ಚನ್ನಪಟ್ಟಣ ಎಲೆಕ್ಷನ್‌ಗೆ 50 ಕೋಟಿ ಹಣಕ್ಕೆ ಡಿಮ್ಯಾಂಡ್: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌

ವಿಜಯ್ ಟಾಟಾ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾಜಿ ಎಂಎಲ್‌ಸಿ ರಮೇಶ್ ಗೌಡ ಪ್ರತಿದೂರು ನೀಡಿದ್ದಾರೆ. ನೂರು ಕೋಟಿ ಹಣವನ್ನು ಕೊಡಬೇಕು ಎಂದು ಕೇಳಿದರು. ಹಣ ಇಲ್ಲಾ ಎಂದಾಗ ಬೆದರಿಕೆ ಹಾಕಿದರು. ಮನೆಗೆ ಊಟಕ್ಕೆ ಎಂದು ಕರೆಸಿದ್ದಾಗ ಘಟನೆ ನಡೆದಿದೆ ಎಂದು ದೂರು ನೀಡಿದ್ದಾರೆ. 

FIR against Union Minister HD Kumaraswamy on Demand for 50 crore money for channapatna byelection grg

ಬೆಂಗಳೂರು(ಅ.03): ಉದ್ಯಮಿ ವಿಜಯ್ ಟಾಟಾ ನೀಡಿದ ದೂರಿನ ಮೇರೆಗೆ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹೌದು, A1 ರಮೇಶ್ ಗೌಡ, A2 ಹೆಚ್. ಡಿ. ಕುಮಾರಸ್ವಾಮಿಯನ್ನ ಆರೋಪಿಗಳಾಗಿ ಹೆಸರಿಸಿ ಎಫ್‌ಐಆರ್ ದಾಖಲಾಗಿದೆ. 

ಚನ್ನಪಟ್ಟಣ ಎಲೆಕ್ಷನ್‌ಗೆ 50 ಕೋಟಿ ಹಣಕ್ಕಾಗಿ ಡಿಮ್ಯಾಂಡ್ ಇಟ್ಟು ಬೆದರಿಕೆ ಹಾಕಿದ್ರು ಅಂತಾ ಉದ್ಯಮಿ ವಿಜಯ್ ಟಾಟಾ ದೂರು ನೀಡಿದ್ದಾರೆ. ಬಿಎನ್ ಎಸ್ 3(5), 308(2), 351( 2), (ಬಿ ಎನ್ ಎಸ್ 308(2) - ಸುಲಿಗೆ . 351(2) - ಜೀವ ಬೆದರಿಕೆ) ಸೆಕ್ಷನ್ ನಡಿ ಎಫ್‌ಐಆರ್ ದಾಖಲಾಗಿದೆ. 

ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ ಶಾಸಕ ಜಿಟಿ ದೇವೇಗೌಡ! ಬಿಜೆಪಿ ಜೆಡಿಎಸ್ ದೋಸ್ತಿ ನಾಯಕರ ವಿರುದ್ಧ ವಾಗ್ದಾಳಿ!

ಎಫ್‌ಐಆರ್‌ನಲ್ಲಿ ಏನಿದೆ?

2018 ರಿಂದ ಜೆಡಿಎಸ್ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ನನ್ನ ಕಾರ್ಯ ಅಭಿನಂಧಿಸಿ ಪಕ್ಷದ ಸೋಷಿಯಲ್ ಮೀಡಿಯಾ ವಿಂಗ್‌ಗೆ ಉಪಾಧ್ಯಕ್ಷನಾಗಿ ಮಾಡಿದ್ರು. ನಾನು ಉಪಾಧ್ಯಕ್ಷನಾದ ಬಳಿಕ  ದೇವೇಗೌಡರು, ‌ಕುಮಾರಸ್ವಾಮಿ ಸೇರಿ ಸಭೆ ಮಾಡಿರುತ್ತೇವೆ. ಸಾಮಾಜಿಕ ಜಾಲತಾಣ ಸೇರಿದಂತೆ ಪಕ್ಷದ ಏಳ್ಗೆ ಬಗ್ಗೆ ಚರ್ಚೆಗಳನ್ನ ನಡೆಸಿರುತ್ತೇವೆ. 2019 ರಲ್ಲಿ ಮಂಡ್ಯ ಲೋಕಸಭಾ ಎಲೆಕ್ಷನ್ ಸಂದರ್ಭದಲ್ಲಿ ನಿಖಿಲ್ ಪರವಾಗಿ ಸಾಕಷ್ಟು ಅಭಿಯಾನ ಮಾಡಿದ್ದೇವೆ. ಈ ಅಭಿಯಾನಗಳಿಗೆ ನಾನು ವೈಯಕ್ತಿಕವಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇನೆ. ಇದಾದ ಬಳಿಕ ನಾನು ಕೆಲ ವರ್ಷಗಳಿಂದ ನನ್ನ ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ಗಮನ ಹರಿಸಿದ್ದೆ. ಹೀಗಾಗಿ ಪಕ್ಷದ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಕಳೆದ ಒಂದು ತಿಂಗಳಿನಿಂದ ನನ್ನ ಮನೆಗೆ ಆಗಮಿಸಿದ್ದ ಮಾಜಿ ಎಂಎಲ್ ಸಿ ರಮೇಶ್ ಗೌಡ, ಪಕ್ಷದ ಕಾರ್ಯಗಳಲ್ಲಿ ಪುನಃ ತೊಡಗಿಸಿಕೊಳ್ಳುವಂತೆ ಕೋರಿದ್ರು. ಕುಮಾರಣ್ಣ ಪಕ್ಷದ ಸಂಘಟನೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೋರಿದ್ರು. ರಮೇಶ್ ಗೌಡ ಆಗಸ್ಟ್ 24 2024 ರಂದು ರಾತ್ರಿ 10 ಗಂಟೆಗೆ ಮನೆಗೆ ಆಗಮಿಸಿದ್ರು. ನಮ್ಮ ಜೊತೆಯಲ್ಲಿ ಕೂತು ಊಟ ಮಾಡುತ್ತಾ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ವಿವರಿಸತೊಡಗಿದ್ರು .

ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡೋದು ಅಂತಿಮವಾಗಿದೆ. ಈ ಬಾರಿ ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿರಲು ಮನವಿ ಮಾಡಿದ್ರು. ಇದೇ ವೇಳೆ ತಮ್ಮ ಮೊಬೈಲ್ ನಿಂದ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಕರೆ ಮಾಡಿದ್ರು. ಕುಮಾರಸ್ವಾಮಿ ಜೊತೆಯಲ್ಲಿ ಮಾತನಾಡುತ್ತಾ, ರಮೇಶ್ ಗೌಡ ನಮ್ಮ ಮನೆಗೆ ಬಂದಿರೋದಾಗಿ ತಿಳಿಸಿದ್ರು. ಆನಂತರ ನನಗೆ ಕುಮಾರಸ್ವಾಮಿ ಜೊತೆ ಮಾತನಾಡಲು ಫೋನ್ ಕೊಟ್ಟರು. ಕುಶಲೋಪರಿ ವಿಚಾರಿಸಿದ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ರು. ಉಪ ಚುನಾವಣೆ ಅನಿವಾರ್ಯ, ನಮಗೆ ಖರ್ಚಿಗೆ 50 ಕೋಟಿ ರೂಪಾಯಿ ಕೊಡಬೇಕಾಗುತ್ತೆ ಎಂದ್ರು. ಸರ್ ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದೆ. ನನ್ನ ಮಾತಿನಿಂದ ಕೋಪಗೊಂಡ ಕುಮಾರಸ್ವಾಮಿ 50 ‌ಕೋಟಿ ರೆಡಿ ಮಾಡು ಇಲ್ಲದೆ ಹೋದ್ರೆ ನಾನೇನ್ ಮಾಡ್ತಿನೊ ಗೊತ್ತಿಲ್ಲ ಎಂದು ಬೆದರಿಕೆ ಹಾಕಿದ್ರು.

ಬೆಂಗಳೂರಿನಲ್ಲಿ ರಿಯಲ್ ಎಷ್ಟೇಟ್ ಉದ್ಯಮ ನಡೆಸೋದು ಮಾತ್ರವಲ್ಲ ಬದುಕೋದು ಕಷ್ಟ ಎಂದು ಬೆದರಿಕೆ ಹಾಕಿ. ರಮೇಶ್ ಗೌಡ 50 ಕೋಟಿ ರೆಡಿ ಮಾಡಿಕೊಳ್ಳಿ. ಜೊತೆಗೆ ದೇವಸ್ಥಾನ, ಶಾಲೆ ಕಟ್ಟಿಸುತ್ತಿದ್ದು ಅದಕ್ಕೆ ಐದು ಕೋಟಿ ನೀಡುವಂತೆ ಒತ್ತಾಯಿಸಿದ್ರು. ಈ ಹಣ ನೀಡದೇ ಇದ್ರೆ ನಿಮಗೆ ತೊಂದರೆ ಎದುರಾಗುತ್ತೆ ಎಂದು ಧಮ್ಕಿ ಹಾಕಿದ್ರು. ಇದಕ್ಕೆ ಸಂಬಂಧಿಸಿದಂತೆ ರಮೇಶ್ ಗೌಡರು ವಾಟ್ಸಪ್ ಸಂದೇಶ ಕೂಡ ಕಳಿಸಿರ್ತಾರೆ. ಕುಮಾರಸ್ವಾಮಿ ಹಾಗೂ ರಮೇಶ್ ಗೌಡ ನನ್ನ ವಿರುದ್ಧ ಷಡ್ಯಂತ್ರ ರಚಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಜೀವಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ವಿಜಯ್ ಟಾಟಾ ಉಲ್ಲೇಖಿಸಿದ್ದಾರೆ.

ಹೆಚ್‌ಡಿಕೆ ವಿರುದ್ಧ ಹಂದಿ ಪದ ಬಳಕೆ: ಎಡಿಜಿಪಿ ವಿರುದ್ಧ ತಿರುಗಿಬಿದ್ದ ಜೆಡಿಎಸ್

ವಿಜಯ್ ಟಾಟಾ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ಪ್ರತಿ ದೂರು

ವಿಜಯ್ ಟಾಟಾ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾಜಿ ಎಂಎಲ್‌ಸಿ ರಮೇಶ್ ಗೌಡ ಪ್ರತಿದೂರು ನೀಡಿದ್ದಾರೆ. ನೂರು ಕೋಟಿ ಹಣವನ್ನು ಕೊಡಬೇಕು ಎಂದು ಕೇಳಿದರು. ಹಣ ಇಲ್ಲಾ ಎಂದಾಗ ಬೆದರಿಕೆ ಹಾಕಿದರು. ಮನೆಗೆ ಊಟಕ್ಕೆ ಎಂದು ಕರೆಸಿದ್ದಾಗ ಘಟನೆ ನಡೆದಿದೆ ಎಂದು ದೂರು ನೀಡಿದ್ದಾರೆ.  

ಆಗಸ್ಟ್ 24 ರಂದು ಮನೆಗೆ ಊಟಕ್ಕೆ ಕರೆಸಿದ್ರು. ಈ ವೇಳೆ ತಾನು ಈಗಾಗಲೇ ಲಾಸ್‌ನಲ್ಲಿ ಇದ್ದೇನೆ. ನನಗೆ ಹಣ ಬೇಕಿದೆ. ನೀವು ನೂರು ಕೋಟಿ ಕೊಡಿ ಇಲ್ಲವಾದ್ರೆ ನಿಮ್ಮನ್ನು ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ರಮೇಶ್ ಗೌಡ ನೀಡಿರುವ ದೂರನ್ನು ಅಮೃತಹಳ್ಳಿ ಪೊಲೀಸರು ಪಡೆದುಕೊಂಡಿದ್ದಾರೆ. 

Latest Videos
Follow Us:
Download App:
  • android
  • ios