ಬೆಂಗಳೂರು(ಸೆ.26): ಸಂಚಾರ ನಿಯಮ ಉಲ್ಲಂಘಿಸಿ ಟಿಂಟೆಡ್‌ ಗ್ಲಾಸ್‌ ಹಾಕಿದ್ದ ಆರೋಪದ ಮೇರೆಗೆ ವಕೀಲರೊಬ್ಬರ ಎಸ್‌ಯುವಿ ಕಾರಿಗೆ ಕೆ.ಆರ್‌.ಪುರ ಸಂಚಾರ ಠಾಣೆ ಪೊಲೀಸರು ಶುಕ್ರವಾರ ದಂಡ ವಿಧಿಸಿದ್ದಾರೆ.

ಕೆಲ ದಿನಗಳ ಹಿಂದೆ ವಕೀಲ ಅನೀಶ್‌ ತಮಿಳುನಾಡಿನಿಂದ ಬೆಂಗಳೂರಿಗೆ ಬರುವಾಗ ಇನ್‌ಸ್ಪೆಕ್ಟರ್‌ ಎಂ.ಎ.ಮಹಮ್ಮದ್‌ ಅವರಿಗೆ ಕಾರು ಸಿಕ್ಕಿಬಿದ್ದಿದೆ. ಎಸ್‌ಯುವಿ ಕಾರಿಗೆ ಟಿಂಟೆಡ್‌ ಗ್ಲಾಸ್‌ ಹಾಕಿದ್ದರು. ಕೆ.ಆರ್‌.ಪುರ ರೈಲು ನಿಲ್ದಾಣದ ಬಳಿ ಶುಕ್ರವಾರ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್‌ ಮಹಮ್ಮದ್‌, ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಟಿಂಟೆಡ್‌ ಗ್ಲಾಸ್‌ ದೃಢವಾಗಿದೆ. 

ಮೈಸೂರು ಲ್ಯಾಂಪ್ಸ್‌ ಕಾರ್ಖಾನೆ ಸ್ವತ್ತು ಮಾರಾಟದ ವಿರುದ್ಧ ಖಾಸಗಿ ನಿರ್ಣಯ

ಈ ತಪ್ಪಿಗೆ ಕಾರು ಓಡಿಸುತ್ತಿದ್ದ ಅನೀಶ್‌ಗೆ 500 ರು. ದಂಡ ವಿಧಿಸಿದ್ದಾರೆ. ಬಳಿಕ ಸ್ಥಳದಲ್ಲೇ ದಂಡ ಪಾವತಿಸಿ ಅವರು ತೆರಳಿದ್ದಾರೆ. ಇತ್ತೀಚಿಗಷ್ಟೇ ತಮಿಳುನಾಡಿನ ನಟ ವಿಜಯ್‌ ಅವರಿಂದ ವಕೀಲ ಅನೀಶ್‌ ಕಾರು ಖರೀದಿಸಿದ್ದರು. ಟಿಂಟೆಡ್‌ ಗ್ಲಾಸ್‌ ತೆಗೆಸದೆ ಚಲಾಯಿಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.