ಫುಟ್ಬಾಲ್ ಪಂದ್ಯ ವೇಳೆ ವೀಕ್ಷಣೆಗೆ ಬಂದ ಅಭಿಮಾನಿಗಳ ನಡುವೆ ಬಡಿದಾಟ ಆಗಿರುವ ಘಟನೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ನಡೆದಿದೆ.

ಬೆಂಗಳೂರು ಫೆ.12) : ಫುಟ್ಬಾಲ್ ಪಂದ್ಯ ವೇಳೆ ವೀಕ್ಷಣೆಗೆ ಬಂದ ಅಭಿಮಾನಿಗಳ ನಡುವೆ ಬಡಿದಾಟ ಆಗಿರುವ ಘಟನೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರ ಕಂಠೀರವ ಕ್ರೀಡಾಂಗಣ(Kantheerava Stadium)ದಲ್ಲಿ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್(FC and Kerala Blaster teams)ತಂಡಗಳ ನಡುವಿನ ಪುಟಬಾಲ್ ಪಂದ್ಯ(Football match)ನಡೆದಿತ್ತು. ಈ ಪಂದ್ಯದ ವೀಕ್ಷಣೆಗೆ ಎರಡು ತಂಡಗಳ ಅಭಿಮಾನಿಗಳಿಂದ ಕಿಕ್ಕಿರಿದಿದ್ದ ಕ್ರೀಡಾಂಗಣ. ಪಂದ್ಯದ ಫಲಿತಾಂಶ ಬಂದ ಬಳಿಕ ಶುರುವಾದ ಗಲಾಟೆ. ಎರಡು ತಂಡದ ಅಭಿಮಾನಿಗಳು ಕೈ ಕೈ ಮಿಲಾಯಿಸಿ ತಳ್ಳಾಟ ನೂಕಾಟ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಎರಡು ತಂಡಗಳ ಬಡಿದಾಟ ಮಾಡಿಕೊಳ್ಳುತ್ತಿರುವ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 

ಕುಡಿದ ಮತ್ತಿನಲ್ಲಿ ಹೋಟೆಲ್ ನಲ್ಲಿ ದಾಂಧಲೆ:

ಬೆಂಗಳೂರು: ಕುಡಿದ ಮತ್ತಲ್ಲಿ ಯುವಕರ ಗುಂಪೊಂದು ಹೋಟೆಲ್ ಮಾಲೀಕರೊಂದಿಗೆ ಗಲಾಟೆ ಮಾಡಿಕೊಂಡಿರುವ ಘಟನೆ ಎಂಎಸ್‌ ರಾಮಯ್ಯ ಆಸ್ಪತ್ರೆ ಬಳಿ ನಡೆದಿದೆ.

ಬರ್ತಡೇ ಪಾರ್ಟಿ ಮಾಡಲು ಹೋಟೆಲ್‌ಗೆ ಹೋಗಿದ್ದ ಯುವಕರು. ಹೋಟೆಲ್ ನಲ್ಲಿ ಕೇಕ್ ಕತ್ತರಿಸಿ ಬರ್ತಡೇ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿದ ಬಳಿಕ ಬಿಲ್ ಪಾವತಿಸುವ ವೇಳೆ ನಡೆದಿರುವ ಗಲಾಟೆ. ಹೊಟೆಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದು ಹಲ್ಲೆಗೆ ಮುಂದಾಗಿದ್ದ ಯುವಕರ ಗುಂಪು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಹೋಟೆಲ್ ಸಿಬ್ಬಂದಿ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಗಲಾಟೆ ಸಂಬಂಂಧ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು.