ಮಹದೇಶ್ವರ ಬೆಟ್ಟದಲ್ಲಿ ಬೆಂಕಿ ಅವಘಡ ಪ್ರಕರಣ; 36 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ಬೆಂಕಿಗಾಹುತಿ!

ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಾಡು ಪ್ರಸಾದ ತಯಾರಿ ಘಟಕಕ್ಕೆ ಶುಕ್ರವಾರ ಬೆಂಕಿ ತಗುಲಿದ ಘಟನೆಯಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ಬೆಂಕಿಗಾಹುತಿಯಾಗಿದೆ.

Fire accident case in Mahadeshwar Hill More than 36 thousand Ladu Prasad destroyed at chamarajangar rav

ಚಾಮರಾಜನಗರ (ಡಿ.2): ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಲಾಡು ಪ್ರಸಾದ ತಯಾರಿ ಘಟಕಕ್ಕೆ ಶುಕ್ರವಾರ ಬೆಂಕಿ ತಗುಲಿದ ಘಟನೆಯಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಲಾಡು ಪ್ರಸಾದ ಬೆಂಕಿಗಾಹುತಿಯಾಗಿದೆ.

ಲಾಡು ತಯಾರಿಸಲು ಇಟ್ಟಿದ್ದ 9 ಕ್ವಿಂಟಾಲ್ ಸಕ್ಕರೆ, 96 ಕೆಜೆ ಕಡ್ಲೆಹಿಟ್ಟು,  40 ಕೆಜಿ ನಂದಿನಿ ತುಪ್ಪ, 30 ಕೆಜಿ ದ್ರಾಕ್ಷಿ,  20 ಕೆಜಿ ಗೋಡಂಬಿ ಸುಟ್ಟು ಕರಕಲಾಗಿವೆ. ಬೆಂಕಿ ಅವಘಡದಿಂದಾಗಿ ಲಾಡು ಹಾಗು ಇತರ ಪರಿಕರ ಸೇರಿದಂತೆ 10.26 ಲಕ್ಷ ರೂಪಾಯಿ ನಷ್ಟವಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಾದಪ್ಪನ ದೀಪಾವಳಿ ಜಾತ್ರೆ: ಭಕ್ತರಿಂದ ದೇವಸ್ಥಾನಕ್ಕೆ ಇಷ್ಟೊಂದು ಕೋಟಿ ಆದಾಯ ಬಂತಾ?

ಲಾಡು ಪ್ರಸಾದ ಮಾರಾಟ ತತ್ಕಾಲಿಕ ಸ್ಥಗಿತ:

ನಿನ್ನೆ ಸಿಲಿಂಡರ್ ಸೋರಿಯಿಂದ ವ್ಯಾಪಿಸಿದ ಬೆಂಕಿಗೆ ಲಾಡು ತಯಾರಿಕೆ ಕೋಣೆ, ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿರುವ ಹಿನ್ನೆಲೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಲಾಡು ಸಿಗದೆ ನಿರಾಸೆಯಾಗಿದೆ ಸದ್ಯ ಬೆಟ್ಟದಲ್ಲಿ ಲಾಡು ಪ್ರಸಾದ ಮಾರಾಟಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಘಟನೆ ಹಿನ್ನೆಲೆ:

ನಿನ್ನೆ ಲಾಡು ಪ್ರಸಾದ ತಯಾರಿಕೆ ಘಟಕದಲ್ಲಿರುವ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಅನಾಹುತ ಸಂಭವಿಸಿದ್ದು, ಸಿಲಿಂಡರ್‌ನನ್ನು ನಂದಿಸಲು ಹೋದಾಗ ಘಟಕದಲ್ಲಿ ಸಿಹಿ ಜಿಡ್ಡು ಹಾಗೂ ಎಣ್ಣೆ ಪದಾರ್ಥ ಇದ್ದ ಪರಿಣಾಮ ಬೆಂಕಿ ಇನ್ನಷ್ಟು ವ್ಯಾಪಿಸಿಕೊಂಡಿತ್ತು. ಇದರ ಪರಿಣಾಮ ಲಾಡು ತಯಾರಿಕಾ ಸಾಮಗ್ರಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

 

ಮಹದೇಶ್ವರ ಬೆಟ್ಟಕ್ಕೆ ಹೋಗುವ ಒಂದೇ ವಾಹನಕ್ಕೆ ಎರಡು ಬಾರಿ ಸುಂಕ ವಸೂಲಿ: ಭಕ್ತರ ಆಕ್ಷೇಪ!

ಇದೇ ವೇಳೆ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಹೆಚ್ಚು ಸಿಬ್ಬಂದಿ ತೊಡಗಿದ್ದರು. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ. ಅಲ್ಲೇ ಇದ್ದ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿ ಘಟಕದ ಹಿಂಭಾಗದಲ್ಲಿದ್ದ ಉಳಿಕೆ ಸಿಲಿಂಡರ್‌ಗಳನ್ನೆಲ್ಲ ಸುರಕ್ಷಿತ ಸ್ಥಳಕ್ಕೆ ಬದಲಾಯಿಸಿ ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದರು.

Latest Videos
Follow Us:
Download App:
  • android
  • ios