Asianet Suvarna News Asianet Suvarna News

ಕಾಂಗ್ರೆಸ್‌ನ ನಡೆ-ನುಡಿ ಒಂದೇ, ಬಿಜೆಪಿ ಸುಳ್ಳಿನ ಫ್ಯಾಕ್ಟ್ರಿ: ಸಚಿವ ಎಂ.ಬಿ.ಪಾಟೀಲ್‌

‘ಯಾವುದು ಸುಳ್ಳು? ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದು ಸುಳ್ಳಾ? 4 ಕೋಟಿ ಜನರು ಇದರ ಫಲಾನುಭವಿಗಳಾಗಿರುವುದು ಸುಳ್ಳಾ? ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರದ ಸಾಧನೆ ಸುಳ್ಳು ಎನ್ನುವ ಬಿಜೆಪಿಯವರ ಪಕ್ಷವೇ ದೊಡ್ಡ ಸುಳ್ಳಿನ ಫ್ಯಾಕ್ಟರಿ ಎಂದ ಸಚಿವ ಎಂ.ಬಿ.ಪಾಟೀಲ್‌ 

BJP is a Factory of Lies Says Minister MB Patil grg
Author
First Published Feb 13, 2024, 9:42 AM IST

ಬೆಂಗಳೂರು(ಫೆ.13): ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದು, ನಮ್ಮದು ನಡೆ-ನುಡಿ ಒಂದೇ ಆಗಿದೆ. ಆದರೆ, ಬಿಜೆಪಿಯವರದ್ದು ಇದಕ್ಕೆ ತದ್ವಿರುದ್ಧ. ಕೊಟ್ಟ ಯಾವ ಭರವಸೆಯನ್ನೂ ಈಡೇರಿಸದ ಸುಳ್ಳಿನ ಫ್ಯಾಕ್ಟರಿ ಬಿಜೆಪಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿರುಗೇಟು ನೀಡಿದ್ದಾರೆ. 

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಬಗ್ಗೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರಿಂದ ಸುಳ್ಳು ಹೇಳಿಸಲಾಗಿದೆ ಎಂದು ಬಿಜೆಪಿಯವರು ಟೀಕಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ‘ಯಾವುದು ಸುಳ್ಳು? ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವುದು ಸುಳ್ಳಾ? 4 ಕೋಟಿ ಜನರು ಇದರ ಫಲಾನುಭವಿಗಳಾಗಿರುವುದು ಸುಳ್ಳಾ? ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರದ ಸಾಧನೆ ಸುಳ್ಳು ಎನ್ನುವ ಬಿಜೆಪಿಯವರ ಪಕ್ಷವೇ ದೊಡ್ಡ ಸುಳ್ಳಿನ ಫ್ಯಾಕ್ಟರಿ ಎಂದರು.

ಮಾಂಸಾಹಾರ ತಿಂದು ಸಿಎಂ ಸುತ್ತೂರು ಮಠಕ್ಕೆ ಹೋಗಿಲ್ಲ: ಬಿಜೆಪೀದು ಬರೀ ಇದೇ ಆಯ್ತು: ಎಂಬಿ ಪಾಟೀಲ್ ಗರಂ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಕೊಟ್ಟ ಭರವಸೆಯಂತೆ ನಡೆದುಕೊಂಡಿದೆ. ಇದನ್ನೇ ರಾಜ್ಯಪಾಲರು ಭಾಷಣದಲ್ಲಿ ಹೇಳಿದ್ದಾರೆ. ಇದನ್ನು ಸುಳ್ಳು ಎಂದು ಹೇಳಲು ಬಿಜೆಪಿಯವರೇನಾದರೂ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುದಾನ ಕೊಡಿಸಿದ್ದಾರಾ’ ವಿದೇಶದಲ್ಲಿರುವ ಕಪ್ಪು ಹಣ ತಂದರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿದರಾ? ರೈತರ ಆದಾಯ ದ್ವಿಗುಣಗೊಳಿಸಿದರಾ? ಯಾವ ಯಾವ ಭರವಸೆಯನ್ನೂ ಈಡೇರಿಸಿದ್ದಾರೆ ಮೊದಲು ತೋರಿಸಲಿ. ಅದೂ ಸಾಲದು ಎಂಬಂತೆ ರಾಜ್ಯದ ತೆರಿಗೆ ಪಾಲು, ಬರ ಪರಿಹಾರ, ಅನುದಾನ ಎಲ್ಲದರಲ್ಲೂ ಅನ್ಯಾಯ, ಮಲತಾಯಿ ಧೋರಣೆ ತೋರುತ್ತಿದ್ದಾರೆ. ಇವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.

ನಮ್ಮ ಸರ್ಕಾರದ ಸಾಧನೆ ಸುಳ್ಳು ಎನ್ನುವ ಬಿಜೆಪಿಯವರ ಪಕ್ಷವೇ ದೊಡ್ಡ ಸುಳ್ಳಿನ ಫ್ಯಾಕ್ಟರಿ. ವಿದೇಶದಲ್ಲಿರುವ ಕಪ್ಪು ಹಣ ತಂದರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸಿದರಾ? ರೈತರ ಆದಾಯ ದ್ವಿಗುಣಗೊಳಿಸಿದರಾ? ಯಾವ ಯಾವ ಭರವಸೆಯನ್ನೂ ಈಡೇರಿಸಿದ್ದಾರೆ ಮೊದಲು ತೋರಿಸಲಿ. ಅದೂ ಸಾಲದು ಎಂಬಂತೆ ರಾಜ್ಯದ ತೆರಿಗೆ ಪಾಲು, ಬರ ಪರಿಹಾರ, ಅನುದಾನ ಎಲ್ಲದರಲ್ಲೂ ಅನ್ಯಾಯ, ಮಲತಾಯಿ ಧೋರಣೆ ತೋರುತ್ತಿದ್ದಾರೆ. ಇವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದರು.

Latest Videos
Follow Us:
Download App:
  • android
  • ios