Corona Vaccine: 1ನೇ ಡೋಸ್‌ ಲಸಿಕೆ: ಶೇ.100 ಸಾಧನೆ ಹೊಸ್ತಿಲಲ್ಲಿ ಕರ್ನಾಟಕ!

ವಯಸ್ಕರ ಕೊರೋನಾ ಲಸಿಕೆ ಮೊದಲ ಡೋಸ್‌ ವಿತರಣೆಯಲ್ಲಿ ರಾಜ್ಯವು ಶೇ.100ರಷ್ಟುಗುರಿ ಸಾಧನೆಯ ಹೊಸ್ತಿಲಿಗೆ ಬಂದು ನಿಂತಿದೆ. ಈ ಮೂಲಕ (ಲಸಿಕೆ ಪಡೆಯಲು ಅರ್ಹತೆವುಳ್ಳ) ನಾಲ್ಕು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ದೊಡ್ಡ ರಾಜ್ಯಗಳ ಪೈಕಿ ಈ ಸಾಧನೆ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ.

First Dose Vaccine to 100 Percent People in Karnataka gvd

ಬೆಂಗಳೂರು (ಜ.22): ವಯಸ್ಕರ ಕೊರೋನಾ ಲಸಿಕೆ (Corona Vaccine) ಮೊದಲ ಡೋಸ್‌ (First Dose) ವಿತರಣೆಯಲ್ಲಿ ರಾಜ್ಯವು ಶೇ.100ರಷ್ಟುಗುರಿ ಸಾಧನೆಯ ಹೊಸ್ತಿಲಿಗೆ ಬಂದು ನಿಂತಿದೆ. ಈ ಮೂಲಕ (ಲಸಿಕೆ ಪಡೆಯಲು ಅರ್ಹತೆವುಳ್ಳ) ನಾಲ್ಕು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ದೊಡ್ಡ ರಾಜ್ಯಗಳ ಪೈಕಿ ಈ ಸಾಧನೆ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ (Karnataka).

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4,89,16,000 ಮಂದಿಯನ್ನು ಲಸಿಕೆ ಪಡೆಯಲು ಅರ್ಹರೆಂದು ಗುರುತಿಸಲಾಗಿತ್ತು. ಶುಕ್ರವಾರದ ಅಂತ್ಯಕ್ಕೆ ಲಸಿಕೆಗೆ ಅರ್ಹರ ಪೈಕಿ 4,88,84,500 ಮಂದಿ (ಶೇ.99.9ರಷ್ಟು) ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಗುರುತಿಸಿರುವವರ ಪೈಕಿ 31 ಸಾವಿರ ಮಂದಿ ಮಾತ್ರ ಬಾಕಿ ಉಳಿದಿದ್ದು, ಶನಿವಾರ ಅವರೂ ಲಸಿಕೆ ಪಡೆಯುವ ಸಾಧ್ಯತೆಗಳಿವೆ. ಈ ಮೂಲಕ ಮೊದಲ ಡೋಸ್‌ ವಿತರಣೆ ಶೇ.100 ರಷ್ಟುಗುರಿ ಸಾಧನೆಯಾಗಲಿದೆ. ಇನ್ನು ಎರಡನೇ ಡೋಸ್‌ ವಿತರಣೆ ವೇಗವಾಗಿ ಸಾಗಿದ್ದು, ಶೇ.85ರಷ್ಟುಮಂದಿ ಎರಡನೇ ಡೋಸ್‌ ಪೂರ್ಣಗೊಳಿಸಿದ್ದಾರೆ.

ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಮೊದಲ ಡೋಸ್‌ ಪೂರ್ಣಗೊಂಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಮೊದಲ ಮತ್ತು ಎರಡನೇ ಡೋಸ್‌ ಕೂಡ ಪೂರ್ಣಗೊಂಡಿದೆ. ಬಾಕಿ ಉಳಿದ ಜಿಲ್ಲೆಗಳಿಗೆ ಮುಖ್ಯಮಂತ್ರಿಗಳು (CM) ಇತ್ತೀಚೆಗೆ ಸಭೆ ನಡೆಸಿ ಮಾಸಾಂತ್ಯದ ಗಡುವು ನೀಡಿದ್ದಾರೆ.

Corona Vaccine in Karnataka: ರಾಜ್ಯದ 99% ಮಂದಿಗೆ ಮೊದಲ ಡೋಸ್‌

ಮೂರನೇ ಎರಡು ಭಾಗದಷ್ಟು ಮಕ್ಕಳಿಗೆ ಲಸಿಕೆ: 15 ರಿಂದ 17 ವರ್ಷದ ಮಕ್ಕಳ ಲಸಿಕೆ ಅಭಿಯಾನಕ್ಕೆ ಚುರುಕು ನೀಡಲು ಆರೋಗ್ಯ ಇಲಾಖೆ ಮುಂದಾಗಿದ್ದು, ಕಳೆದ ಎರಡು ದಿನಗಳಿಂದ ಒಂದು ಲಕ್ಷಕ್ಕೂ ಅಧಿಕ ಮಕ್ಕಳು (Childrens) ಲಸಿಕೆ ಪಡೆದಿದ್ದಾರೆ. ಈ ಮೂಲಕ ಲಸಿಕೆಗೆ ಅರ್ಹ 31.7 ಲಕ್ಷ ಮಕ್ಕಳಲ್ಲಿ 21.18 ಲಕ್ಷ ಮಂದಿ ಲಸಿಕೆ ಪಡೆದಿದ್ದು, ಮೂರನೇ ಎರಡು ಭಾಗದಷ್ಟುಮಕ್ಕಳ ಲಸಿಕೆ ಪೂರ್ಣಗೊಂಡಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr.K.Sudhakar) ಟ್ವೀಟ್‌ (Tweet) ಮಾಡಿದ್ದಾರೆ.

100% ಮೊದಲ ಡೋಸ್‌ ಲಸಿಕೆ ಪೂರ್ಣಗೊಳಿಸಿದ ಜಿಲ್ಲೆಗಳು: ಬೆಂಗಳೂರು ನಗರ ಜಿಲ್ಲೆ, ಗದಗ, ವಿಜಯಪುರ, ಬಾಗಲಕೋಟೆ, ಬೀದರ್‌, ಧಾರವಾಡ, ಚಿಕ್ಕಬಳ್ಳಾಪುರ, ಕೋಲಾರ, ಕೊಡಗು, ದಾವಣಗೆರೆ, ಬೆಳಗಾವಿ, ಹಾಸನ, ಮೈಸೂರು, ಚಿತ್ರದುರ್ಗ, ಕೊಪ್ಪಳ, ರಾಮನಗರ, ಚಾಮರಾಜನಗರ.

2 ವಾರದಲ್ಲಿ ನಿತ್ಯ ಸೋಂಕು ಲಕ್ಷಕ್ಕೇರುವ ಸಾಧ್ಯತೆ: ಜನವರಿ ಕೊನೆಯ ವಾರ ಮತ್ತು ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯದಲ್ಲಿ ಸೋಂಕು ಮತ್ತಷ್ಟುಉಲ್ಬಣಿಸಲಿದೆ ಎಂದು ತಜ್ಞರು ತಿಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಂದಿನ ಎರಡು ವಾರದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಲಕ್ಷಕ್ಕೆ ಏರುವ ಸಾಧ್ಯತೆಯಿದೆ ಎಂದು ತಜ್ಞರು ಸರ್ಕಾರಕ್ಕೆ ತಿಳಿಸಿದ್ದಾರೆ. ವಾರಾಂತ್ಯ ಕಫ್ರ್ಯೂ ಮತ್ತು ರಾತ್ರಿ ಕಫ್ರ್ಯೂನಿಂದ ಸೋಂಕು ಎಷ್ಟರ ಮಟ್ಟಿಗೆ ಕಡಿಮೆ ಆಗುತ್ತದೆ ಎಂದು ತಜ್ಞರು ತಮ್ಮ ವರದಿಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ಜನರಿಗೆ ತೊಂದರೆ ಕೊಟ್ಟು ಲಾಕ್‌ಡೌನ್‌ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಜನರ ಹಿತ ಕಾಪಾಡುವುದು ಸರ್ಕಾರದ ಮುಖ್ಯ ಉದ್ದೇಶ. 

Corona 3rd Wave: ಕೋವಿಡ್‌ ಪ್ರಸರಣದ ಆರ್‌ ವ್ಯಾಲ್ಯೂ ಇಳಿಕೆ: 3ನೇ ಅಲೆ ತಗ್ಗಿದ ಸೂಚನೆಯೆ?

ಸಾಂಕ್ರಾಮಿಕ ರೋಗಗಳು ಬಂದಾಗ ಸರ್ಕಾರ ಸಹಜವಾಗಿ ಕೆಲವು ಕ್ರಮ ತೆಗೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜೀವ ಮತ್ತು ಜೀವನ ಎರಡನ್ನೂ ಕಾಪಾಡುವುದು ಸರ್ಕಾರದ ಕರ್ತವ್ಯ. ಜನ ಸಾಮಾನ್ಯರಿಗೆ ಹೊರೆಯಾಗದಂತೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಲಕಾಲಕ್ಕೆ ತಾಂತ್ರಿಕ ಸಲಹಾ ಸಮಿತಿ, ತಜ್ಞರು ನೀಡುವ ವರದಿಯನ್ನು ಸರ್ಕಾರ ಜಾರಿಗೊಳಿಸುತ್ತದೆ ಎಂದು ಡಾ. ಸುಧಾಕರ್‌ ಹೇಳಿದರು.

Latest Videos
Follow Us:
Download App:
  • android
  • ios