ಕಾಲುವೆಯಲ್ಲಿ ನೀರು ಹರಿಸುವಂತೆ ಬಳ್ಳಾರಿ ಬಂದ್‌ಗೆ ಕರೆ: ಬಹುತೇಕ ಸಂಘಟನೆಯ ಬೆಂಬಲ!
ನವೆಂಬರ್ ಮೂವತ್ತರವರೆಗೂ ತುಂಗಭದ್ರಾ ಜಲಾಶಯದ ನೀರನ್ನು ಹೆಚ್ಎಲ್ಸಿ ಕಾಲೂವೆ ಮೂಲಕ ಹರಿಸಬೇಕೆಂದು ಆಗ್ರಹಿಸಿ ಬಳ್ಳಾರಿಯನ್ನು ಇಂದು ಬಂದ್ ( ನಾಳೆ ನವೆಂಬರ್ 10ರಂದು ) ಮಾಡಲು ರೈತ ಸಂಘಟನೆಗಳು ಕರೆ ನೀಡಿವೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಬಳ್ಳಾರಿ
ಬಳ್ಳಾರಿ (ನ.09): ಕಾಲೂವೆಯಲ್ಲಿ ನೀರು ಹರಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾಯ್ತು. ಬೈಕ್ ರ್ಯಾಲಿ ಮಾಡಿದ್ದಾಯ್ತು. ತುಂಗಭದ್ರಾ ಆಡಳಿತ ಕಚೇರಿ ಮುತ್ತಿಗೆ ಹಾಕಿದ್ದು, ಆಯ್ತು. ಇದೀಗ ನವೆಂಬರ್ ಮೂವತ್ತರವರೆಗೂ ತುಂಗಭದ್ರಾ ಜಲಾಶಯದ ನೀರನ್ನು ಹೆಚ್ಎಲ್ಸಿ ಕಾಲೂವೆ ಮೂಲಕ ಹರಿಸಬೇಕೆಂದು ಆಗ್ರಹಿಸಿ ಬಳ್ಳಾರಿಯನ್ನು ಇಂದು ಬಂದ್ ( ನಾಳೆ ನವೆಂಬರ್ 10ರಂದು ) ಮಾಡಲು ರೈತ ಸಂಘಟನೆಗಳು ಕರೆ ನೀಡಿವೆ.
ಕೊಟ್ಟ ಮಾತಿನಂತೆ ನವೆಂಬರ್ ಅಂತ್ಯದವರೆಗೂ ನೀರು ಕೊಡಿ: ಮುಂಗಾರು ಕೈಕೊಟ್ಟ ಹಿನ್ನೆಲೆ ಇದೀಗ ತುಂಗಭಧ್ರ ಜಲಾಶಯ ನೀರನ್ನೇ ನಂಬಿರೋ ಬಳ್ಳಾರಿ ರೈತರಲ್ಲಿಗ ಆತಂಕ.. ಈ ತಿಂಗಳ ಅಂತ್ಯವದರೆಗೂ ನೀರು ಬಿಡದೇ ಇದ್ರೆ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿ ಗ್ಯಾರಂಟಿ. ಹೌದು, ಬೆಳೆದು ನಿಂತ ಬೆಳೆಯನ್ನು ಉಳಿಸಿಕೊಳ್ಳಲು ಬಳ್ಳಾರಿಯ ಅನ್ನದಾತ ಹರಸಾಹಸ ಪಡುತ್ತಿದ್ದಾನೆ. ಟ್ಯಾಂಕರ್ ನೀರು, ಬೋರ್ವೆಲ್ ನೀರು, ಏನೇ ಹಾಕಿದ್ರೂ ಸಮರ್ಪಕ ನೀರು ಸಿಗದೇ ಬೆಳೆ ಒಣಗುವ ಭೀತಿ ಎದುರಾಗಿದೆ.
ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು
ಹೀಗಾಗಿ ಮುಂಗಾರು ಆರಂಭದಲ್ಲಿ ತುಂಗಭದ್ರ ಸಲಹಾ ಸಮಿತಿಯಲ್ಲಿ ನಿರ್ಣಾಯ ಮಾಡಿದಂತೆ ಹೆಚ್ಎಲ್ಸಿ ಕಾಲೂವೆಗೆ ನವೆಂಬರ್ ಮೂವತ್ತರವರೆಗೂ ನೀರು ಹರಿಸಿ ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಆದ್ರೇ, ನೂರು ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿ ಈ ಬಾರಿ ಕೇವಲ 70ರಷ್ಟು ಮಾತ್ರ ತುಂಬಿದ್ದು, ಸದ್ಯ ಜಲಾಶಯದಲ್ಲಿ 26 ಟಿಎಂಸಿ ನೀರಿದೆ. ನವೆಂಬರ್ ಅಂತ್ಯದವರೆಗೂ ನೀರು ನೀಡೋದು ಅಸಾಧ್ಯ ಎಂದು ನವೆಂಬರ್ 10ಕ್ಕೆ ನೀರು ನಿಲ್ಲಿಸಲಾಗುತ್ತಿದೆ. ನೀರು ನಿಲ್ಲಿಸಿದ್ರೆ, ಮೆಣಸಿನಕಾಯಿ, ಹತ್ತಿ, ಭತ್ತ ಸೇರಿದಂತೆ ಇನ್ನಿತರೆ ಬೆಳೆ ನಷ್ಟವಾಗಲಿದೆ ಹೀಗಾಗಿ ನೀರು ಬಿಡಿ ಎಂದು ರೈತರು ಅಂಗಲಾಚುತ್ತಿದ್ದಾರೆ.
ಬಳ್ಳಾರಿ ಬಂದ್ ಗೆ ಕರೆ ನೀಡಿರೋ ರೈತ ಸಂಘಟನೆಗಳು: ಇನ್ನೂ ಈಗಾಗಲೇ ಕಳೆದೊಂದು ವಾರದಿಂದಲೂ ನೀರಿಗಾಗಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ, ಬೈಕ್ ರಾಲಿ, ತುಂಗಭದ್ರ ಆಡಳಿತ ಮಂಡಳಿ ಕಚೇರಿ ಮುತ್ತಿಗೆ,ಹಳ್ಳಿಗಳಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆ ಮಾಡಲಾಗಿದೆ. ಕೊನೆಯದಾಗಿ ಇದೀಗ ನೀರಿಗಾಗಿ ಬಳ್ಳಾರಿ ಬಂದ್ ಮಾಡೋ ಮೂಲಕ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲದೇ ಹೊಲಗಳಿಗೆ ನೀರಿಲ್ಲವಾದ್ರೇ ನಮಗೇನು ಕೆಲಸವೇ ಇಲ್ಲ. ಬಳ್ಳಾರಿ ಬಂದ್ ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಟೆಂಟ್ ಹಾಕಿಕೊಂಡು ನಿರಂತರ ಹೋರಾಟ ಮಾಡೋದಾಗಿ ಹೇಳುತ್ತಿದ್ದಾರೆ.
ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್
ಕಾಲೂವೆಯಿಂದ ಇಂದು ನೀರು ಬಂದ್ ಆಗಲಿದೆ: ಇನ್ನೂ ಸದ್ಯ ಜಲಾಶಯದಲ್ಲಿರೋ ನೀರು ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಬೇಸಿಗೆಯವರೆಗೂ ಕುಡಿಯುವ ನೀರಗೆ ಹೊಂದಿಸಬೇಕು ಜೊತೆಗೆ ಆಂಧ್ರದ ಕೋಟಾದಡಿ ಅವರಿಗೂ ನೀರು ಬೀಡೋ ಅನಿವಾರ್ಯತೆ ಇದೆ. ಹೀಗಾಗಿ ಇದನ್ನು ತುಂಗಭದ್ರ ಆಡಳಿತ ಮಂಡಳಿ ಮತ್ತು ಸರ್ಕಾರ ಯಾವ ರೀತಿಯಲ್ಲಿ ನಿಭಾಯಿಸುತ್ತದೆಯೋ ಕಾದು ನೋಡಬೇಕಿದೆ.