Asianet Suvarna News Asianet Suvarna News

ಕಾವೇರಿ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಹೇಳಿದ್ದ ಮಾತುಗಳು, ಈಗಲಾದರೂ ಅರ್ಥಮಾಡಿಕೊಳ್ಳುತ್ತಾ ಕರ್ನಾಟಕ?

ಕಾವೇರಿ ವಿಚಾರ ಬಂದಾಗ ಮೊದಲಿಗೆ ಚರ್ಚೆಯಾಗುವುದೇ ರಾಜಕೀಯ ಇಚ್ಛಾಶಕ್ತಿ. ಇನ್ನು ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ದಶಕಗಳ ಇತಿಹಾಸ ಈ ವಿವಾದಕ್ಕಿದೆ. ಕಾವೇರಿ ಬಗ್ಗೆ ಪ್ರಖ್ಯಾತ ಲೇಖಕ ಪೂರ್ಣಚಂದ್ರ ತೇಜಸ್ವಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದರು. ಈಗಲಾದರೂ ಕರ್ನಾಟಕ ಇದನ್ನು ಅರ್ಥಮಾಡಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
 

Famous Author poornachandra tejaswi on Cauvery Water dispute his Quotes on Water Issue san
Author
First Published Sep 26, 2023, 2:05 PM IST

ಬೆಂಗಳೂರು (ಸೆ.26): ಕಾವೇರಿ ವಿವಾದ ಇಂದು ನಿನ್ನೆಯದಲ್ಲ. ನದಿ ನೀರಿಗಾಗಿ ಕರ್ನಾಟಕ-ತಮಿಳುನಾಡು ರಾಜ್ಯಗಳಲ್ಲಿ ಹಾದಿಬೀದಿ ಜಗಳಗಳನ್ನೂ ಮಾಡಿಕೊಂಡಿದೆ. ಎರಡೂ ರಾಜ್ಯಗಳು ಬೆಂಕಿಯ ಕೆನ್ನಾಲಗೆಗೆ ಬಿದ್ದಿವೆ. ಪ್ರತಿಭಟನೆ ಹೆಸರಲ್ಲಿ ನಡೆದಿರುವ ಹಿಂಸಾಚಾರಗಳು ಲೆಕ್ಕಕ್ಕಿಲ್ಲ. ಇದನ್ನುಕಂಡು ಕಂಡು ಸುಪ್ರೀಂ ಕೋರ್ಟ್‌, ಕಾವೇರಿ ನದಿ ನೀರು ಪ್ರಾಧಿಕಾರ ರಚನೆ ಮಾಡಿದರೂ, ಅದರಿಂದ ಲಾಭವಾದಂತೆ ಕಾಣುತ್ತಿಲ್ಲ. ಪ್ರಾಧಿಕಾರ ರಚನೆ ಆದ ಬಳಿಕ ಇನ್ನು ಕಾವೇರಿ ಗಲಾಟೆ ಇರೋದಿಲ್ಲ ಅಂದುಕೊಂಡವರಿಗೆ, ಕಾವೇರಿ ಗಲಾಟೆ ಎನ್ನುವುದು ಮುಗಿಯದ ಯುದ್ಧ ಎನ್ನುವುದು ಈಗ ಅರ್ಥವಾಗಿದೆ. ಇದರ ಹಿನ್ನಲೆಯಲ್ಲಿ ಕಾವೇರಿಯ ಬಗ್ಗೆ ಕನ್ನಡದ ಪ್ರಸಿದ್ಧ ಲೇಖಕ ಹಾಗೂ ಪರಿಸರವಾದಿ ಪೂರ್ಣಚಂದ್ರ ತೇಜಸ್ವಿ ಹೇಳಿದ ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತದೆ.  ಪೂರ್ಣಚಂದ್ರ ತೇಜಸ್ವಿ ಅವರು ನಿಧನರಾಗಿ 16 ವರ್ಷಗಳಾಗಿವೆ. ಹಾಗಿದ್ದರೂ ಕಾವೇರಿ ವಿಚಾರದ ಬಗ್ಗೆ ಅವರು ಆಡಿರುವ ಮಾತುಗಳು ಇಂದಿಗೂ ಪ್ರಸ್ತುತ ಎನಿಸಿವೆ. 

ಕಾವೇರಿ ಯಾರದ್ದು? ಕರ್ನಾಟಕದ್ದೂ ತಮಿಳುನಾಡಿನದ್ದೂ? ತೇಜಸ್ವಿ ಹೇಳಿದ ಮಾತುಗಳು

'ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳು ಇರುತ್ತವೆ. ಅಲ್ಲಿನ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನ ಸಮುದಾಯದ್ದಾಗಿರುತ್ತದೆ. ಭೂಮಿಯ ಮೇಲಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ ಹಾಗೆಯೇ ಆ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರ ಆಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ'

ಹೋರಾಟಕ್ಕೆ ಯಾವ ರಾಜಕೀಯ ಪಕ್ಷಗಳು ಉತ್ತಮ? ತೇಜಸ್ವಿ ಮಾತುಗಳು

'ಪ್ರಾದೇಶಿಕ ಪಕ್ಷ ನಮ್ಮ ರಾಜಕೀಯ ಅನಿವಾರ್ಯತೆಯಾಗುವ ದಿನ ಹತ್ತಿರವಾಗುತ್ತಿದೆ. ಇದಕ್ಕೆ ಬರೇ ಕಾವೇರಿ ಒಂದೇ ಕಾರಣ ಅಲ್ಲ. ಜಗತ್ತಿನಾದ್ಯಂತ ದೊಡ್ಡ ದೊಡ್ಡ ರಾಷ್ಟ್ರಗಳು ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ಕುಸಿದು ಸಣ್ಣ ಸಣ್ಣ ರಾಷ್ಟ್ರಗಳಾಗಿ ಇಲ್ಲವೇ ಒಕ್ಕೂಟಗಳಾಗಿ ರೂಪುಗೊಳ್ಳುತ್ತಿವೆ. ಈಗಿನ ರೀತಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸಾಕಲು ಹಿಂದುಳಿದ ದೇಶಗಳಿಗೆ ಸಾಧ್ಯವೇ ಇಲ್ಲ'

ರಾಜೀನಾಮೆಗೆ ಆಗ್ರಹ ಸರಿಯಲ್ಲ ಎಂದಿದ್ರು ತೇಜಸ್ವಿ..

ಕಾವೇರಿ ನೀರಿನ ಬಗ್ಗೆ ಕರ್ನಾಟಕದ ಹಿತಾಸಕ್ತಿಗಳ ಬಗ್ಗೆ ಕಾಳಜಿ ತೋರಿಸುತ್ತಿರುವವರು ಶಾಸಕರ ರಾಜೀನಾಮೆಗೆ ಆಗ್ರಹ ಪಡಿಸುವುದಾಗಲಿ ಅವರು ಕೊಡುತ್ತೇನೆಂದು ಹೇಳುವುದಾಗಲಿ ಸರಿ ಎಂದು ನನಗೆ ಅನ್ನಿಸುತ್ತಿಲ್ಲ. ಶಾಸಕರೆಲ್ಲ ರಾಜೀನಾಮೆ ಕೊಟ್ಟು ಮೊನ್ನೆ ಮಾಡಿದ ಹಾಗೆ ಎಲ್ಲ ಪಕ್ಷಗಳು ಬಂದ್ ಗೆ ಕರೆಕೊಟ್ಟು ದೊಂಬಿ ಎಬ್ಬಿಸಿದರೆ ಕರ್ನಾಟಕವನ್ನು ಗಲಭೆ ಪೀಡಿತ ಪ್ರದೇಶ ಎಂದು ಘೋಷಿಸಿ ಒಬ್ಬ ಖದೀಮ ರಾಜ್ಯಪಾಲನನ್ನು ನೇಮಿಸಿ ಚುನಾವಣೆಯೇ ನಡೆಸದೆ ಕೇಂದ್ರ ಕರ್ನಾಟಕವನ್ನು ವರ್ಷಗಳವರೆಗೆ ಆಳಬಹುದು. ದೊಂಬಿ ಗಲಭೆಗಳಿಂದ ಕರ್ನಾಟಕದಲ್ಲಿ ಇಂಥ ಪರಿಸ್ಥಿಯನ್ನು ರೂಪಿಸುತ್ತೇವೆ.

'ಕರ್ನಾಟಕಕ್ಕೆ ನೀರಿಲ್ಲ, ನಮಗೆಲ್ಲಿಂದ ಕೊಡ್ತಾರೆ..' ಸೋಶಿಯಲ್‌ ಮೀಡಿಯಾದಲ್ಲಿ ಮತ್ತೆ ವೈರಲ್‌ ಆದ ನಟ ಸಿಂಬು ಹೇಳಿಕೆ!

ಕರ್ನಾಟಕದ ಅದರಲ್ಲೂ ಕಾವೇರಿ ಸಂಬಂಧವಾಗಿ ಪೂರ್ಣಚಂದ್ರ ತೇಜಸ್ವಿ ಅವರು ಈ ಮಾತುಗಳನ್ನು ಆಡಿದ್ದರು. ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳು ಪ್ರಾದೇಶಿಕ ಪಕ್ಷಗಳು ಸೂಕ್ತ ಎಂದಿದ್ದರು. ಅದಲ್ಲದೆ, ಕಾವೇರಿ ನದಿ ನೀರಿನ ಮೇಲೆ ಮೊದಲ ಹಕ್ಕು ಎಂದೆಂದಿಗೂ ಕರ್ನಾಟಕದ್ದೇ ಆಗಿರುತ್ತದೆ. ನಮ್ಮ ಅಗತ್ಯವನ್ನು ಪೂರೈಸಿದ ಬಳಿಕವೇ ಇತರರಿಗೆ ನೆರವಾಗಬೇಕು ಎಂದು ಹೇಳಿದ್ದರು. ಆದರೆ, ಇಂದು ಆಗುತ್ತಿರುವುದು ಎಲ್ಲಾ ಉಲ್ಟಾ, ಕಾವೇರಿ ನದಿ ನೀರಿನಲ್ಲಿ ತಮಿಳುನಾಡಿಗಿಂತ ಕಡಿಮೆ ಪಾಲು ಕರ್ನಾಟಕಕ್ಕೆ ಸಿಗುತ್ತಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ಸ್ಥಿತಿಯಲಿಲ್ಲ: CWRC ಮುಂದೆ ಕರ್ನಾಟಕ ವಾದ

Follow Us:
Download App:
  • android
  • ios