ಪ್ರತಿ ಗ್ರಾಪಂನಲ್ಲಿ ಕೃಷಿ ಪತ್ತಿನ ಸಹ​ಕಾರ ಸಂಘ ಪ್ರಾರಂಭಿಸುವ ಗುರಿ : ಸಚಿವ ​ರಾ​ಜಣ್ಣ

ಸಹಕಾರಿ ಆಂದೋಲನವನ್ನು ಸರ್ವವ್ಯಾಪಿಯಾಗಿ ಮಾಡುವ ಉದ್ದೇಶದಿಂದ ಬರುವ ಡಿಸೆಂಬರೊಳಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

Farmers Co-operative Society in gramapanchayath level says ks rajanna rav

ಸಾಗರ (ಆ.7) :  ಸಹಕಾರಿ ಆಂದೋಲನವನ್ನು ಸರ್ವವ್ಯಾಪಿಯಾಗಿ ಮಾಡುವ ಉದ್ದೇಶದಿಂದ ಬರುವ ಡಿಸೆಂಬರೊಳಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ಕೃಷಿ ಪತ್ತಿನ ಸಹಕಾರ ಸಂಘವನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ಇಲ್ಲಿನ ಪ್ರತಿಷ್ಠಿತ ಅಡಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಥೆ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರ ಕೆಲವೇ ಜನರ ಒಡನಾಟವಿರುವ ಆಂದೋಲನ ಎನ್ನುವ ಭಾವನೆ ಇದೆ. ಇದನ್ನು ಹೋಗಲಾಡಿಸಿ ಎಲ್ಲರನ್ನು ಒಳಗೊಳ್ಳುವ ಆಂದೋಲನ ಆಗಬೇಕು ಎನ್ನುವ ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಹಕಾರಿ ಸಂಸ್ಥೆಯನ್ನು ಪ್ರಾರಂಭಿಸಿ ರೈತರಿಗೆ ಬೇಕಾದ ಸೌಲಭ್ಯ ಒದಗಿಸಲಾಗುವುದು ಎಂದರು.

ರೈತರ ಅನುಕೂಲಕ್ಕೆ ತಕ್ಕಂತೆ ಗೋಹತ್ಯೆ ನಿಷೇಧ ಕಾಯ್ದೆಗೆ ಚಿಂತನೆ: ಸಚಿವ ರಾಜಣ್ಣ

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇರಬಾರದು. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಪಕ್ಷಾತೀತವಾಗಿ ಇರಬೇಕು. ಹಕ್ಕು ಚಲಾಯಿಸುವುದರ ಜೊತೆಗೆ ಕರ್ತವ್ಯವನ್ನು ಪಾಲನೆ ಮಾಡಬೇಕು. ಸಹಕಾರಿ ಸಂಸ್ಥೆಗಳು ಠೇವಣಿಯನ್ನು ಜಾಸ್ತಿ ಮಾಡಿಕೊಂಡು ಬೇರೆಡೆಯಿಂದ ಸಾಲ ತರುವುದನ್ನು ಕಡಿಮೆ ಮಾಡಿಕೊಳ್ಳಬೇಕು. ಆಗ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಬಹುದು. ಅನಗತ್ಯ ಖರ್ಚನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭ. ಆದರೆ, ಪ್ರಾರಂಭಿಸಿದ ಉದ್ದೇಶ ಸಾಕಾರಗೊಳಿಸುವುದು, ಸಂಸ್ಥೆಯನ್ನು ಉಳಿಸಿ ಬೆಳೆಸುವುದು ಸವಾಲಿನ ಕೆಲಸ. ಆದರೆ, ಸದರಿ ಸಂಸ್ಥೆ ಜನರ ನಿರೇಕ್ಷೆಗೆ ತಕ್ಕಂತೆ ಕೆಲಸ ಮಾಡಿರುವುದು ಅಭಿನಂದನೀಯ. ಇದರಲ್ಲಿ ನೌಕರರ ಸೇವೆಯೂ ಸ್ಮರಣೀಯ. ಅಡಕೆ ಬೆಳೆಗಾರರೆಲ್ಲ ಸ್ಥಿತಿವಂತರು ಎನ್ನುವ ಭಾವನೆ ಇದೆ. ಆದರೆ, ನಿಜಸ್ಥಿತಿ ಹಾಗಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಉತ್ಸಾದನೆಗೆ ಬೇಕಾದ ವಸ್ತುಗಳ ದರ ಹೆಚ್ಚುತ್ತಿದೆ. ಆದರೆ, ಬೆಳೆಯ ಬೆಲೆ ಕುಸಿಯುತ್ತಿದೆ. ರೈತರು ಭವಿಷ್ಯವನ್ನು ಆಲೋಚಿಸದೆ ಅಡಕೆ ಬೆಳೆ ವಿಸ್ತರಣೆ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಬೆಳೆ ನಿಯಂತ್ರಣ ಮಾಡಲಾಗದ ಸಂದಿಗ್ದ ಸ್ಥಿತಿ ಇದೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಕೆ.ಎಂ.ಸೂರ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಚಿನ್ನದ ಹೆಜ್ಜೆ ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು. ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಂಸ್ಥೆ ನೂತನ ಆಡಳಿತ ಕಚೇರಿಯನ್ನು ಲೋಕಾರ್ಪಣೆಗೊಳಿಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸುವರ್ಣ ಮಹೋತ್ಸವ ನೆನಪಿನ ಕೊಡುಗೆಯನ್ನು ವಿತರಿಸಿದರು.

ಮಾಜಿ ಶಾಸಕ ಬಿ.ಸ್ವಾಮಿರಾವ್‌, ಪ್ರಮುಖರಾದ ಷಡಾಕ್ಷರಿ ಎಚ್‌.ಎಲ್‌., ಕಿಶೋರ್‌ ಕುಮಾರ್‌ ಕೊಡಗಿ, ಎಚ್‌.ಎಸ್‌.ಮಂಜಪ್ಪ, ಆರ್‌.ಎಂ.ಮಂಜುನಾಥ ಗೌಡ, ಬಿ.ಆರ್‌.ಜಯಂತ್‌, ಹರನಾಥರಾವ್‌, ವ.ಶಂ.ರಾಮಚಂದ್ರ ಭಟ್‌, ಮಧುಕರ ಹೆಗಡೆ, ಕೆ.ಬಸವರಾಜ್‌, ಎಂ.ವಿ.ಮೋಹನ್‌, ಜಿ.ವಾಸುದೇವ, ಮಂಜುನಾಥ ಬಿ., ರವಿಕುಮಾರ್‌, ಮಹೇಶ್ವರಪ್ಪ ಇನ್ನಿತರರು ಹಾಜರಿದ್ದರು. ಶ್ರೀರಂಜಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿ.ಶಂಕರ್‌ ರೈತಗೀತೆ ಹಾಡಿದರು. ಎ.ಒ.ರಾಮಚಂದ್ರ ಸ್ವಾಗತಿಸಿದರು. ಲಂಬೋದರ್‌ ವಂದಿಸಿದರು. ಮಂಜಪ್ಪ ಮತ್ತು ಡಾ.ವಸುಮತಿ ಗೌಡ ನಿರೂಪಿಸಿದರು.

‘ಸಹಕಾರ ಸಂಸ್ಥೆಗಳು ಬೆಳೆಗಾರರಿಗೆ ಬೆನ್ನೆಲುಬಾಗಲಿ​’

ಸುವರ್ಣ ಮಹೋತ್ಸವ ಕೂಪನ್‌ ಬಿಡುಗಡೆ ಮಾಡಿ ವಿತರಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮಲೆನಾಡಿನ ಕಲ್ಪವೃಕ್ಷ ಆಗಿರುವ ಅಡಕೆ ಜಿಲ್ಲೆಯ ಸಾಂಸ್ಕೃತಿಕ ಹೆಗ್ಗರುತಾಗಿದೆ. ಜಿಲ್ಲೆಯ ಆರ್ಥಿಕತೆಯ ಜೀವನಾಡಿಯಾಗಿದೆ. ಆದರೆ ಇಲ್ಲಿನ ಅಡಕೆ ಬೆಳೆಗಾರರು ಅಡಕೆ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಲವು ರೋಗಬಾಧೆಯಿಂದ ನಲುಗಿ ಹೋಗಿದ್ದಾರೆ. ಬೆಲೆಗಳ ಏರಿಳಿತಗಳಿಂದ ಕಂಗಾಲಾಗುತ್ತಾರೆ. ಇಂತಹ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳು ಬೆಳೆಗಾರರ ಬೆನ್ನೆಲುಬಾಗಿ ನಿಲ್ಲುತ್ತವೆ ಎಂದರು.

ಅಂತರ ರಾಷ್ಟ್ರೀಯ ನೀತಿಯ ಕಾರಣದಿಂದ ಬೇರೆ ದೇಶಗಳಿಂದ ಅಡಕೆಯನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯ. ಅದಕ್ಕಾಗಿ ಇಲ್ಲಿನ ಅಡಕೆ ಬೆಳೆಗಾರರ ಆತಂಕಪಡುವ ಅಗತ್ಯವಿಲ್ಲ. ಹಸಿ ಅಡಕೆ ಆಮದು ಮಾಡಿಕೊಳ್ಳುವ ಒಪ್ಪಂದವಾಗಿದೆ ಹಾಗೂ ಹಡಗಿನ ಮೂಲಕ ಅಡಕೆ ಬರಬೇಕಾಗಿರುವುದರಿಂದ ಅನೇಕ ಸಮಸ್ಯೆಗಳಿವೆ. ಅಲ್ಲದೇ, ಅಡಕೆ ಆಮದಿನ ಮೇಲೆ ಹೆಚ್ಚಿನ ಸುಂಕವನ್ನು ಹಾಕಿರುವುದರಿಂದ ನಮ್ಮ ದೇಶದ ಅಡಕೆ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ ಎಂದರು.

ಪೆನ್‌ ಡ್ರೈವ್‌ ಹೆಸರಿನಲ್ಲಿ ಕುಮಾರಸ್ವಾಮಿ ದಂಧೆ: ಸಚಿವ ಕೆ.ಎನ್‌. ರಾಜಣ್ಣ

ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ಪರವಾಗಿದೆ. ಅಡಕೆ ಕ್ಯಾನ್ಸರ್‌ಕಾರಕ ಎನ್ನುವ ವರದಿ ಬೆಳೆಗಾರ ಸಮೂಹಕ್ಕೆ ಆತಂಕ ತಂದಿತ್ತು. ಆದರೆ, ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಅಡಕೆ ಟಾಸ್‌್ಕಫೋರ್ಸ್‌ ಸ್ಥಾಪಿಸಿ, ಅದರ ಮೂಲಕ ಅಡಕೆಯನ್ನು ಸಂಶೋಧನೆಗೆ ಒಳಪಡಿಸಿದಾಗ ಅಡಕೆ ಕ್ಯಾನ್ಸರ್‌ಕಾರಕವಲ್ಲ, ಬದಲಾಗಿ ಕ್ಯಾನ್ಸರ್‌ ನಿವಾರಣೆಗೆ ಪೂರಕ ಎನ್ನುವ ವರದಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ಅಡಕೆ ಮೇಲಿನ ಅಪವಾದವನ್ನು ತೆಗೆದು ಹಾಕುವ ಕೆಲಸ ಮಾಡಲಾಗುತ್ತದೆ ಎಂದು ವಿವರಿಸಿದರಲ್ಲದೆ ಅಡಕೆ ಸಿಪ್ಪೆ, ಅಡಕೆ ಹಾಳೆಯನ್ನು ಸದ್ಭಳಕೆ ಮಾಡಿಕೊಳ್ಳುವತ್ತ ಗಮನ ಹರಿಸಲಾಗುತ್ತಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios