ಮುಂದುವರೆದ ಆರೋಗ್ಯ ಇಲಾಕೆ ಎಡವಟ್ಟು ಸಂದೇಶ ಕಂಡು ಗಾಬರಿಯಾದ ಕುಟುಂಬಸ್ಥರು ಮೃತ ವೃದ್ಧೆಗೆ ಲಸಿಕೆ, ಹೆಚ್ಚಾಗುತ್ತಿದೆ ಪ್ರಕರಣ
ಬೆಂಗಳೂರು(ಫೆ.03): ಏಳು ತಿಂಗಳ ಹಿಂದೆ ಮೃತಪಟ್ಟಿದ್ದ ವೃದ್ಧೆಯೊಬ್ಬರು ಮಂಗಳವಾರ ಕೊರೋನಾ ಲಸಿಕೆ(Covid vaccine) ಎರಡನೇ ಡೋಸ್ ಪಡೆದ ಸಂದೇಶ ಮೃತರ ಕುಟುಂಬಸ್ಥರ ಮೊಬೈಲ್‌ಗೆ ಬಂದಿದೆ. ಇನ್ನು ಈ ಸಂದೇಶ ನೋಡಿ ಕುಟುಂಬಸ್ಥರು(Family) ಗಾಬರಿಯಾಗಿದ್ದಾರೆ.
ಕೊರೋನಾ ಲಸಿಕೆ ನೋಂದಣಿ ವಿಚಾರದಲ್ಲಿ ಆರೋಗ್ಯ(Health Department) ಇಲಾಕೆ ಎಡವಟ್ಟು ಮುಂದುವರೆದಿದ್ದು, ಕೊರೋನಾ ಲಸಿಕೆ ಪಡೆಯದವರಿಗೂ ಲಸಿಕೆ ಪಡೆದಿದ್ದೀರಾ ಎಂಬ ಸಂದೇಶ(SMS) ಬರುತ್ತಲೇ ಇವೆ. ಸದ್ಯ ನಗರದ ಪೀಣ್ಯ ಬಳಿಯ ಮಂಜುನಾಥ ನಗರದ ನಿವಾಸಿ 70 ವರ್ಷದ ಲಕ್ಷ್ಮೇದೇವಿ ಎಂಬುವವರು ಜೂನ್ ತಿಂಗಳಲ್ಲಿ ಮೃತಪಟ್ಟಿದ್ದಾರೆ. ಅದಕ್ಕೂ ಎರಡು ತಿಂಗಳ (ಮಾಚ್‌ರ್ 30ಕ್ಕೆ) ಮುನ್ನ ಮೊದಲ ಡೋಸ್(Dose) ಲಸಿಕೆ ಪಡೆದಿದ್ದರು. ಇದೀಗ ಅವರ ಮನೆಯವರ ಮೊಬೈಲ್ ನಂಬರ್‌ಗೆ ‘ಲಕ್ಷ್ಮೇದೇವಿಯವ 2ನೇ ಡೋಸ್ ಪೂರ್ಣಗೊಂಡಿದೆ. ಪ್ರಮಾಣ ಪತ್ರಕ್ಕಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ’ ಎಂಬ ಸಂದೇಶ ಬಂದಿದೆ. ಇದನ್ನು ಕಂಡು ಕುಟುಂಬಸ್ಥರು ಒಂದು ಕ್ಷಣ ಗಾಬರಿಯಾಗಿದ್ದಾರೆ.
Vaccination: ಮಗಳ ಸಾವಿನ ಬಳಿಕ 1000 ಕೋಟಿ ಮೊತ್ತ ಪರಿಹಾರ ಕೇಳಿದ ಅಪ್ಪ
ಸಂದೇಶ ಬರುವುದಕ್ಕೂ ಒಂದು ದಿನ ಮುಂಚೆ ಬಿಬಿಎಂಪಿಯಿಂದ(BBMP) ದೂರವಾಣಿ ಕರೆ ಮಾಡಿ ಲಕ್ಷ್ಮೇದೇವಿಯವರ ಎರಡನೇ ಡೋಸ್ ಪೂರ್ಣಗೊಂಡಿದೆಯೇ ಎಂದು ವಿಚಾರಿಸಲಾಗಿತ್ತು. ಆ ವೇಳೆ ಮೃತರ ಮಗ ರಘುಕುಮಾರ್ ಎಂಬುವವರು ಮಾತನಾಡಿ ತಾಯಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದರು. ಆದರೂ, ಮರುದಿನ ಮೊಬೈಲ್ ಸಂದೇಶ ಬಂದಿದೆ.
ಕಳೆದ ಎರಡು ತಿಂಗಳಿಂದ ಒಂದು ಡೋಸ್ ಪಡೆದು ಎರಡನೇ ಡೋಸ್ ಬಾಕಿ ಉಳಿಸಿಕೊಂಡವರಿಗೆ, ಲಸಿಕೆ ಪಡೆಯದಿದ್ದರೂ ಎರಡನೇ ಡೋಸ್ ಪಡೆದಿರುವುದಾಗಿ ಸಂದೇಶ ಬರುತ್ತಿದೆ. ಲಸಿಕೆ ಕೇಂದ್ರಕ್ಕೆ ತೆರಳಿ ತಿದ್ದುಪಡಿ ಮಾಡಿಸಿಕೊಂಡು ಆನಂತರ ಮತ್ತೆ ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆ ಗುರಿ ಸಾಧನೆಗೆ ಅಧಿಕಾರಿಗಳು ಒತ್ತಡ ಹಾಕುತ್ತಿದ್ದು, ಹೀಗಾಗಿ ಲಸಿಕೆ ಬಾಕಿ ಉಳಿದರು ಕೂಡಾ ಲಸಿಕೆ ಪಡೆದಿದ್ದಾರೆ ಎಂದು ಪರಿಗಣಿಸಿ ಲೆಕ್ಕ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಸತ್ತವರಿಗೆ ಲಸಿಕೆ ನೀಡಿದ ಹಲವು ಘಟನೆಗಳು ವರದಿಯಾಗಿದೆ.
Covid Vaccine ಸತ್ತ ವ್ಯಕ್ತಿಗೆ ಕೊರೋನಾ 2ನೇ ಡೋಸ್, ಸರ್ಟಿಫಿಕೆಟ್ ನೋಡಿ ಕುಟುಂಬಸ್ಥರು ಶಾಕ್
ಸತ್ತವರಿಗೂ ಲಸಿಕೆ: ಕನ್ನಡಪ್ರಭ ವರದಿ ಸಂಚಲನ
ಲಸಿಕಾಕರಣ ಗುರಿ ಸಾಧನೆಗಾಗಿಯೇನೋ ಎಂಬಂತೆ ಮೃತಪಟ್ಟವರ ಹೆಸರಲ್ಲೂ ಲಸಿಕೆ ಹಾಕಿದ, ಕೋವಿಡ್ ಟೆಸ್ಟ್ ನಡೆಸಿದ ಪ್ರಕರಣ ಕುರಿತ ‘ಕನ್ನಡಪ್ರಭ’ ರಿಯಾಲಿಟಿ ಚೆಕ್ ವರದಿ ತೀವ್ರ ಸಂಚಲನ ಮೂಡಿಸಿದೆ. ಈ ವರದಿ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ್ದರೆ, ಯಾದಗಿರಿ ಜಿಲ್ಲೆಯಲ್ಲಿನ ಲಸಿಕಾಕರಣ ಗುರಿ ಸಾಧನೆಯ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ.
ಈ ವರದಿಯಿಂದ ತೀವ್ರ ಮಜುಗರಕ್ಕೀಡಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಆರಂಭದಲ್ಲಿ ಇದೊಂದು ಹಳೆಯ ಪ್ರಕರಣ ಎಂಬಂತೆ ಸಮಜಾಯಿಷಿ ನೀಡಲು ಮುಂದಾಗಿದ್ದರು. ಆದರೆ ನಂತರ ಜಿಲ್ಲಾಧಿಕಾರಿ ಸೇರಿ ಬೆಂಗಳೂರು ಮಟ್ಟದ ಹಿರಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದಿದ್ದು, ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಡಾಟಾ ಎಂಟ್ರಿ ಮಾಡುವ ಆಪರೇಟರ್‌ಗಳು ಇಂಥ ಪ್ರಮಾದ ಮಾಡಿರಬಹುದು. ಹೊರಗುತ್ತಿಗೆ ಆಧಾರದ ಮೇಲೆ ಅವರೆಲ್ಲರೂ ಕಾರ್ಯನಿರ್ವಹಿಸುತ್ತಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಡಾ.ಇಂದುಮತಿ ಕಾಮಶೆಟ್ಟಿಸಮುಜಾಯಿಶಿ ನೀಡಲು ಯತ್ನಿಸಿದ್ದಾರೆ. ಈ ಮಧ್ಯೆ ಮೃತಪಟ್ಟರೂ ಕೋವಿಡ್ ಲಸಿಕೆ ಪಡೆದ ಮೊಬೈಲ್ ಸಂದೇಶ ಪಡೆದಿರುವ ಮುರಾರಿರಾವ್ ಅವರ ಪುತ್ರ ವಿಶಾಲ್‌ನನ್ನು ಸಂಪರ್ಕಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಘಟನೆ ಬಗ್ಗೆ ಬೇಸರಿಸಿ, ಪರಿಹಾರ ನೀಡುವುದಾಗಿ ಹೇಳಿದ್ದಾರೆಂದು ವಿಶಾಲ್ ತಿಳಿಸಿದ್ದಾರೆ.
