ಬೆಂಗಳೂರು, (ಸೆ.23): ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ವಿಧೇಯಕಗಳನ್ನು ವಿರೋಧಿಸಿ, ರಾಜ್ಯದ ವಿವಿಧ ರೈತಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಗಳು ಇದೇ ಸೆ.28ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. 

"

ಊಬರ್ ಚಾಲಕರ ಸಂಘ, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆ ಸೇರಿದಂತೆ ಒಟ್ಟ 32 ಸಂಘಟನೆಗಳು ಈ ಬಂದ್‌ಗೆ ಬೆಂಬಲ ಸೂಚಿಸಿವೆ.

ಈ ಕುರಿತಂತೆ ಇಂದು (ಬುಧವಾರ) ಸುದ್ದಿಗಾರಿಗೆ ಮಾಡಿದ ರೈತ ಸಂಘದ ಅಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್, ಸೆ.25ರಂದು ಕರ್ನಾಟಕ ಬಂದ್ ನಡೆಸುವ ಬದಲಾಗಿ ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ನಡೆಸಲಾಗುತ್ತಿದೆ. ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಕರ್ನಾಟಕ ಬಂದ್ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

APMC ಕಾಯ್ದೆಯಿಂದ ರೈತರಿಗೆ ಅನುಕೂಲದ ಬಗ್ಗೆ ವಿವರಿಸಿದ ಸಚಿವ ಸೋಮಶೇಖರ್

ಎಪಿಎಪಿ ತಿದ್ದುಪಡಿ ಕಾಯ್ದೆ ರೈತರಿಗೆ ಪೂರಕವಾದಂತ ಕಾಯ್ದೆ ಅಲ್ಲ. ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶ ಮಾಡಿಕೊಡುವಂತ ಕಾಯ್ದೆಯಾಗಿದೆ. ಇವರು ಕಾರ್ಪೋರೇಟ್ ಕಂಪನಿಗಳ ಪರವೇ ಹೊರತು, ಜನಸಾಮಾನ್ಯ ರೈತರ ಪರವಾದವರಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಭೂಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ವಿರೋಧಿ ಕಳೆದ ಎರಡ್ಮೂರು ದಿನಗಳಿಂದ ರೈತ ಪರ ಸಂಘಟನೆಗಳು ಬೆಂಗಳುರು ಸೇರಿದಂತೆ ರಾಜ್ಯದ ವಿವಿದೆಡೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿವೆ.

ಈ ಮೊದಲ ಸೆ.25 ಕರ್ನಾಟಕ ಬಂದ್ ಮಾಡುವುದಾಗಿ ರೈತ ಸಂಘಟನೆಗಳು ಹೇಳಿದ್ದವು. ಆದ್ರೆ, ಇದೀಗ 25ರ ಬದಲಾಗಿ 28ಕ್ಕೆ ಬಮದ್‌ಗೆ ಕರೆ ನೀಡಿವೆ.