ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ.  

ಬೆಂಗಳೂರು : ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ. 

ಜನ್ಮದಿನದ ಕ್ಯಾಲೆಂಡರ್‌ನಲ್ಲಿ ಆ ದಿನ ಯಾರ ಹೆಸರಿದೆಯೋ ಅವರ ಹೆಸರಿನಲ್ಲಿ ಜಯಂತಿಯನ್ನು ಆಚರಿಸಲಾಗುತ್ತದೆ. ಜಯಂತಿ ಆಚರಿಸುವ ವ್ಯಕ್ತಿಗಳ ಸಾಧನೆಯ ಕುರಿತು ವಿಧಾನಸೌಧದಲ್ಲಿ 5 ನಿಮಿಷ ಭಾಷಣ ಮಾಡಲು ಪ್ರತಿನಿಧಿಯೊಬ್ಬರನ್ನು ಸರ್ಕಾರ ನೇಮಿಸಲಿದೆ. 

ಇದರಿಂದಾಗಿ ಯಾವುದೇ ಜಯಂತಿಯ ವಿವಾದ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ಜಯಂತಿ ಆಚರಣೆಗೆ ಅರ್ಜಿ ಆಹ್ವಾನಿಸಲೂ ಸರ್ಕಾರ ಚಿಂತನೆ ನಡೆಸಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.