ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿ ನೀಡಿದ ರೈತರ ಅಥವಾ ಭೂ ಮಾಲೀಕರ ಕುಟುಂಬದ ಸದಸ್ಯರೊಬ್ಬರಿಗೆ ಕಡ್ಡಾಯವಾಗಿ ಉದ್ಯೋಗನೀಡಬೇಕು. ಈ ಕುರಿತಂತೆ ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗಲೇ ಷರತ್ತು ವಿಧಿಸಲಾಗುತ್ತದೆ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ 

ವಿಧಾನಸಭೆ(ಫೆ.14): ಸರ್ಕಾರದಿಂದ ಜಾಗ ಸೇರಿದಂತೆ ಇನ್ನಿತರ ಅನುಕೂಲ ಪಡೆದು ಕೈಗಾರಿಕೆ ಸ್ಥಾಪಿಸಿದವರು ಕಡ್ಡಾಯವಾಗಿ ಭೂಮಿ ನೀಡಿದ ರೈತರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು. ಒಂದು ವೇಳೆ ಉದ್ಯೋಗ ನೀಡದ ಸಂಸ್ಥೆಗಳಿಗೆ ಭಾರೀ ಪ್ರಮಾಣದ ದಂಡ ಹಾಗೂ ಕೈಗಾರಿಕಗಳಿಂದ ಭೂಮಿ ಹಿಂಪಡೆಯುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದರು. 

ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗ ನೀಡದಿರುವ ಕುರಿತು ಜೆಡಿಎಸ್‌ನ ' ಸಮೃದ್ಧಿ ವಿ.ಮಂಜುನಾಥ್‌ ವಿಷಯ ಪ್ರಸ್ತಾಪಕ್ಕೆ ಎಂ.ಬಿ. ಪಾಟೀಲ್ ಉತ್ತರಿಸಿದರು.

ಕಾಂಗ್ರೆಸ್‌ನ ನಡೆ-ನುಡಿ ಒಂದೇ, ಬಿಜೆಪಿ ಸುಳ್ಳಿನ ಫ್ಯಾಕ್ಟ್ರಿ: ಸಚಿವ ಎಂ.ಬಿ.ಪಾಟೀಲ್‌

ಕೈಗಾರಿಕಾ ಪ್ರದೇಶಕ್ಕಾಗಿ ಭೂಮಿ ನೀಡಿದ ರೈತರ ಅಥವಾ ಭೂ ಮಾಲೀಕರ ಕುಟುಂಬದ ಸದಸ್ಯರೊಬ್ಬರಿಗೆ ಕಡ್ಡಾಯವಾಗಿ ಉದ್ಯೋಗನೀಡಬೇಕು. ಈ ಕುರಿತಂತೆ ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಾಗಲೇ ಷರತ್ತು ವಿಧಿಸಲಾಗುತ್ತದೆ ಎಂದು ಹೇಳಿದರು.