ಆನೇಕಲ್‌(ಜ.01): ಆನೇಕಲ್‌ ತಾಲೂಕಿನ 28 ಗ್ರಾಪಂಗಳ 682 ಸ್ಥಾನಗಳ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣ ಎಎಸ್‌ಬಿ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ ಆರಂಭಗೊಂಡ ಮತ ಎಣಿಕೆ ಕಾರ್ಯ ಮಧ್ಯರಾತ್ರಿ 2 ಗಂಟೆ ವರೆಗೂ ನಡೆಯಿತು.

ಮೂವರು ದಂಪತಿಗಳು, ಒಬ್ಬರು ಮಂಗಳಮುಖಿ ಹಾಗೂ ಅಪ್ಪ-ಮಗಳ ಜಯ ಸಾಧಿಸಿರುವುದು ಈ ಬಾರಿಯ ವಿಶೇಷಗಳಲ್ಲಿ ಒಂದಾಗಿದೆ.

ಬ್ಯಾಗಡದೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಾರಾಯಣಸ್ವಾಮಿ ಹಾಗೂ ಭಾವನಾ ದಾಸ್‌, ಕರ್ಪೂರು ಗ್ರಾಪಂನಲ್ಲಿ ಕೆ. ರಾಮು ಮತ್ತು ಜ್ಯೋತಿಲಕ್ಷ್ಮೇ, ಹಾರಗದ್ದೆಯಲ್ಲಿ ರಮೇಶ್‌ ಹಾಗೂ ಗೀತಾ ದಂಪತಿ ಜಯ ಸಾಧಿಸಿದ್ದಾರೆ. ಹಾರಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ತಂದೆ ವೆಂಕಟೇಶ್‌ ಹಾಗೂ ಸ್ನಾತಕೋತ್ತರ ಪದವೀಧರೆಯಾದ ಅವರ ಮಗಳು ಮಹಾಲಕ್ಷ್ಮಿಗೆ ಜಯ ಒಲಿದಿದೆ.

ಬೆಂಗ್ಳೂರು ಏರ್ಪೋರ್ಟಲ್ಲಿ ‘ಕ್ಯಾಟ್‌-3 ಬಿ’ ವ್ಯವಸ್ಥೆ

ದೊಮ್ಮಸಂದ್ರದ 13ನೇ ವಾರ್ಡ್‌ನಲ್ಲಿ ಮಂಗಳಮುಖಿ ಆರತಿ ಜವರೇಗೌಡ ಗೆಲುವಿನ ನಗೆ ಬೀರಿದ್ದಾರೆ. ಇಂಡ್ಲವಾಡಿ ಪಂಚಾಯ್ತಿಯ ಲೋಕೇಶ್‌ ಹಾಗೂ ಮಂಟಪ ಪಂಚಾಯ್ತಿಯ ಚೆಲುವರಾಜು ಕೇವಲ ಒಂದು ಮತದಿಂದ ಜಯ ತಮ್ಮದಾಗಿಸಿಕೊಂಡಿದ್ದಾರೆ.

ಬೆಂ.ನಗರ ಗ್ರಾಪಂ ಫಲಿತಾಂಶ ಪ್ರಕಟ

ಬೆಂಗಳೂರು ನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಪಂಚಾಯಿತಿ ಚುನಾವಣೆಯ ಸಂಪೂರ್ಣ ಫಲಿತಾಂಶ ಪ್ರಕಟಗೊಂಡಿದೆ. ಬೆಂಗಳೂರು ಉತ್ತರ, ಯಲಹಂಕ, ಬೆಂಗಳೂರು ದಕ್ಷಿಣ, ಪೂರ್ವ ಮತ್ತು ಆನೇಕಲ್‌ ತಾಲೂಕಿನ 79 ಗ್ರಾ.ಪಂ.ಗಳ 1,907 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇದರಲ್ಲಿ 193 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದೆ. 22 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಉಳಿದ 1,692 ಗ್ರಾಪಂಗಳಲ್ಲಿ ಮತದಾನದ ಮೂಲಕ ಆಯ್ಕೆಯಾಗಿದ್ದಾರೆ.

ಒಟ್ಟಾರೆ 1,885 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪೈಕಿ ಪರಿಶಿಷ್ಟಜಾತಿಯ 455, ಪರಿಶಿಷ್ಟಪಂಗಡದ 93, ಅಲ್ಪಸಂಖ್ಯಾತ ಹಿಂದುಳಿದ ವರ್ಗದ 386 ಹಾಗೂ ಸಾಮಾನ್ಯ ವರ್ಗದಡಿ 951 ಮಂದಿ ಜಯಗಳಿಸಿದ್ದಾರೆ.