Asianet Suvarna News Asianet Suvarna News

3rd Panchamasali Peetha ಆರಂಭಕ್ಕೆ ರೈತ ಸಮಾವೇಶ: ವಚನಾನಂದ ಶ್ರೀ

*   ಫೆ.13ರಂದು ಜಮಖಂಡಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಆರಂಭ
*  ನಾಡಿನ ಶ್ರೇಷ್ಠ ಸಂತರ ದಿವ್ಯ ಸಾನ್ನಿಧ್ಯ
*  ಜಮಖಂಡಿ ಪೀಠಾಧ್ಯಕ್ಷರಾಗಿ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ
 

Farmer Conference For 3rd Panchamasali Peetha Begin Says Vachananand Swamiji grg
Author
Bengaluru, First Published Feb 11, 2022, 5:51 AM IST | Last Updated Feb 11, 2022, 5:51 AM IST

ಬೆಂಗಳೂರು(ಫೆ.11):  ರಾಜ್ಯದ(Karnataka) ಪಂಚಮಸಾಲಿ ಸಮುದಾಯದ(Panchamasali Community) ಸಂಘಟನೆಯ ನೊಗಕ್ಕೆ ಹೆಗಲಾಗಲು ಜಮಖಂಡಿಯ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ(Veerashaiva Lingayata Panchamasaali Jagadguru Peetha) ಫೆ.13ರಂದು ಉದಯವಾಗಲಿದೆ. ಇದೇ ವೇಳೆ ಕೃಷಿ ಹಿನ್ನೆಲೆಯುಳ್ಳ ಸಮುದಾಯವನ್ನು ಒಗ್ಗೂಡಿಸಲು ವಿರಾಟ್‌ ರೈತ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಮೂಲೆ-ಮೂಲೆಯಿಂದ ಲಕ್ಷಾಂತರ ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದು ಹರ ಕ್ಷೇತ್ರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಅಧ್ಯಕ್ಷ ವಚನಾನಂದ ಸ್ವಾಮೀಜಿ(Vachananand Swamiji) ಹೇಳಿದ್ದಾರೆ.

ಅಂದು ಜಮಖಂಡಿ ಪೀಠದ ಪೀಠಾಧ್ಯಕ್ಷರಾಗಿ ಡಾ.ಮಹಾದೇಶ ಶಿವಾಚಾರ್ಯ ಸ್ವಾಮೀಜಿ(Dr Mahadesh Shivacharya Swamiji) ಪೀಠಾರೋಹಣ ಮಾಡಲಿದ್ದಾರೆ. ಈ ಕುರಿತು ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಚನಾನಂದ ಸ್ವಾಮೀಜಿ, ಪಂಚಮಸಾಲಿಗಳ ಮೂಲ ಪೀಠದ ಪೀಠಾಧ್ಯಕ್ಷರಾದ ತಾವು ಸೇರಿದಂತೆ ನಾಡಿನ ಶ್ರೇಷ್ಠ ಸಂತ-ಮಹಾಂತರ ದಿವ್ಯ ಸಾನ್ನಿಧ್ಯದಲ್ಲಿ ನೂತನ ಪೀಠ ಉದಯವಾಗುವ ಮೂಲಕ ಐತಿಹಾಸಿಕ ಮೈಲುಗಲ್ಲು ಸ್ಥಾಪಿತವಾಗಲಿದೆ ಎಂದರು.

Reservation ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ವೀರಶೈವ ಲಿಂಗಾಯತ ಸಮುದಾಯದ ಪಂಚಮಸಾಲಿ ಹಾಗೂ ಎಲ್ಲಾ ಒಳಪಂಗಡಗಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ 2-ಎ ಮೀಸಲಾತಿ(2A Reservation) ಹಾಗೂ ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು. ಸಮುದಾಯದ ಮೂಲ ಉದ್ಯೋಗವಾದ ಕೃಷಿಯಲ್ಲಿ ಆದಾಯ ಕೇಂದ್ರಿತ ಕೃಷಿ ವ್ಯವಸ್ಥೆಗೆ ರೈತರನ್ನು ಸಿದ್ಧಗೊಳಿಸುವುದು ನೂತನ ಪೀಠದ ಪ್ರಮುಖ ಪ್ರಾಧಾನ್ಯತೆ ಎಂದು ಹೇಳಿದರು.

ಪಂಚಮಸಾಲಿ ಸಮುದಾಯವನ್ನು ಸಂಘಟಿಸಬೇಕು ಹಾಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಮುದಾಯಕ್ಕೆ ಸಿಗಬೇಕಾದ ನ್ಯಾಯವನ್ನು ಒದಗಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠವನ್ನು 2008 ಫೆಬ್ರವರಿ 18ರಂದು ಸ್ಥಾಪಿಸಲಾಯಿತು. ಅಂದು ನಾಡಿನ ಪ್ರಮುಖ ಮಠಾಧೀಶರುಗಳು ಒಗ್ಗೂಡಿ ಈ ಸಮುದಾಯಕ್ಕೆ ಪೀಠದ ಅವಶ್ಯಕತೆಯನ್ನು ಸಾರಿ ಹೇಳಿದ್ದರು. ಇದಾದ ಒಂದೂವರೆ ದಶಕಗಳ ನಂತರ ಉತ್ತರ(North Karnataka) ಹೆಬ್ಬಾಗಿಲು ಎಂದೇ ಪ್ರಸಿದ್ಧಿಯಾಗಿರುವ ಬಾಗಲಕೋಟೆಯ ಜಮಖಂಡಿಯಲ್ಲಿ ಇನ್ನೊಂದು ಪೀಠದ ಉದಯವಾಗುತ್ತಿದೆ ಎಂದು ಘೋಷಿಸಿದರು.

ಅನ್ನ, ಅಕ್ಷರ, ಆರೋಗ್ಯದಂತಹ ತ್ರಿವಿಧ ದಾಸೋಹದ ಕಲ್ಪನೆಯಿಂದ ಕೃಷ್ಣೆಯ ತಟದಲ್ಲಿ ನೂರಾರು ಮಠಾಧೀಶರುಗಳ ನೇತೃತ್ವದಲ್ಲಿ, ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟ ಚಾರಿಟೇಬಲ್‌ ಟ್ರಸ್ಟ್‌ನ ಅಡಿಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಸ್ಥಾಪನೆಯಾಗಿದೆ. ಫೆ.13ರಂದು ನೂತನ ಜಗದ್ಗುರು ಪೀಠಾರೋಹಣ ಧರ್ಮಸಭೆ ಕಾರ್ಯಕ್ರಮ ನಡೆಯಲಿದ್ದು ವಿರಾಟ್‌ ರೈತ ಸಮಾವೇಶವನ್ನೂ(Virat Farmer Conference) ಆಯೋಜಿಸಲಾಗಿದೆ ಎಂದರು.

Vijayapura: ಹಿಜಾಬ್‌ ವಿವಾದ: ವಚನಾನಂದ ಶ್ರೀಗಳು ಹೇಳಿದ್ದಿಷ್ಟು

ಸಂಘಟನೆಯ ನೊಗಕ್ಕೆ ಮತ್ತೊಂದು ಹೆಗಲು:

ಪಂಚಮಸಾಲಿ ಸಮುದಾಯ ರಾಜ್ಯದ ವಿವಿಧ ಭಾಗಗಳಲ್ಲಿ ಹಂಚಿಕೊಂಡಿದೆ. ಈ ಸಮುದಾಯದ ಸಂಘಟನೆಗೆ ಕೇವಲ ಒಂದು ಪೀಠದ ವ್ಯಾಪ್ತಿ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದ ಸಮುದಾಯದ ಸಂಘಟನೆಗೆ ಈ ಜಮಖಂಡಿ ಪೀಠ ಸ್ಥಾಪನೆಯಾಗಿದೆ. ನಮ್ಮ ಸಂಘಟನೆಯ ನೊಗಕ್ಕೆ ಮತ್ತೊಂದು ಜೋಡೆತ್ತು ಸಿಕ್ಕಂತಾಗಿದೆ ಎಂದು ಹೇಳಿದರು.

ಇನ್ನಷ್ಟು ಪೀಠಗಳು ಉದಯವಾಗಲಿ

ನಮ್ಮ ಮೂಲ ಪೀಠದ ಜೊತೆಯಲ್ಲಿ ಹೆಜ್ಜೆ ಹಾಕುವಂತಹ ನೂತನ ಶಕ್ತಿ ಬೇಕಾಗಿತ್ತು. ಈ ನಿಟ್ಟಿನಲ್ಲಿ ಇನ್ನೊಂದು ಪೀಠ ಸ್ಥಾಪನೆಯಾಗಿದೆ. ಹರಿಹರ ಪೀಠ ಪಂಚಮಸಾಲಿಗಳ ಪಾಲಿಗೆ ಧರ್ಮಕ್ಷೇತ್ರವಾಗಿರಲಿದೆ. ನಾಡಿನ ಉದ್ದಗಲಕ್ಕೂ ಇನ್ನೂ ಕೆಲವು ಪೀಠಗಳು ಉದಯವಾಗಲಿ. ನಮ್ಮ ಪೀಠದ ಮೂಲತತ್ವಗಳನ್ನು ಪ್ರಚುರಪಡಿಸುವ ಎಲ್ಲಾ ಪೀಠಗಳಿಗೂ ನಮ್ಮ ಬೆಂಬಲ ಇರಲಿದೆ ಅಂತ ವಚನಾನಂದ ಸ್ವಾಮೀಜಿ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios