ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರ್ ಗ್ರಾಮದ ರೈತನಿಗೆ ಗ್ರಾಪಂ ಪಿಡಿಓ, ಅಧ್ಯಕ್ಷರು ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ರೈತ ನಾಗೇಂದ್ರಪ್ಪ ಪೊಲೀಸ್ ಪಾಟೀಲ ಜೀವ ಬೆದರಿಕೆ‌ ಆರೋಪ ಮಾಡಿರೋ ರೈತ. ರೈತನ ಪರವಾಗಿ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕಾಧಿಕಾರಿಗೆ ಪತ್ರ ಬರೆದ ಕರ್ನಾಟಕ ರಾಜ್ಯ ರೈತ ಸಂಘಟನೆಯ ಸದಸ್ಯರು.

ಬೀದರ್ (ಆ.25) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರ್ ಗ್ರಾಮದ ರೈತನಿಗೆ ಗ್ರಾಪಂ ಪಿಡಿಓ, ಅಧ್ಯಕ್ಷರು ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ರೈತ ನಾಗೇಂದ್ರಪ್ಪ ಪೊಲೀಸ್ ಪಾಟೀಲ ಜೀವ ಬೆದರಿಕೆ‌ ಆರೋಪ ಮಾಡಿರೋ ರೈತ. ರೈತನ ಪರವಾಗಿ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಲೂಕಾಧಿಕಾರಿಗೆ ಪತ್ರ ಬರೆದ ಕರ್ನಾಟಕ ರಾಜ್ಯ ರೈತ ಸಂಘಟನೆಯ ಸದಸ್ಯರು.

ಕೆಲ ದಿನಗಳ ಹಿಂದೆ ನೀರು ಬಿಡುವಂತೆ ಆಗ್ರಹಿಸಿ ರೈತನ ಜಮೀನಿನಲ್ಲಿ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು. ಪ್ರತಿಭಟನೆ ಬಳಿಕ ಧಮ್ಕಿ ಹಾಕಿ ನೀರು ಬಿಡಿಸಿದ್ದಾರೆಂದು ಆರೋಪಿಸರುವ ರೈತ ನಾಗೇಂದ್ರಪ್ಪ. 40 ವರ್ಷಗಳಿಂದ ಯಾವುದೇ ಪರಿಹಾರ ನೀಡದೇ ನಿರಂತರ ನೀರು ಬಿಡಿಸುತ್ತಿದ್ದಾರೆ. ಪರಿಹಾರವಿಲ್ಲದೆ ನೀರು ಬಿಡಲು ಒಪ್ಪದ್ದಕ್ಕೆ ಜೀವ ಬೆದರಿಕೆ. ಗ್ರಾಮದ ಅಧ್ಯಕ್ಷ, ಪಿಡಿಓ ಸೇರಿ ಕೆಲ ಗ್ರಾಮಸ್ಥರು ಜೀವ ಬೆದರಿಕೆ ಹಾಕುತ್ತಿದ್ದಾರೆ ಆರೋಪಿಸಿರುವ ರೈತ. ರೈತನ ಬೆಂಬಲಕ್ಕೆ ನಿಂತ ಕರ್ನಾಟಕ ರಾಜ್ಯ ರೈತ ಸಂಘ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ತಾಲೂಕಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿರುವ ರೈತ ಸಂಘದ ಸದಸ್ಯರು.

ಚಂದ್ರಯಾನ ಟೀಕಿಸಿದ ಪ್ರಕಾಶ್‌ ರೈ ದೇಶ ಬಿಟ್ಟು ಹೋಗಲಿ: ಸಚಿವೆ ಶೋಭಾ ಕರಂದ್ಲಾಜೆ

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ .5 ಲಕ್ಷ

ಬೀದರ್: ತಾಲೂಕಿನ ಜನವಾಡ ಹೋಬಳಿಯ ರಾಜನಾಳ ಗ್ರಾಮದಲ್ಲಿ ಜೂ. 5ರಂದು ಹೊಲದಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ರಾಮಣ್ಣ ಹೊಲೆಪ್ಪ ಹಾಸಗೊಂಡ ಕುಟುಂಬವನ್ನು ಭೇಟಿ ಮಾಡಿದ ಪೌರಾಡಳಿತ ಸಚಿವ ರಹೀಮ್‌ಖಾನ್‌ 5ಲಕ್ಷ ರು.ಗಳ ಪರಿಹಾರ ಧನ ಪತ್ನಿಯ ಖಾತೆಗೆ ಜಮೆ ಆಗುವಂತೆ ಮಾಡಿದ್ದಾರೆ.

ರಾಮಣ್ಣ ಇವರ 2.2 ಎಕರೆ ಜಮೀನಿನಲ್ಲಿ ಬೆಳೆಯಲಾದ ಕೃಷಿ ಬೆಳೆಗಳು ಮಳೆಯಿಲ್ಲದೆ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪಿಕೆಪಿಎಸ್‌ ಅಲಿಯಂಬರ್‌ನಲ್ಲಿ 30 ಸಾವಿರ ರು. ಮತ್ತು ಎಸ್‌ಬಿಐ ಬೀದರ್‌ದಲ್ಲಿ 1.24 ಲಕ್ಷ ರು. ಬೆಳೆ ಸಾಲ ಮಾಡಿಕೊಂಡಿದ್ದರು.

ಹಳದಿ ರೋಗಕ್ಕೆ ಊರು ಬಿಟ್ಟ ಮಲೆನಾಡ ರೈತರು; ಗ್ರಾಮಗಳಲ್ಲೀಗ ಸ್ಮಶಾನ ಮೌನ!

ಪರಿಹಾರ ಧನ ತಿಳುವಳಿ ಪತ್ರವನ್ನು ದಿ. ರಾಮಣ್ಣ ಅವರ ಪತ್ನಿ ಸಿದ್ದಮ್ಮ ಅವರಿಗೆ ಸಚಿವರು ನೀಡಿದರು. ಈ ಸಂದರ್ಭದಲ್ಲಿ ಬೀದರ್‌ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.