯಲ್ಲೂ ಮಳೆ ಕಂಡು ಮಲೆನಾಡಿಗರು ಕಂಗಾಲು!
ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಹಾಗೂ ಕಳಸ ತಾಲೂಕುಗಳಲ್ಲಿ ಮಧ್ಯಾಹ್ನದ ನಂತರ ಮಳೆ ಬಂದಿದ್ದು, ಕಾಫಿ, ಅಡಿಕೆ ಕೊಯ್ಲಿಗೆ ತೊಂದರೆಯಾಯಿತು. ಕಣದಲ್ಲಿ ಒಣಗಿಸಲು ಹಾಕಿದ್ದ ಕಾಫಿ, ಮಳೆಯ ಪಾಲಾಗಿದೆ. ದಕ್ಷಿಣ ಕನ್ನಡದ ಪುತ್ತೂರು, ಉಪ್ಪಿನಂಗಡಿಗಳಲ್ಲಿ ಮಳೆಯಾಗಿದ್ದು, ಜಿಲ್ಲೆಯ ಉಳಿದೆಡೆ ಮೋಡ ಕವಿದ ವಾತಾವರಣವಿತ್ತು.